kn_tw/bible/other/deceive.md

5.6 KiB
Raw Permalink Blame History

ವಂಚಿಸು, ಮೋಸ, ಮೋಸಗಾರ, ಮೋಸದಿಂದ, ವಂಚನೆ, ಭ್ರಮೆಗಳು

ಪದದ ಅರ್ಥವಿವರಣೆ:

“ವಂಚಿಸು” ಎನ್ನುವ ಪದಕ್ಕೆ ಸತ್ಯವಲ್ಲದ ಏನಾದರೊಂದು ವಿಷಯವನ್ನು ಒಬ್ಬರು ನಂಬುವಂತೆ ಮಾಡುವುದು ಎಂದರ್ಥ. ಒಬ್ಬರನ್ನು ಮೋಸಗೊಳಿಸುವ ಕ್ರಿಯೆಯನ್ನು “ವಂಚನೆ” ಎಂದು ಕರೆಯುತ್ತಾರೆ.

  • “ವಂಚನೆ” ಎನ್ನುವ ಇನ್ನೊಂದು ಪದವೂ ಸತ್ಯವಲ್ಲದ ಏನಾದರೊಂದು ವಿಷಯವನ್ನು ಒಬ್ಬರು ನಂಬುವಂತೆ ಮಾಡುವ ಕ್ರಿಯೆಯನ್ನು ಸೂಚಿಸುತ್ತದೆ.
  • ತಪ್ಪಾಗಿರುವ ಸಂಗತಿಗಳನ್ನು ಇತರರು ನಂಬುವಂತೆ ಮಾಡುವ ವ್ಯಕ್ತಿಯನ್ನು “ಮೋಸಗಾರ” ಎನ್ನುತ್ತಾರೆ. ಉದಾಹರಣೆಗೆ, ಸೈತಾನನು “ಮೋಸಗಾರ” ಎಂದು ಕರೆಯಲ್ಪಟ್ಟಿದ್ದಾನೆ. ಇವನು ನಿಯಂತ್ರಿಸುವ ದುರಾತ್ಮಗಳನ್ನು ಕೂಡ ಮೋಸಗಾರರೆಂದು ಕರೆಯುತ್ತಾರೆ.
  • ಒಬ್ಬ ವ್ಯಕ್ತಿಯ ಸಂದೇಶವು ಅಥವಾ ಕ್ರಿಯೆಯು ಸತ್ಯವಾಗದಿದ್ದರೆ ಅದನ್ನು “ಮೋಸಗೊಳಿಸುವಿಕೆ” ಎಂದು ಹೇಳಲಾಗುತ್ತದೆ.
  • “ಮೋಸ ಮಾಡು” ಮತ್ತು “ಮೋಸಗೊಳಿಸು” ಎನ್ನುವ ಪದಗಳಿಗೆ ಒಂದೇ ಅರ್ಥವು ಇರುತ್ತದೆ, ಆದರೆ ಅವರು ಉಪಯೋಗಿಸುವ ವಿಧಾನದಲ್ಲಿ ಕೆಲವೊಂದು ಚಿಕ್ಕ ಚಿಕ್ಕ ವ್ಯತ್ಯಾಸಗಳು ಇರುತ್ತವೆ.
  • “ಮೋಸದಿಂದ” ಮತ್ತು “ಮೋಸ ಹೋಗುವ” ಎನ್ನುವ ವಿವರಣಾತ್ಮಕವಾದ ಪದಗಳು ಒಂದೇ ಅರ್ಥವನ್ನು ಹೊಂದಿರುತ್ತವೆ ಮತ್ತು ಅವು ಒಂದೇ ಸಂದರ್ಭದಲ್ಲಿ ಉಪಯೋಗಿಸಲ್ಪಟ್ಟಿರುತ್ತವೆ.

ಅನುವಾದ ಸಲಹೆಗಳು:

  • “ವಂಚಿಸು” ಎನ್ನುವ ಪದಕ್ಕೆ ಇತರ ಪರ್ಯಾಯ ಪದಗಳಾಗಿ “ಸುಳ್ಳು ಹೇಳು” ಅಥವಾ “ತಪ್ಪು ಹೊಂದುವುದಕ್ಕೆ ಕಾರಣನಾಗು” ಅಥವಾ “ನಿಜವಲ್ಲದ ವಿಷಯಗಳನ್ನು ಆಲೋಚನೆ ಮಾಡುವುದಕ್ಕೆ ಇನ್ನೊಬ್ಬರನ್ನು ಪ್ರೇರೇಪಿಸು” ಎನ್ನುವ ಮಾತುಗಳನ್ನು ಹೇಳಬಹುದು.
  • “ವಂಚನೆ” ಎನ್ನುವ ಪದಕ್ಕೆ ಪರ್ಯಾಯ ಪದಗಳಾಗಿ “ತಪ್ಪಾದ ವಿಷಯಗಳನ್ನು ಆಲೋಚನೆ ಮಾಡುವುದಕ್ಕೆ ಕಾರಣವಾಗುವುದು” ಅಥವಾ “ಸುಳ್ಳು ಹೇಳಿರುವುದು” ಅಥವಾ “ತಂತ್ರ ಹೂಡಲಾಗಿದೆ” ಅಥವಾ “ಅವಿವೇಕತನಕ್ಕೆ ಗುರಿಮಾಡು” ಅಥವಾ “ದಾರಿತಪ್ಪಿಸಿದೆ” ಎಂದೂ ಹೇಳಬಹುದು.
  • “ಮೋಸಗಾರ” ಎನ್ನುವ ಪದವನ್ನು “ಸುಳ್ಳುಗಾರ” ಅಥವಾ “ದಾರಿ ತಪ್ಪಿಸುವವನು” ಅಥವಾ “ಮೋಸ ಮಾಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ಮೋಸಗೊಳಿಸು” ಅಥವಾ “ವಂಚನೆ” ಎನುವ ಪದಗಳನ್ನು “ಅಸತ್ಯ” ಅಥವಾ “ಸುಳ್ಳಾಡುವುದು” ಅಥವಾ “ತಂತ್ರ ಮಾಡುವುದು” ಅಥವಾ “ಕುಟಿಲತೆ” ಎಂದೂ ಅರ್ಥಬರುವ ಪದಗಳೊಂದಿಗೆ ಅನುವಾದ ಮಾಡಬಹುದು.
  • “ಮೋಸಗೊಳಿಸು” ಅಥವಾ “ಮೋಸಹೋಗುವ” ಎನ್ನುವ ಪದಗಳನ್ನು ಸತ್ಯವಾಗದ ವಿಷಯಗಳನ್ನು ನಂಬುವುದಕ್ಕೆ ಇತರ ಜನರನ್ನು ಪ್ರೇರೇಪಿಸುವ ವಿಧಾನದಲ್ಲಿ ಮಾತನಾಡುವ ವ್ಯಕ್ತಿಯನ್ನು “ಸತ್ಯವಲ್ಲದ” ಅಥವಾ “ದಾರಿ ತಪ್ಪಿಸುವ” ಅಥವಾ “ಸುಳ್ಳಾಡುವ” ಎನ್ನುವ ಪದಗಳೊಂದಿಗೆ ಅನುವಾದ ಮಾಡಬಹುದು,

(ಈ ಪದಗಳನ್ನು ಸಹ ನೋಡಿರಿ : ನಿಜ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strongs: H898, H2048, H3577, H3584, H3868, H4123, H4820, H4860, H5230, H5377, H5558, H6121, H6231, H6601, H7411, H7423, H7683, H7686, H7952, H8267, H8496, H8582, H8591, H8649, G538, G539, G1386, G1387, G1388, G1818, G3884, G4105, G4106, G4108, G5422, G5423