kn_tw/bible/other/father.md

5.2 KiB
Raw Permalink Blame History

ಪೂರ್ವಜ, ತಂದೆ, ತಂದೆಯರು, ಅನುವಂಶಿಕ ತಂದೆ, ತಾತ

ಪದದ ಅರ್ಥವಿವರಣೆ:

“ತಂದೆ” ಎನ್ನುವ ಪದವು ಒಬ್ಬ ವ್ಯಕ್ತಿಯ ಪುರುಷ ಪೋಷಕರನ್ನು ಸೂಚಿಸುತ್ತದೆ.

  • “ತಂದೆ” ಮತ್ತು “ಅನುವಂಶಿಕ ತಂದೆ” ಎನ್ನುವ ಪದಗಳು ಒಬ್ಬ ವ್ಯಕ್ತಿಯ ಅಥವಾ ಒಂದು ಜನರ ಗುಂಪಿನ ಪುರುಷ ಪೂರ್ವಜರನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ಇದನ್ನು “ಪೂರ್ವಜ” ಅಥವಾ “ಅನುವಂಶಿಕ ತಂದೆ” ಎಂದೂ ಅನುವಾದ ಮಾಡಬಹುದು.
  • “ಪಿತ” ಎನ್ನುವ ಮಾತು ಎನಾದರೊಂದಕ್ಕೆ ಆಧಾರವಾಗಿರುವ ಅಥವಾ ಒಂದು ವರ್ಗದ ಜನರಿಗೆ ನಾಯಕನಾಗಿರುವ ಒಬ್ಬ ವ್ಯಕ್ತಿಯನ್ನು ಅಲಂಕಾರಿಕವಾಗಿಯೂ ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ. ಉದಾಹರಣೆಗೆ, ಆದಿಕಾಂಡ 4ನೇ ಅಧ್ಯಾಯದಲ್ಲಿ “ಗುಡಾರಗಳಲ್ಲಿ ವಾಸಿಸುವರ ಮೂಲ ಪುರುಷನು” ಎಂದು ಹೇಳಲಾಗಿದೆ, ಇದಕ್ಕೆ “ಗುಡಾರಗಳಲ್ಲಿ ಮೊಟ್ಟಮೊದಲು ನಿವಾಸ ಮಾಡಿದ ಜನರಿಗೆ ಮೊಟ್ಟ ಮೊದಲ ಕುಲದ ನಾಯಕನು” ಎಂದರ್ಥ.
  • ಅಪೊಸ್ತಲನಾದ ಪೌಲನು ಸುವಾರ್ತೆ ಸಾರುವುದರ ಮೂಲಕ ಕ್ರೈಸ್ತರಾಗುವುದಕ್ಕೆ ಸಹಾಯ ಮಾಡಿದ ಜನರಿಗೆಲ್ಲರಿಗೆ ಅಲಂಕಾರಿಕ ಭಾಷೆಯಲ್ಲಿ ತನ್ನನ್ನು “ತಂದೆ” ಎಂದು ಕರೆದುಕೊಂಡನು.

ಅನುವಾದ ಸಲಹೆಗಳು

  • ತಂದೆ ಮತ್ತು ತನ್ನ ಸ್ವಂತ ಮಗನ ಕುರಿತಾಗಿ ಮಾತನಾಡುವಾಗ, ಅನುವಾದ ಭಾಷೆಯಲ್ಲಿ ತಂದೆಯನ್ನು ಸೂಚಿಸುವ ಬೇರೊಂದು ಪದವನ್ನು ಉಪಯೋಗಿಸಿ ಅನುವಾದ ಮಾಡಬಹುದು.
  • “ತಂದೆಯಾದ ದೇವರು” ಎನ್ನುವ ಮಾತನ್ನು “ತಂದೆ”ಗೆ ಉಪಯೋಗಿಸುವ ಸಹಜವಾದ, ಸಾಧಾರಣವಾದ ಪದವನ್ನು ಉಪಯೋಗಿಸಿ ಅನುವಾದ ಮಾಡಬಹುದು.
  • ಪಿತೃಗಳನ್ನು ಸೂಚಿಸಿದಾಗ, ಈ ಪದವನ್ನು “ಪೂರ್ವಜರು” ಅಥವಾ “ಅನುವಂಶಿಕ ತಂದೆಗಳು” ಎಂದು ಅನುವಾದ ಮಾಡಬಹುದು.
  • ಕ್ರಿಸ್ತನಲ್ಲಿರುವ ವಿಶ್ವಾಸಿಗಳೆಲ್ಲರಿಗೆ ತಂದೆಯನ್ನಾಗಿ ಪೌಲನು ತನ್ನನ್ನು ತಾನು ಸೂಚಿಸಿಕೊಂಡಾಗ, ಇದನ್ನು “ಆತ್ಮೀಯಕವಾದ ತಂದೆ” ಅಥವಾ “ಕ್ರಿಸ್ತನಲ್ಲಿ ತಂದೆ” ಎಂದೂ ಅನುವಾದ ಮಾಡಬಹುದು.
  • “ತಂದೆ” ಎನ್ನುವ ಪದವು ಕೆಲವೊಂದುಬಾರಿ “ಕುಲದ ನಾಯಕ” ಎಂದೂ ಅನುವಾದ ಮಾಡಬಹುದು.
  • “ಸುಳ್ಳಿನ ತಂದೆ” ಎನ್ನುವ ಮಾತಿಗೆ “ಎಲ್ಲಾ ಸುಳ್ಳುಗಳಿಗೆ ಅವನೇ ಆಧಾರ” ಅಥವಾ “ಅವನಿಂದಲೇ ಎಲ್ಲಾ ಸುಳ್ಳುಗಳು ಬರುತ್ತವೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ತಂದೆಯಾದ ದೇವರು, ಮಗ, ದೇವರ ಮಗ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strongs: H1, H2, H25, H369, H539, H1121, H1730, H1733, H2524, H3205, H3490, H4940, H5971, H7223, G540, G1080, G3737, G3962, G3964, G3966, G3967, G3970, G3971, G3995, G4245, G4269, G4613