kn_tw/bible/other/descendant.md

34 lines
4.2 KiB
Markdown

# ವಂಶಾನುಗತವಾಗು, ಸಂತಾನದವರು, ಸಂತಾನದರಾಗಿದ್ದರು, ಸಂತಾನವು, ವಂಶಸ್ಥ, ವಂಶಸ್ಥರು
## ಪದದ ಅರ್ಥವಿವರಣೆ:
“ವಂಶಸ್ಥ” ಎಂದರೆ ಚರಿತ್ರೆಯಲ್ಲಿ ಯಾರಾದರೊಬ್ಬರ ರಕ್ತ ಸಂಬಂಧಿಯಾದ ವ್ಯಕ್ತಿಯನ್ನು ಸೂಚಿಸುತ್ತದೆ.
* ಉದಾಹರಣೆಗೆ, ಅಬ್ರಹಾಮನು ನೋಹನ ವಂಶಸ್ಥ.
* ಒಬ್ಬ ವ್ಯಕ್ತಿಯ ವಂಶಸ್ಥರು ಆತನ ಮಕ್ಕಳು, ಮೊಮ್ಮೊಕ್ಕಳು, ಮರಿ ಮೊಮ್ಮೊಕ್ಕಳು ಆಗಿರುತ್ತಾರೆ. ಯಾಕೋಬಿನ ವಂಶಸ್ಥರು ಇಸ್ರಾಯೇಲ್ ಹನ್ನೆರಡು ಕುಲದವರು.
* “ಇವರ ವಂಶಸ್ಥನು” ಎನ್ನುವ ಮಾತನ್ನು ಇನ್ನೊಂದು ವಿಧಾನದಲ್ಲಿ ಹೇಳಬೇಕೆಂದರೆ ಅಬ್ರಹಾಮನು ನೋಹನ ವಂಶಸ್ಥ ಎಂದು ಹೇಳುವ ಹಾಗೆ “ಅವರಿಂದ ಬಂದ ವಂಶಸ್ಥ” ಎಂದು ಹೇಳಬಹುದು. ಇದನ್ನು “ಕುಟುಂಬದ ಸಾಲಿನಿಂದ” ಬಂದವನು ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಅಬ್ರಾಹಾಮ](../names/abraham.md), [ಪೂರ್ವಿಕರು](../other/father.md), [ಯಾಕೋಬ](../names/jacob.md), [ನೋಹ](../names/noah.md), [ಇಸ್ರಾಯೇಲ್ ಹನ್ನೆರಡು ಕುಲದವರು](../other/12tribesofisrael.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.09:4-5](rc://*/tn/help/1ki/09/04)
* [ಅಪೊ.ಕೃತ್ಯ.13:23-25](rc://*/tn/help/act/13/23)
* [ಧರ್ಮೋ.02:20-22](rc://*/tn/help/deu/02/20)
* [ಆದಿ.10:1](rc://*/tn/help/gen/10/01)
* [ಆದಿ.28:12-13](rc://*/tn/help/gen/28/12)
## ಸತ್ಯವೇದದಿಂದ ಉದಾಹರಣೆಗಳು:
* __[02:09](rc://*/tn/help/obs/02/09)__ “ಸ್ತ್ರೀಯ ___ ಸಂತಾನವು ___ ನಿನ್ನ ತಲೆಯನ್ನು ಜಜ್ಜುವುದು, ನೀನು ಅವನ ಹಿಮ್ಮಡಿಯನ್ನು ಕಚ್ಚುವಿ.”
* __[04:09](rc://*/tn/help/obs/04/09)__ ನಾನು ನಿನ್ನ ___ ಸಂತಾನದವರಿಗೆ ___ ಕಾನಾನ್ ದೇಶವನ್ನು ಕೊಡುವೆನು.
* __[05:10](rc://*/tn/help/obs/05/10)__ “ಆಕಾಶದಲ್ಲಿ ನಕ್ಷತ್ರಗಳಿಗಿಂತ ಹೆಚ್ಚಾಗಿ ನಿನ್ನ __ ಸಂತಾನದವರು __ ಇರುತ್ತಾರೆ.”
* __[17:07](rc://*/tn/help/obs/17/07)__ ನಿನ್ನ ಕುಟುಂಬದೊಳಗಿಂದ ಬರುವ ಒಬ್ಬರು ಯಾವಾಗಲೂ ಇಸ್ರಾಯೇಲ್ ರಾಜ್ಯವನ್ನು ಆಳುತ್ತಾರೆ, ಮತ್ತು ನಿನ್ನ ___ ಸಂತಾನದವರಲ್ಲಿ ___ ಒಬ್ಬರು ಮೆಸ್ಸೀಯನಾಗಿ ಬರುತ್ತಾನೆ!”
* __[18:13](rc://*/tn/help/obs/18/13)__ ಯೂದಾ ಅರಸರೆಲ್ಲರೂ ದಾವೀದನ __ ಸಂತಾನದವರಾಗಿರುತ್ತಾರೆ __.
* __[21:04](rc://*/tn/help/obs/21/04)__ ಮೆಸ್ಸೀಯನು ದಾವೀದನ ಸ್ವಂತ ___ ಸಂತಾನದಲ್ಲಿ ___ ಒಬ್ಬನಾಗಿರುತ್ತಾನೆಂದು ದೇವರು ಅರಸನಾದ ದಾವೀದನಿಗೆ ವಾಗ್ಧಾನ ಮಾಡಿರುತ್ತಾನೆ.
* __[48:13](rc://*/tn/help/obs/48/13)__ ಮೆಸ್ಸೀಯನು ದಾವೀದನ ಸ್ವಂತ ___ ಸಂತಾನದಲ್ಲಿ ___ ಒಬ್ಬನಾಗಿರುತ್ತಾನೆಂದು ದೇವರು ದಾವೀದನಿಗೆ ವಾಗ್ಧಾನ ಮಾಡಿರುತ್ತಾನೆ. ಮೆಸ್ಸೀಯನಾದ ಯೇಸುವು ದಾವೀದನ ___ ‘ಸಂತಾನದಲ್ಲಿ ___ ವಿಶೇಷತೆಯನ್ನು ಹೊಂದಿರುತ್ತಾನೆ.
## ಪದ ಡೇಟಾ:
* Strong's: H319, H1004, H1121, H1323, H1755, H2232, H2233, H3205, H3211, H3318, H3409, H4294, H5220, H6849, H7611, H8435, G1074, G1085, G4690