kn_tw/bible/kt/sonofgod.md

51 lines
7.7 KiB
Markdown

# ದೇವರ ಮಗ, ಮಗ
## ಸತ್ಯಾಂಶಗಳು:
“ದೇವರ ಮಗ” ಎನ್ನುವ ಮಾತು ಮನುಷ್ಯನಾಗಿ ಈ ಲೋಕಕ್ಕೆ ಬಂದಿರುವ ದೇವರ ವಾಕ್ಯವಾಗಿರುವ ಯೇಸುವನ್ನು ಸೂಚಿಸಿದನು. ಈತನು ಅನೇಕಬಾರಿ “ಒಬ್ಬನೇ ಮಗ” ಎಂಬುದಾಗಿಯೂ ಸೂಚಿಸಲ್ಪಟ್ಟಿದ್ದಾನೆ.
* ದೇವರ ಮಗನು ತಂದೆಯಾದ ದೇವರ ಹಾಗೆಯೇ ಒಂದೇ ಸ್ವಭಾವವನ್ನು ಹೊಂದಿರುತ್ತಾನೆ, ಮತ್ತು ಆತನು ಸಂಪೂರ್ಣವಾದ ದೇವರಾಗಿದ್ದಾನೆ.
* ತಂದೆಯಾದ ದೇವರು, ಮಗನಾದ ದೇವರು ಮತ್ತು ಪವಿತ್ರಾತ್ಮ ದೇವರು ಒಂದೇ ಮೂಲಭೂತವಾಗಿರುತ್ತಾರೆ.
* ಮನುಷ್ಯರ ಮಕ್ಕಳಂತೆಯಲ್ಲದೇ ದೇವರ ಮಗ ಯಾವಾಗಲೂ ಅಸ್ತಿತ್ವದಲ್ಲಿರುತ್ತಾನೆ.
* ಆದಿಯಲ್ಲಿ ತಂದೆ ಮತ್ತು ಪವಿತ್ರಾತ್ಮರವರೊಂದಿಗೆ ದೇವರ ಮಗ ಈ ಲೋಕವನ್ನು ಸೃಷ್ಟಿಸುವ ಸಂದರ್ಭದಲ್ಲಿದ್ದಾನೆ.
ಯಾಕಂದರೆ ಯೇಸು ದೇವರ ಮಗನಾಗಿದ್ದಾನೆ, ಆತನು ತನ್ನ ತಂದೆಯನ್ನು ಪ್ರೀತಿಸಿದ್ದಾನೆ ಮತ್ತು ಆತನಿಗೆ ವಿಧೇಯನಾಗಿದ್ದಾನೆ, ಮತ್ತು ತಂದೆಯು ಈತನನ್ನು ಪ್ರೀತಿಸಿದ್ದಾನೆ.
## ಅನುವಾದ ಸಲಹೆಗಳು:
* “ದೇವರ ಮಗ” ಎನ್ನುವ ಪದವನ್ನು ಸರ್ವ ಸಾಧಾರಣವಾಗಿ ಮನುಷ್ಯನ ಮಗನನ್ನು ಸೂಚಿಸುವುದಕ್ಕೆ ಸ್ವಾಭಾವಿಕವಾಗಿ ಉಪಯೋಗಿಸುವ ಭಾಷೆಯ “ಮಗ” ಎನ್ನುವ ಪದದೊಂದಿಗೆ ಅನುವಾದ ಮಾಡುವುದು ಉತ್ತಮ.
* ಅನುವಾದ ಮಾಡಿರುವ “ಮಗ” ಎನ್ನುವ ಪದವು, “ತಂದೆ” ಎನ್ನುವ ಪದದೊಂದಿಗೆ ಸರಿಹೊಂದುವಂತೆ ನೋಡಿಕೊಳ್ಳಿರಿ, ಅನುವಾದ ಭಾಷೆಯಲ್ಲಿ ನಿಜವಾದ ತಂದೆ-ಮಗ ಸಂಬಂಧವನ್ನು ವ್ಯಕ್ತಪಡಿಸುವುದಕ್ಕೆ ಸ್ವಾಭಾವಿಕವಾಗಿ ಉಪಯೋಗಿಸುವ ಪದಗಳಾಗಿರುತ್ತವೆ.
* ಆಂಗ್ಲ ಭಾಷೆಯಲ್ಲಿ “ಮಗ” ಎನ್ನುವ ಪದದಲ್ಲಿ ಮೊದಲನೇ ಅಕ್ಷರವನ್ನು ದೊಡ್ಡದಾಗಿ ಉಪಯೋಗಿಸಿದಾಗ, ಇದು ದೇವರ ಕುರಿತಾಗಿ ಮಾತನಾಡುತ್ತಿದೆಯೆಂದು ತಿಳಿಸುತ್ತದೆ.
* ಆಂಗ್ಲ ಭಾಷೆಯಲ್ಲಿ “ಮಗ” ಎನ್ನುವ ಪದದಲ್ಲಿ ಮೊದಲನೇ ಅಕ್ಷರವನ್ನು ಉಪಯೋಗಿಸಿದಾಗ, ಆ ಪದವು “ದೇವರ ಮಗ” ಎಂಬುದಾಗಿ ಸೂಚಿಸುತ್ತದೆ, ವಿಶೇಷವಾಗಿ ಇದು “ತಂದೆ” ಎಂದು ಉಪಯೋಗಿಸಿದ ಸಂದರ್ಭದಲ್ಲಿಯೂ ಇದು ಕಾಣಿಸಿಕೊಳ್ಳುತ್ತದೆ.
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-names))
(ಈ ಪದಗಳನ್ನು ಸಹ ನೋಡಿರಿ : [ಕ್ರಿಸ್ತ](../kt/christ.md), [ಪೂರ್ವಜ](../other/father.md), [ದೇವರು](../kt/god.md), [ತಂದೆಯಾದ ದೇವರು](../kt/godthefather.md), [ಪವಿತ್ರಾತ್ಮ](../kt/holyspirit.md), [ಯೇಸು](../kt/jesus.md), [ಮಗ](../kt/son.md), [ದೇವರ ಮಕ್ಕಳು](../kt/sonsofgod.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಯೋಹಾನ.04:10](rc://*/tn/help/1jn/04/10)
* [ಅಪೊ.ಕೃತ್ಯ.09:20](rc://*/tn/help/act/09/20)
* [ಕೊಲೊಸ್ಸ.01:17](rc://*/tn/help/col/01/17)
* [ಗಲಾತ್ಯ.02:20](rc://*/tn/help/gal/02/20)
* [ಇಬ್ರಿ.04:14](rc://*/tn/help/heb/04/14)
* [ಯೋಹಾನ.03:18](rc://*/tn/help/jhn/03/18)
* [ಲೂಕ.10:22](rc://*/tn/help/luk/10/22)
* [ಮತ್ತಾಯ.11:27](rc://*/tn/help/mat/11/27)
* [ಪ್ರಕ.02:18](rc://*/tn/help/rev/02/18)
* [ರೋಮಾ.08:29](rc://*/tn/help/rom/08/29)
## ಸತ್ಯವೇದ ಕತೆಗಳಿಂದ ಉದಾಹರಣೆಗಳು:
* __[22:05](rc://*/tn/help/obs/22/05)__ “ಪವಿತ್ರಾತ್ಮನು ನಿನ್ನ ಮೇಲಕ್ಕೆ ಬರುವನು, ಮತ್ತು ದೇವರ ಶಕ್ತಿಯು ನಿನ್ನನ್ನು ಆವರಿಸುವುದು” ಎಂದು ದೂತನು ಹೇಳಿದನು. ಇದರಿಂದ ಶಿಶುವು ಪರಿಶುದ್ಧನಾಗಿರುವನು, ದೇವರ __ ಮಗನಾಗಿರುವನು __.”
* __[24:09](rc://*/tn/help/obs/24/09)__ “ಪವಿತ್ರಾತ್ಮನು ಕೆಳಕ್ಕೆ ಇಳಿದು ಬರುವನು ಮತ್ತು ನೀನು ದೀಕ್ಷಾಸ್ನಾನ ಕೊಡುವ ವ್ಯಕ್ತಿಯ ಮೇಲಕ್ಕೆ ಬರುವನು, ಆ ವ್ಯಕ್ತಿ __ ದೇವರ ಮಗನಾಗಿರುತ್ತಾನೆ __” ಎಂದು ದೇವರು ಯೋಹಾನನಿಗೆ ಹೇಳಿದನು.
* __[31:08](rc://*/tn/help/obs/31/08)__ ಶಿಷ್ಯರು ಆಶ್ಚರ್ಯಪಟ್ಟರು. “ನಿಜವಾಗಿ ನೀನು __ ದೇವರ ಮಗ __ “ ಎಂದು ಆತನಿಗೆ ಹೇಳುತ್ತಾ ಅವರು ಯೇಸುವನ್ನು ಆರಾಧಿಸಿದರು.
* __[37:05](rc://*/tn/help/obs/37/05)__ “ಹೌದು, ಬೋಧಕನೆ! ನೀನು __ ದೇವರ ಮಗನಾಗಿರುವ __ ಮೆಸ್ಸೀಯನೆಂದು ನಾನು ನಂಬುತ್ತಿದ್ದೇನೆ” ಎಂದು ಮಾರ್ಥಳು ಉತ್ತರಿಸಿದಳು.
* __[42:10](rc://*/tn/help/obs/42/10)__ ಆದ್ದರಿಂದ ನೀವು ಹೋಗಿ, ಎಲ್ಲಾ ಜನರ ಗುಂಪುಗಳನ್ನು ಶಿಷ್ಯರನ್ನಾಗಿ ಮಾಡಿರಿ, ಅವರಿಗೆ ತಂದೆ, __ ಮಗ __, ಪವಿತ್ರಾತ್ಮ ಹೆಸರಿನಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ ಮತ್ತು ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಅವರಿಗೆ ಬೋಧಿಸಿ, ಅವುಗಳಿಗೆ ವಿಧೇಯರಾಗಬೇಕೆಂದು ಹೇಳಿರಿ.”
* __[46:06](rc://*/tn/help/obs/46/06)__ ಆ ಕ್ಷಣದಲ್ಲಿಯೇ, ಸೌಲನು ದಮಸ್ಕದಲ್ಲಿರುವ ಯೆಹೂದ್ಯರಿಗೆ “ಯೇಸು __ ದೇವರ ಮಗ __ “ ಎಂದು ಬೊಧಿಸಲು ಆರಂಭಿಸಿದನು!”
* __[49:09](rc://*/tn/help/obs/49/09)__ ಆದರೆ ದೇವರು ಈ ಲೋಕವನ್ನು ಎಷ್ಟೋ ಪ್ರೀತಿಸಿದನು, ತನ್ನ ಒಬ್ನೇ __ ಮಗನನ್ನು __ ಕೊಟ್ಟನು, ಆದ್ದರಿಂದ ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರು ತನ್ನ ಪಾಪಗಳಿಗೆ ಶಿಕ್ಷೆಯನ್ನು ಹೊಂದದೇ ಸದಾಕಾಲವೂ ದೇವರೊಂದಿಗೆ ಜೀವಿಸುವನು.
## ಪದ ಡೇಟಾ:
* Strong's: H426, H430, H1121, H1247, G2316, G5207