kn_tw/bible/other/wheat.md

2.5 KiB

ಗೋಧಿ

ಪದದ ಅರ್ಥವಿವರಣೆ:

ಗೋಧಿ ಎನ್ನುವುದು ಆಹಾರಕ್ಕಾಗಿ ಜನರು ಬೆಳೆಸಿಕೊಳ್ಳುವ ಒಂದು ರೀತಿಯಾದ ಧಾನ್ಯವಾಗಿರುತ್ತದೆ. “ಧಾನ್ಯಗಳು” ಅಥವಾ “ಬೀಜಗಳು” ಎಂದು ಸತ್ಯವೇದವು ದಾಖಲಿಸಿದಾಗ, ಇದು ಅನೇಕಬಾರಿ ಗೋಧಿ ಧಾನ್ಯಗಳ ಅಥವಾ ಕಾಳುಗಳ ಕುರಿತಾಗಿ ಮಾತನಾಡುತ್ತಿದೆ ಎಂದರ್ಥ.

  • ಗೋಧಿ ಕಾಳುಗಳು ಅಥವಾ ಧಾನ್ಯಗಳು ಗೋಧಿ ಗಿಡದ ಮೇಲ್ಭಾಗದಲ್ಲಿ ಬೆಳೆಯುತ್ತವೆ.
  • ಗೋಧಿ ಬೆಳೆ ಬಂದ ನಂತರ, ಇದನ್ನು ತುಳಿಸಿದನಂತರ ಸೊಪ್ಪಿನಿಂದ ಧಾನ್ಯವನ್ನು ಬೇರ್ಪಡಿಸುತ್ತಾರೆ. ಗೋಧಿ ಸೊಪ್ಪನ್ನು “ಹುಲ್ಲು” ಎಂದೂ ಕರೆಯುತ್ತಾರೆ ಮತ್ತು ಇದನ್ನು ಪ್ರಾಣಿಗಳು ಮಲಗುವುದಕ್ಕೆ ನೆಲದ ಮೇಲೆ ಸಂಗ್ರಹಿಸಿ ಇಡುತ್ತಿರುತ್ತಾರೆ.
  • ತುಳಿಸಿದನಂತರ, ತೂರುವುದರ ಮೂಲಕ ಧಾನ್ಯದ ಕಾಳಿನ ಸುತ್ತಲಿರುವ ಸೊಪ್ಪನ್ನು ಧಾನ್ಯದಿಂದ ಬೇರ್ಪಡಿಸಿ, ಹೊರಕ್ಕೆ ಎಸೆಯುತ್ತಾರೆ.
  • ಜನರು ಗೋಧಿಯನ್ನು ಹಿಟ್ಟಾಗಿ ಮಾಡಿಕೊಂಡು, ಅದರಿಂದ ರೊಟ್ಟಿಗಳನ್ನು ತಯಾರಿಸಿಕೊಳ್ಳುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಜವೆಗೋಧಿ, ಸೊಪ್ಪು, ಧಾನ್ಯ, ಬೀಜ, ತುಳಿಸಿಬಿಡು, ತೂರು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1250, H2406, G4621