kn_tw/bible/kt/god.md

12 KiB

ದೇವರು

ಸತ್ಯಾಂಶಗಳು:

ಸತ್ಯವೇದದಲ್ಲಿ “ದೇವರು” ಎಂಬ ಪದವು ವಿಶ್ವವನ್ನು ಶೂನ್ಯದಿಂದ ಸೃಷ್ಟಿಯನ್ನುಂಟು ಮಾಡಿದ ನಿತ್ಯನಾದವನನ್ನು ಸೂಚಿಸುತ್ತದೆ. ದೇವರು ತಂದೆ, ಮಗ ಮತ್ತು ಪವಿತ್ರಾತ್ಮರಾಗಿ ಅಸ್ತಿತ್ವದಲ್ಲಿದ್ದಾರೆ. ದೇವರ ವೈಯುಕ್ತಿಕ ಹೆಸರು “ಯೆಹೋವ” ಆಗಿರುತ್ತದೆ.

  • ದೇವರು ಯಾವಾಗಲೂ ಅಸ್ತಿತ್ವದಲ್ಲಿರುತ್ತಾರೆ; ಯಾವುದೂ ಅಸ್ತಿತ್ವದಲ್ಲಿರುವುದಕ್ಕೆ ಮುಂಚಿತವಾಗಿಯೇ ಆತನು ಅಸ್ತಿತ್ವದಲ್ಲಿದ್ದನು, ಮತ್ತು ಆತನು ಎಂದಿಗೂ ಎಂದೆಂದಿಗೂ ನಿರಂತರವಾಗಿ ಅಸ್ತಿತ್ವದಲ್ಲಿರುತ್ತಾನೆ.
  • ಈತನೇ ನಿಜವಾದ ದೇವರು ಮತ್ತು ಈ ವಿಶ್ವದಲ್ಲಿ ಪ್ರತಿಯೊಂದರ ಮೇಲೆ ಅಧಿಕಾರವನ್ನು ಹೊಂದಿರುವಾತನಾಗಿರುತ್ತಾನೆ.
  • ದೇವರು ಪರಿಪೂರ್ಣ ನೀತಿವಂತನು, ಅನಂತ ಜ್ಞಾನಿ, ಪರಿಶುದ್ಧನು, ಪಾಪರಹಿತನು, ನ್ಯಾಯವಂತನು, ಕರುಣೆಯುಳ್ಳವನು ಮತ್ತು ಪ್ರೀತಿಯುಳ್ಳವನು ಆಗಿರುತ್ತಾನೆ.
  • ಈತನು ಒಡಂಬಡಿಕೆಯನ್ನು ನೆರವೇರಿಸುವ ದೇವರು, ಆತನು ಮಾಡಿದ ವಾಗ್ಧಾನಗಳನ್ನು ನೆರವೇರಿಸುವಾತನು.
  • ದೇವರನ್ನು ಆರಾಧಿಸುವುದಕ್ಕಾಗಿಯೇ ಜನರು ಸೃಷ್ಟಿಸಲ್ಪಟ್ಟಿದ್ದಾರೆ ಮತ್ತು ಅವರು ಆತನನ್ನು ಮಾತ್ರವೇ ಆರಾಧನೆ ಮಾಡಬೇಕು.
  • ದೇವರು ತನ್ನ ಹೆಸರು “ಯೆಹೋವ (ಅಥವಾ ಯಾವ್ಹೆ)” ಎಂದು ಪ್ರಕಟಿಸಿದನು, ಇದಕ್ಕೆ “ಆತನಿದ್ದಾನೆ” ಅಥವಾ “ಇರುವಾತನು” ಅಥವಾ “(ಯಾವಾಗಲೂ) ಅಸ್ತಿತ್ವದಲ್ಲಿರುವಾತನು” ಎಂದರ್ಥ.
  • ಸತ್ಯವೇದವು ಸುಳ್ಳು “ದೇವರಗಳ” ಕುರಿತಾಗಿಯೂ ಬೋಧಿಸುತ್ತದೆ, ಇದರಲ್ಲಿ ಜನರು ತಪ್ಪಾಗಿ ಆರಾಧಿಸುವ ವಿಗ್ರಹಗಳು ಒಳಗೊಂಡಿರುತ್ತವೆ.

ಅನುವಾದ ಸಲಹೆಗಳು:

  • “ದೇವರು” ಎನ್ನುವ ಪದವನ್ನು “ದೈವತ್ವ” ಅಥವಾ “ಸೃಷ್ಟಿಕರ್ತ” ಅಥವಾ “ಪರಮಾತ್ಮ” ಎಂದೂ ಅನುವಾದ ಮಾಡಬಹುದು.
  • “ದೇವರು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ಪರಮ ಸೃಷ್ಟಿಕರ್ತ” ಅಥವಾ “ಅನಂತ ಸಾರ್ವಭೌಮ ಕರ್ತ” ಅಥವಾ “ನಿತ್ಯತ್ವದಲ್ಲಿರುವ ಪರಮಾತ್ಮ” ಎಂದೂ ಅನುವಾದ ಮಾಡಬಹುದು.
  • ದೇವರು ಎನ್ನುವ ಪದವನ್ನು ಸ್ಥಳೀಯ ಅಥವಾ ರಾಷ್ಟ್ರೀಯ ಭಾಷೆಗಳಲ್ಲಿ ಯಾವ ರೀತಿ ಸೂಚಿಸುತ್ತಾರೆನ್ನುವದನ್ನು ನೋಡಿಕೊಳ್ಳಿರಿ. ಅನುವಾದ ಮಾಡುವ ಭಾಷೆಯಲ್ಲಿ “ದೇವರು” ಎನ್ನುವ ಪದಕ್ಕೆ ಇನ್ನೊಂದು ಪದವೂ ಇರಬಹುದು. ಒಂದುವೇಳೆ ಇದ್ದರೆ, ಮೇಲೆ ವಿವರಿಸಿದಂತೆ ನಿಜವಾದ ದೇವರಿಗೆ ಇರುವ ಗುಣಲಕ್ಷಣಗಳೆಲ್ಲವುಗಳನ್ನು ತೋರಿಸುವ ಪದವು ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲನೆ ಮಾಡುವುದು ಉತ್ತಮ.
  • ಅನೇಕ ಭಾಷೆಗಳಲ್ಲಿ ನಿಜವಾದ ದೇವರು ಎಂದು ಹೇಳುವುದಕ್ಕೆ ಮೊದಲನೇ ಅಕ್ಷರವನ್ನು ದೊಡ್ಡ ಅಕ್ಷರವನ್ನಾಗಿ ಬರೆಯುತ್ತಾರೆ, ಇದರಿಂದ ಸುಳ್ಳು ದೇವರು ಯಾರು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.
  • ಈ ವ್ಯತ್ಯಾಸವನ್ನು ತಿಳಿಸುವುದಕ್ಕೆ ಇನ್ನೊಂದು ವಿಧಾನ ಇದೆ, ಅದು ಆಂಗ್ಲ ಭಾಷೆಯಲ್ಲಿ "God" (ಗಾಡ್ (ನಿಜವಾದ ದೇವರು) - ಮೊದಲ ಅಕ್ಷರವಾಗಿರುವ “ಜಿ” ಎನ್ನುವುದು ದೊಡ್ಡದಾಗಿರುತ್ತದೆ) ಮತ್ತು "god" (ಗಾಡ್ (ಸುಳ್ಳು ದೇವರು) - ಮೊದಲ ಅಕ್ಷರವಾಗಿರುವ “ಜಿ” ಎನ್ನುವುದು ಚಿಕ್ಕದಾಗಿರುತ್ತದೆ).
  • “ನಾನು ಅವರಿಗೆ ದೇವರಾಗಿರುತ್ತೇನೆ ಮತ್ತು ಅವರು ನನ್ನ ಜನರಾಗಿರುತ್ತಾರೆ” ಎನ್ನುವ ಮಾತನ್ನು “ದೇವರಾಗಿರುವ ನಾನು ಈ ಜನರನ್ನು ಪಾಲಿಸುತ್ತೇನೆ ಮತ್ತು ಅವರು ನನ್ನನ್ನು ಆರಾಧಿಸುವರು” ಎಂದೂ ಅನುವಾದ ಮಾಡಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಸೃಷ್ಟಿಸು, ಸುಳ್ಳು ದೇವರು, ತಂದೆಯಾದ ದೇವರು, ಪವಿತ್ರಾತ್ಮ, ಸುಳ್ಳು ದೇವರು, ದೇವರ ಮಗ, ಯೆಹೋವ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 01:01 ___ ದೇವರು ___ ವಿಶ್ವವನ್ನು ಸೃಷ್ಟಿಸಿದನು, ಪ್ರತಿಯೊಂದನ್ನು ಆರು ದಿನಗಳಲ್ಲಿ ಉಂಟು ಮಾಡಿದನು.
  • 01:15 ___ ದೇವರು ___ ತನ್ನ ಸ್ವರೂಪದಲ್ಲಿ ಸ್ತ್ರೀ ಪುರುಷರನ್ನು ಉಂಟುಮಾಡಿದನು.
  • 05:03 “ ನಾನು ಸರ್ವಶಕ್ತನಾದ ___ ದೇವರು ___. ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡುವೆನು.”
  • 09:14 “ನಾನು ಇರುವಾತನಾಗಿದ್ದೇನೆ. “ಇರುವಾತನೆಂಬುವವನು ನನ್ನನ್ನು ಕಳುಹಿಸಿದ್ದಾನೆ” ಎಂದು ಅವರಿಗೆ ಹೇಳು ಎಂದು ___ ದೇವರು ___ ಹೇಳಿದನು. “ನಾನು ಯೆಹೋವನು, ನಿನ್ನ ಪಿತೃಗಳಾದ ಅಬ್ರಹಾಮ, ಇಸಾಕ, ಮತ್ತು ಯಾಕೋಬ __ ದೇವರು __ ಆಗಿದ್ದೇನೆ. ಎಂದೆಂದಿಗೂ ಇರುವ ನನ್ನ ಹೆಸರು ಇದೇ” ಎಂದೂ ಅವರಿಗೆ ಹೇಳು.
  • 10:02 ಈ ಮಾರಿರೋಗಗಳ ಮೂಲಕ ___ ದೇವರು ___ ಫರೋಹನಿಗಿಂತಲೂ ಮತ್ತು ಎಲ್ಲಾ ಐಗುಪ್ತರಗಿಂತಲೂ ಎಷ್ಟು ದೊಡ್ಡವನೆಂದು ಆತನು ತೋರಿಸಿಕೊಂಡನು.
  • 16:01 ನಿಜ __ ದೇವರಾದ__ ಯೆಹೋವನನ್ನು ಬಿಟ್ಟು ಇಸ್ರಾಯೇಲ್ಯರು ಕಾನಾನ್ ದೇವರುಗಳನ್ನು ಆರಾಧನೆ ಮಾಡುವುದಕ್ಕೆ ಆರಂಭಿಸಿದರು.
  • 22:07 ಮೆಸ್ಸೀಯನನ್ನು ಅಂಗೀಕರಿಸುವುದಕ್ಕೆ ಜನರನ್ನು ಸಿದ್ಧಪಡಿಸುವ ___ ಅತ್ಯುನ್ನತ ದೇವರಾದ ___ ಪ್ರವಾದಿಯೆಂದು ನನ್ನ ಮಗನಾಗಿರುವ ನೀನು ಕರೆಯಲ್ಪಡುವಿ!”
  • 24:09 ಒಬ್ಬ ___ ದೇವರು ___ ಮಾತ್ರ ಇದ್ದಾನೆ. ಆದರೆ ತಂದೆಯಾದ ___ ದೇವರು ___ ಮಾತನಾಡಿದ್ದನ್ನು ಯೋಹಾನನು ಕೇಳಿಸಿಕೊಂಡನು ಮತ್ತು ಆತನು ಯೇಸುವಿಗೆ ದೀಕ್ಷಾಸ್ನಾನವನ್ನು ಕೊಟ್ಟಾಗ ಮಗನಾದ ಯೇಸುವನ್ನು ಮತ್ತು ಪವಿತ್ರಾತ್ಮನನ್ನು ನೋಡಿದನು.
  • 25:07 “ಕರ್ತನಾದ ನಿನ್ನ ___ ದೇವರನ್ನು ___ ಮಾತ್ರ ಆರಾಧನೆ ಮಾಡು ಮತ್ತು ಆತನನ್ನೇ ನೀನು ಸೇವಿಸು”.
  • 28:01 “ಒಳ್ಳೇಯವನು ಒಬ್ಬನೇ, ಅವನೇ ___ ದೇವರು ___.”
  • 49:09 ಆದರೆ ___ ದೇವರು ___ ಲೋಕದಲ್ಲಿರುವ ಪ್ರತಿಯೊಬ್ಬರನ್ನು ಹೆಚ್ಚಾಗಿ ಪ್ರೀತಿಸಿದನು, ಇದರಿಂದ ಆತನು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನು ತನ್ನ ಪಾಪಗಳಿಗಾಗಿ ಶಿಕ್ಷಿಸಲ್ಪಡುವುದಿಲ್ಲ, ಆದರೆ ___ ದೇವರೊಂದಿಗೆ ___ ಸದಾಕಾಲವೂ ಜೀವಿಸುವನು.
  • 50:16 ಆದರೆ ಒಂದಾನೊಂದು ದಿನ ___ ದೇವರು ___ ಪರಿಪೂರ್ಣವಾದ ಹೊಸ ಆಕಾಶವನ್ನು ಮತ್ತು ಹೊಸ ಭೂಮಿಯನ್ನು ಉಂಟು ಮಾಡುವನು.

ಪದ ಡೇಟಾ:

  • Strong's: H136, H305, H410, H426, H430, H433, H2486, H2623, H3068, H3069, H3863, H4136, H6697, G112, G516, G932, G935, G1096, G1140, G2098, G2124, G2128, G2150, G2152, G2153, G2299, G2304, G2305, G2312, G2313, G2314, G2315, G2316, G2317, G2318, G2319, G2320, G3361, G3785, G4151, G5207, G5377, G5463, G5537, G5538