7.7 KiB
7.7 KiB
ದೇವರ ಮಗ, ಮಗ
ಸತ್ಯಾಂಶಗಳು:
“ದೇವರ ಮಗ” ಎನ್ನುವ ಮಾತು ಮನುಷ್ಯನಾಗಿ ಈ ಲೋಕಕ್ಕೆ ಬಂದಿರುವ ದೇವರ ವಾಕ್ಯವಾಗಿರುವ ಯೇಸುವನ್ನು ಸೂಚಿಸಿದನು. ಈತನು ಅನೇಕಬಾರಿ “ಒಬ್ಬನೇ ಮಗ” ಎಂಬುದಾಗಿಯೂ ಸೂಚಿಸಲ್ಪಟ್ಟಿದ್ದಾನೆ.
- ದೇವರ ಮಗನು ತಂದೆಯಾದ ದೇವರ ಹಾಗೆಯೇ ಒಂದೇ ಸ್ವಭಾವವನ್ನು ಹೊಂದಿರುತ್ತಾನೆ, ಮತ್ತು ಆತನು ಸಂಪೂರ್ಣವಾದ ದೇವರಾಗಿದ್ದಾನೆ.
- ತಂದೆಯಾದ ದೇವರು, ಮಗನಾದ ದೇವರು ಮತ್ತು ಪವಿತ್ರಾತ್ಮ ದೇವರು ಒಂದೇ ಮೂಲಭೂತವಾಗಿರುತ್ತಾರೆ.
- ಮನುಷ್ಯರ ಮಕ್ಕಳಂತೆಯಲ್ಲದೇ ದೇವರ ಮಗ ಯಾವಾಗಲೂ ಅಸ್ತಿತ್ವದಲ್ಲಿರುತ್ತಾನೆ.
- ಆದಿಯಲ್ಲಿ ತಂದೆ ಮತ್ತು ಪವಿತ್ರಾತ್ಮರವರೊಂದಿಗೆ ದೇವರ ಮಗ ಈ ಲೋಕವನ್ನು ಸೃಷ್ಟಿಸುವ ಸಂದರ್ಭದಲ್ಲಿದ್ದಾನೆ.
ಯಾಕಂದರೆ ಯೇಸು ದೇವರ ಮಗನಾಗಿದ್ದಾನೆ, ಆತನು ತನ್ನ ತಂದೆಯನ್ನು ಪ್ರೀತಿಸಿದ್ದಾನೆ ಮತ್ತು ಆತನಿಗೆ ವಿಧೇಯನಾಗಿದ್ದಾನೆ, ಮತ್ತು ತಂದೆಯು ಈತನನ್ನು ಪ್ರೀತಿಸಿದ್ದಾನೆ.
ಅನುವಾದ ಸಲಹೆಗಳು:
- “ದೇವರ ಮಗ” ಎನ್ನುವ ಪದವನ್ನು ಸರ್ವ ಸಾಧಾರಣವಾಗಿ ಮನುಷ್ಯನ ಮಗನನ್ನು ಸೂಚಿಸುವುದಕ್ಕೆ ಸ್ವಾಭಾವಿಕವಾಗಿ ಉಪಯೋಗಿಸುವ ಭಾಷೆಯ “ಮಗ” ಎನ್ನುವ ಪದದೊಂದಿಗೆ ಅನುವಾದ ಮಾಡುವುದು ಉತ್ತಮ.
- ಅನುವಾದ ಮಾಡಿರುವ “ಮಗ” ಎನ್ನುವ ಪದವು, “ತಂದೆ” ಎನ್ನುವ ಪದದೊಂದಿಗೆ ಸರಿಹೊಂದುವಂತೆ ನೋಡಿಕೊಳ್ಳಿರಿ, ಅನುವಾದ ಭಾಷೆಯಲ್ಲಿ ನಿಜವಾದ ತಂದೆ-ಮಗ ಸಂಬಂಧವನ್ನು ವ್ಯಕ್ತಪಡಿಸುವುದಕ್ಕೆ ಸ್ವಾಭಾವಿಕವಾಗಿ ಉಪಯೋಗಿಸುವ ಪದಗಳಾಗಿರುತ್ತವೆ.
- ಆಂಗ್ಲ ಭಾಷೆಯಲ್ಲಿ “ಮಗ” ಎನ್ನುವ ಪದದಲ್ಲಿ ಮೊದಲನೇ ಅಕ್ಷರವನ್ನು ದೊಡ್ಡದಾಗಿ ಉಪಯೋಗಿಸಿದಾಗ, ಇದು ದೇವರ ಕುರಿತಾಗಿ ಮಾತನಾಡುತ್ತಿದೆಯೆಂದು ತಿಳಿಸುತ್ತದೆ.
- ಆಂಗ್ಲ ಭಾಷೆಯಲ್ಲಿ “ಮಗ” ಎನ್ನುವ ಪದದಲ್ಲಿ ಮೊದಲನೇ ಅಕ್ಷರವನ್ನು ಉಪಯೋಗಿಸಿದಾಗ, ಆ ಪದವು “ದೇವರ ಮಗ” ಎಂಬುದಾಗಿ ಸೂಚಿಸುತ್ತದೆ, ವಿಶೇಷವಾಗಿ ಇದು “ತಂದೆ” ಎಂದು ಉಪಯೋಗಿಸಿದ ಸಂದರ್ಭದಲ್ಲಿಯೂ ಇದು ಕಾಣಿಸಿಕೊಳ್ಳುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ಪೂರ್ವಜ, ದೇವರು, ತಂದೆಯಾದ ದೇವರು, ಪವಿತ್ರಾತ್ಮ, ಯೇಸು, ಮಗ, ದೇವರ ಮಕ್ಕಳು)
ಸತ್ಯವೇದದ ಅನುಬಂಧ ವಾಕ್ಯಗಳು:
- 1 ಯೋಹಾನ.04:10
- ಅಪೊ.ಕೃತ್ಯ.09:20
- ಕೊಲೊಸ್ಸ.01:17
- ಗಲಾತ್ಯ.02:20
- ಇಬ್ರಿ.04:14
- ಯೋಹಾನ.03:18
- ಲೂಕ.10:22
- ಮತ್ತಾಯ.11:27
- ಪ್ರಕ.02:18
- ರೋಮಾ.08:29
ಸತ್ಯವೇದ ಕತೆಗಳಿಂದ ಉದಾಹರಣೆಗಳು:
- 22:05 “ಪವಿತ್ರಾತ್ಮನು ನಿನ್ನ ಮೇಲಕ್ಕೆ ಬರುವನು, ಮತ್ತು ದೇವರ ಶಕ್ತಿಯು ನಿನ್ನನ್ನು ಆವರಿಸುವುದು” ಎಂದು ದೂತನು ಹೇಳಿದನು. ಇದರಿಂದ ಶಿಶುವು ಪರಿಶುದ್ಧನಾಗಿರುವನು, ದೇವರ __ ಮಗನಾಗಿರುವನು __.”
- 24:09 “ಪವಿತ್ರಾತ್ಮನು ಕೆಳಕ್ಕೆ ಇಳಿದು ಬರುವನು ಮತ್ತು ನೀನು ದೀಕ್ಷಾಸ್ನಾನ ಕೊಡುವ ವ್ಯಕ್ತಿಯ ಮೇಲಕ್ಕೆ ಬರುವನು, ಆ ವ್ಯಕ್ತಿ __ ದೇವರ ಮಗನಾಗಿರುತ್ತಾನೆ __” ಎಂದು ದೇವರು ಯೋಹಾನನಿಗೆ ಹೇಳಿದನು.
- 31:08 ಶಿಷ್ಯರು ಆಶ್ಚರ್ಯಪಟ್ಟರು. “ನಿಜವಾಗಿ ನೀನು __ ದೇವರ ಮಗ __ “ ಎಂದು ಆತನಿಗೆ ಹೇಳುತ್ತಾ ಅವರು ಯೇಸುವನ್ನು ಆರಾಧಿಸಿದರು.
- 37:05 “ಹೌದು, ಬೋಧಕನೆ! ನೀನು __ ದೇವರ ಮಗನಾಗಿರುವ __ ಮೆಸ್ಸೀಯನೆಂದು ನಾನು ನಂಬುತ್ತಿದ್ದೇನೆ” ಎಂದು ಮಾರ್ಥಳು ಉತ್ತರಿಸಿದಳು.
- 42:10 ಆದ್ದರಿಂದ ನೀವು ಹೋಗಿ, ಎಲ್ಲಾ ಜನರ ಗುಂಪುಗಳನ್ನು ಶಿಷ್ಯರನ್ನಾಗಿ ಮಾಡಿರಿ, ಅವರಿಗೆ ತಂದೆ, __ ಮಗ __, ಪವಿತ್ರಾತ್ಮ ಹೆಸರಿನಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ ಮತ್ತು ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಅವರಿಗೆ ಬೋಧಿಸಿ, ಅವುಗಳಿಗೆ ವಿಧೇಯರಾಗಬೇಕೆಂದು ಹೇಳಿರಿ.”
- 46:06 ಆ ಕ್ಷಣದಲ್ಲಿಯೇ, ಸೌಲನು ದಮಸ್ಕದಲ್ಲಿರುವ ಯೆಹೂದ್ಯರಿಗೆ “ಯೇಸು __ ದೇವರ ಮಗ __ “ ಎಂದು ಬೊಧಿಸಲು ಆರಂಭಿಸಿದನು!”
- 49:09 ಆದರೆ ದೇವರು ಈ ಲೋಕವನ್ನು ಎಷ್ಟೋ ಪ್ರೀತಿಸಿದನು, ತನ್ನ ಒಬ್ನೇ __ ಮಗನನ್ನು __ ಕೊಟ್ಟನು, ಆದ್ದರಿಂದ ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರು ತನ್ನ ಪಾಪಗಳಿಗೆ ಶಿಕ್ಷೆಯನ್ನು ಹೊಂದದೇ ಸದಾಕಾಲವೂ ದೇವರೊಂದಿಗೆ ಜೀವಿಸುವನು.
ಪದ ಡೇಟಾ:
- Strong's: H426, H430, H1121, H1247, G2316, G5207