4.2 KiB
4.2 KiB
ವಂಶಾನುಗತವಾಗು, ಸಂತಾನದವರು, ಸಂತಾನದರಾಗಿದ್ದರು, ಸಂತಾನವು, ವಂಶಸ್ಥ, ವಂಶಸ್ಥರು
ಪದದ ಅರ್ಥವಿವರಣೆ:
“ವಂಶಸ್ಥ” ಎಂದರೆ ಚರಿತ್ರೆಯಲ್ಲಿ ಯಾರಾದರೊಬ್ಬರ ರಕ್ತ ಸಂಬಂಧಿಯಾದ ವ್ಯಕ್ತಿಯನ್ನು ಸೂಚಿಸುತ್ತದೆ.
- ಉದಾಹರಣೆಗೆ, ಅಬ್ರಹಾಮನು ನೋಹನ ವಂಶಸ್ಥ.
- ಒಬ್ಬ ವ್ಯಕ್ತಿಯ ವಂಶಸ್ಥರು ಆತನ ಮಕ್ಕಳು, ಮೊಮ್ಮೊಕ್ಕಳು, ಮರಿ ಮೊಮ್ಮೊಕ್ಕಳು ಆಗಿರುತ್ತಾರೆ. ಯಾಕೋಬಿನ ವಂಶಸ್ಥರು ಇಸ್ರಾಯೇಲ್ ಹನ್ನೆರಡು ಕುಲದವರು.
- “ಇವರ ವಂಶಸ್ಥನು” ಎನ್ನುವ ಮಾತನ್ನು ಇನ್ನೊಂದು ವಿಧಾನದಲ್ಲಿ ಹೇಳಬೇಕೆಂದರೆ ಅಬ್ರಹಾಮನು ನೋಹನ ವಂಶಸ್ಥ ಎಂದು ಹೇಳುವ ಹಾಗೆ “ಅವರಿಂದ ಬಂದ ವಂಶಸ್ಥ” ಎಂದು ಹೇಳಬಹುದು. ಇದನ್ನು “ಕುಟುಂಬದ ಸಾಲಿನಿಂದ” ಬಂದವನು ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಪೂರ್ವಿಕರು, ಯಾಕೋಬ, ನೋಹ, ಇಸ್ರಾಯೇಲ್ ಹನ್ನೆರಡು ಕುಲದವರು)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 02:09 “ಸ್ತ್ರೀಯ ___ ಸಂತಾನವು ___ ನಿನ್ನ ತಲೆಯನ್ನು ಜಜ್ಜುವುದು, ನೀನು ಅವನ ಹಿಮ್ಮಡಿಯನ್ನು ಕಚ್ಚುವಿ.”
- 04:09 ನಾನು ನಿನ್ನ ___ ಸಂತಾನದವರಿಗೆ ___ ಕಾನಾನ್ ದೇಶವನ್ನು ಕೊಡುವೆನು.
- 05:10 “ಆಕಾಶದಲ್ಲಿ ನಕ್ಷತ್ರಗಳಿಗಿಂತ ಹೆಚ್ಚಾಗಿ ನಿನ್ನ __ ಸಂತಾನದವರು __ ಇರುತ್ತಾರೆ.”
- 17:07 ನಿನ್ನ ಕುಟುಂಬದೊಳಗಿಂದ ಬರುವ ಒಬ್ಬರು ಯಾವಾಗಲೂ ಇಸ್ರಾಯೇಲ್ ರಾಜ್ಯವನ್ನು ಆಳುತ್ತಾರೆ, ಮತ್ತು ನಿನ್ನ ___ ಸಂತಾನದವರಲ್ಲಿ ___ ಒಬ್ಬರು ಮೆಸ್ಸೀಯನಾಗಿ ಬರುತ್ತಾನೆ!”
- 18:13 ಯೂದಾ ಅರಸರೆಲ್ಲರೂ ದಾವೀದನ __ ಸಂತಾನದವರಾಗಿರುತ್ತಾರೆ __.
- 21:04 ಮೆಸ್ಸೀಯನು ದಾವೀದನ ಸ್ವಂತ ___ ಸಂತಾನದಲ್ಲಿ ___ ಒಬ್ಬನಾಗಿರುತ್ತಾನೆಂದು ದೇವರು ಅರಸನಾದ ದಾವೀದನಿಗೆ ವಾಗ್ಧಾನ ಮಾಡಿರುತ್ತಾನೆ.
- 48:13 ಮೆಸ್ಸೀಯನು ದಾವೀದನ ಸ್ವಂತ ___ ಸಂತಾನದಲ್ಲಿ ___ ಒಬ್ಬನಾಗಿರುತ್ತಾನೆಂದು ದೇವರು ದಾವೀದನಿಗೆ ವಾಗ್ಧಾನ ಮಾಡಿರುತ್ತಾನೆ. ಮೆಸ್ಸೀಯನಾದ ಯೇಸುವು ದಾವೀದನ ___ ‘ಸಂತಾನದಲ್ಲಿ ___ ವಿಶೇಷತೆಯನ್ನು ಹೊಂದಿರುತ್ತಾನೆ.
ಪದ ಡೇಟಾ:
- Strong's: H319, H1004, H1121, H1323, H1755, H2232, H2233, H3205, H3211, H3318, H3409, H4294, H5220, H6849, H7611, H8435, G1074, G1085, G4690