kn_tw/bible/other/seed.md

5.4 KiB

ಬೀಜ, ವೀರ್ಯ

ಪದದ ಅರ್ಥವಿವರಣೆ:

"ಬೀಜ" ಎನ್ನುವುದು ಒಂದು ಸಸ್ಯದ ಭಾಗವಾಗಿದ್ದು, ಅದೇ ರೀತಿಯ ಹೆಚ್ಚಿನ ಸಸ್ಯಗಳನ್ನು ಸಂತಾನೋತ್ಪತ್ತಿ ಮಾಡಲು ನೆಲದಲ್ಲಿ ನೆಡಲಾಗುತ್ತದೆ. ಅದಾಗ್ಯೂ, ಸತ್ಯವೇದದಲ್ಲಿ "ಬೀಜ" ಎಂಬ ಪದವನ್ನು ಹಲವಾರು ವಿಭಿನ್ನ ವಿಷಯಗಳನ್ನು ಅರ್ಥೈಸಲು ಸಾಂಕೇತಿಕವಾಗಿ ಬಳಸಲಾಗುತ್ತದೆ.

  • “ಬೀಜ” ಎನ್ನುವ ಪದವು ಒಬ್ಬ ಸ್ತ್ರೀಯಲ್ಲಿ ಶಿಶುವು ಉಂಟಾಗಿ ಬೆಳೆಯುವುದಕ್ಕೆ ಆ ಸ್ತ್ರೀಯ ಕಣಗಳೊಂದಿಗೆ ಬೆರೆತುಗೊಳ್ಳುವ ಮನುಷ್ಯನಲ್ಲಿರುವ ಚಿಕ್ಕ ಕಣವನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಮತ್ತು ಸವ್ಯೋಕ್ತಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಈ ಕಣಗಳ ಸಂಗ್ರಹವನ್ನು ವೀರ್ಯ ಎಂದು ಕರೆಯುತ್ತಾರೆ.
  • ಇದಕ್ಕೆ ಸಂಬಂಧಪಟ್ಟು “ಬೀಜ” ಎನ್ನುವ ಪದವನ್ನು ಒಬ್ಬ ವ್ಯಕ್ತಿಯ ಸಂತಾನವನ್ನು ಅಥವಾ ಪೀಳಿಗೆಯನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
  • ಈ ಪದಕ್ಕೆ ಅನೇಕಬಾರಿ ಬಹುವಚನದ ಅರ್ಥವನ್ನು ಹೊಂದಿರುತ್ತದೆ, ಒಂದು ಬೀಜದ ಕಾಳಿಗಿಂತ ಹೆಚ್ಚು ಕಾಳುಗಳನ್ನು ಅಥವಾ ಒಂದು ಸಂತಾನಕ್ಕಿಂತ ಹೆಚ್ಚಿನ ಸಂತಾನವನ್ನು ಸೂಚಿಸುತ್ತದೆ.
  • ರೈತನು ಬೀಜಗಳನ್ನು ಬಿತ್ತುವ ಸಾಮ್ಯದಲ್ಲಿ, ಯೇಸು ಹೇಳಿದ ಸಾಮ್ಯದಲ್ಲಿನ ಬೀಜಗಳನ್ನು ದೇವರ ವಾಕ್ಯಕ್ಕೆ ಹೋಲಿಸಿದ್ದಾನೆ, ಒಳ್ಳೇಯ ಆತ್ಮೀಯಕವಾದ ಫಲವನ್ನು ಉತ್ಪಾದಿಸುವ ಕ್ರಮದಲ್ಲಿ ಜನರ ಹೃದಯಗಳಲ್ಲಿ ಬಿತ್ತಲ್ಪಟ್ಟಿರುತ್ತದೆ.
  • “ಬೀಜ” ಎನ್ನುವ ಪದವನ್ನು ದೇವರ ವಾಕ್ಯವನ್ನು ಸೂಚಿಸುತ್ತಾ ಅಪೊಸ್ತಲನಾದ ಪೌಲನು ಉಪಯೋಗಿಸಿದ್ದಾನೆ.

ಅನುವಾದ ಸಲಹೆಗಳು:

  • ನಿಜವಾದ ಬೀಜವನ್ನು ಸೂಚಿಸಿದಾಗ, ರೈತರು ತಮ್ಮ ಹೊಲ ಗದ್ದೆಗಳಲ್ಲಿ ಬಿತ್ತುವುದಕ್ಕೆ ಅನುವಾದ ಭಾಷೆಯಲ್ಲಿ ಉಪಯೋಗಿಸುವ “ಬೀಜ ಅಥವಾ ಕಾಳು” ಎನ್ನುವ ಪದವನ್ನು ಉಪಯೋಗಿಸುವುದು ಉತ್ತಮವಾದ ವಿಷಯ.
  • ದೇವರ ವಾಕ್ಯವನ್ನು ಅಲಂಕಾರಿಕವಾಗಿ ಸೂಚಿಸುವ ಸಂದರ್ಭಗಳಲ್ಲಿ ಅಕ್ಷರಾರ್ಥವಾದ ಈ ಪದವನ್ನು ಉಪಯೋಗಿಸಬಹುದು.
  • ಅಲಂಕಾರಿಕ ಉಪಯೋಗದಲ್ಲಿ ಈ ಪದವು ಒಂದೇ ಕುಟುಂಬದ ಸಂತಾನವಾಗಿರುವ ಜನರನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ., ಈ ಸಂದರ್ಭಕ್ಕೆ ಬೀಜ ಎನ್ನುವ ಪದವನ್ನು ಉಪಯೋಗಿಸುವುದಕ್ಕೆ ಬದಲಾಗಿ “ವಂಶಸ್ಥರು” ಅಥವಾ “ಸಂತಾನದವರು” ಎನ್ನುವ ಪದಗಳನ್ನು ಉಪಯೋಗಿಸುವುದು ತುಂಬಾ ಸ್ಪಷ್ಟವಾಗಿರುತ್ತದೆ. ಕೆಲವೊಂದು ಭಾಷೆಗಳಲ್ಲಿ “ಮಕ್ಕಳು ಮತ್ತು ಮೊಮ್ಮೊಕ್ಕಳು” ಎಂದು ಅರ್ಥ ಬರುವ ಪದಗಳನ್ನು ಉಪಯೋಗಿಸುತ್ತಿರಬಹುದು.
  • ಪುರುಷ ಅಥವಾ ಸ್ತ್ರೀಯಳ “ಬೀಜ” ಎಂದು ಹೇಳುವಾಗ, ಜನರನ್ನು ಮುಜುಗರ ಮಾಡದ ಅಥವಾ ಸಮರ್ಥಿಸಿಕೊಳ್ಳದ ವಿಧಾನದಲ್ಲಿ ಇದನ್ನು ಯಾವರೀತಿ ವ್ಯಕ್ತಪಡಿಸಲಾಗುತ್ತಿದೆ ಎಂದು ಪರಿಗಣಿಸಿರಿ. (ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ವಂಶಸ್ಥರು, ಸಂತತಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2232, H2233, H2234, H3610, H6507, G4615, G4687, G4690, G4701, G4703