kn_tw/bible/other/serpent.md

3.9 KiB

ಸರ್ಪ, ಸರ್ಪಗಳು, ಹಾವು, ಹಾವುಗಳು, ವಿಷಸರ್ಪ, ವಿಷಸರ್ಪಗಳು

ಸತ್ಯಾಂಶಗಳು:

ಈ ಎಲ್ಲಾ ಪದಗಳು ತೆಳುವಾದ ಆಕಾರವಿದ್ದು, ವಿಷದ ಹಲ್ಲುಗಳನ್ನು ಒಳಗೊಂಡಿರುವ ಉದ್ದವಾಗಿರುವ ಹರಿದಾಡುವ ಜಂತುವನ್ನು ಸೂಚಿಸುತ್ತವೆ ಮತ್ತು ಇದು ನೆಲದ ಮೇಲೆ ಹರಿದಾಡುತ್ತ ಹಿಂದಕ್ಕೆ, ಮುಂದಕ್ಕೆ ಚಲಿಸುತ್ತಾ ಹೋಗುತ್ತಿರುತ್ತದೆ. “ಸರ್ಪ” ಎನ್ನುವ ಪದವು ಸಾಧಾರಣವಾಗಿ ದೊಡ್ಡ ಹಾವನ್ನು ಸೂಚಿಸುತ್ತದೆ ಮತ್ತು “ವಿಷಸರ್ಪ” ಎನ್ನುವ ಪದವು ಹಾವು ತನ್ನ ಬೇಟೆಯಲ್ಲಿ ವಿಷವನ್ನು ಉಪಯೋಗಿಸುವ ಒಂದು ವಿಧವಾದ ಹಾವನ್ನು ಸೂಚಿಸುತ್ತದೆ.

  • ಈ ಪ್ರಾಣಿಯನ್ನು ಸಾಂಕೇತಿಕವಾಗಿ ದುಷ್ಟ ವ್ಯಕ್ತಿಯನ್ನು ಉಲ್ಲೇಖಿಸಲು ಬಳಸಲಾಗುತ್ತದೆ, ವಿಶೇಷವಾಗಿ ಮೋಸಗಾರ.
  • “ವಿಷಸರ್ಪಗಳ ಸಂತಾನದವರು” ಎಂದು ಯೇಸುವು ಧರ್ಮದ ನಾಯಕರನ್ನು ಕರೆದನು, ಯಾಕಂದರೆ ಅವರು ನೀತಿವಂತರೆಂದು ನಟಿಸುತ್ತಾ, ಜನರನ್ನು ಮೋಸಗೊಳಿಸುತ್ತಿದ್ದರು ಮತ್ತು ಜನರಲ್ಲಿ ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದರು.
  • ಎದೆನ್ ತೋಟದಲ್ಲಿ ಸೈತಾನನು ಹವ್ವ ಜೊತೆಯಲ್ಲಿ ಮಾತನಾಡಿದಾಗ ಮತ್ತು ಆಕೆಯನ್ನು ದೇವರಿಗೆ ಅವಿಧೇಯಳನ್ನಾಗಿ ಶೋಧಿಸಿದಾಗ ಅವನು ಸರ್ಪದ ರೂಪದಲ್ಲಿದ್ದನು.
  • ಹವ್ವಳು ಪಾಪ ಮಾಡುವಂತೆ ಸರ್ಪವು ಆಕೆಯನ್ನು ಶೋಧಿಸಿದನಂತರ, ಹವ್ವ ಮತ್ತು ತನ್ನ ಗಂಡನಾದ ಆದಾಮನು ಪಾಪ ಮಾಡಿದರು, ದೇವರು ಆ ಹಾವನ್ನು ಶಪಿಸಿ, ಎಲ್ಲಾ ಹಾವುಗಳು ಇನ್ನು ಮೇಲೆ ನೆಲದ ಮೇಲೆ ಹರಿದಾಡುತ್ತವೆ ಎಂದು ಹೇಳಿದನು, ಇದರ ಆಧಾರದಿಂದ ಹಾವುಗಳು ಶಾಪವನ್ನು ಹೊಂದುವುದಕ್ಕೆ ಮುಂಚಿತವಾಗಿ ಅವು ನಡೆಯುತ್ತಿದ್ದವು ಎಂದು ಅರ್ಥವಾಗುತ್ತಿದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಶಪಿಸು, ಮೋಸಗೊಳಿಸು, ಅವಿಧೇಯತೆ, ಎದೆನ್, ದುಷ್ಟ, ಸಂತಾನ, ಬೇಟೆ, ಸೈತಾನ, ಪಾಪ, ಶೋಧಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H660, H2119, H5175, H6620, H6848, H8314, H8577, G2191, G2062, G3789