37 lines
5.6 KiB
Markdown
37 lines
5.6 KiB
Markdown
# ವಂಚಿಸು, ಮೋಸ, ಮೋಸಗಾರ, ಮೋಸದಿಂದ, ವಂಚನೆ, ಭ್ರಮೆಗಳು
|
||
|
||
## ಪದದ ಅರ್ಥವಿವರಣೆ:
|
||
|
||
“ವಂಚಿಸು” ಎನ್ನುವ ಪದಕ್ಕೆ ಸತ್ಯವಲ್ಲದ ಏನಾದರೊಂದು ವಿಷಯವನ್ನು ಒಬ್ಬರು ನಂಬುವಂತೆ ಮಾಡುವುದು ಎಂದರ್ಥ. ಒಬ್ಬರನ್ನು ಮೋಸಗೊಳಿಸುವ ಕ್ರಿಯೆಯನ್ನು “ವಂಚನೆ” ಎಂದು ಕರೆಯುತ್ತಾರೆ.
|
||
|
||
* “ವಂಚನೆ” ಎನ್ನುವ ಇನ್ನೊಂದು ಪದವೂ ಸತ್ಯವಲ್ಲದ ಏನಾದರೊಂದು ವಿಷಯವನ್ನು ಒಬ್ಬರು ನಂಬುವಂತೆ ಮಾಡುವ ಕ್ರಿಯೆಯನ್ನು ಸೂಚಿಸುತ್ತದೆ.
|
||
* ತಪ್ಪಾಗಿರುವ ಸಂಗತಿಗಳನ್ನು ಇತರರು ನಂಬುವಂತೆ ಮಾಡುವ ವ್ಯಕ್ತಿಯನ್ನು “ಮೋಸಗಾರ” ಎನ್ನುತ್ತಾರೆ. ಉದಾಹರಣೆಗೆ, ಸೈತಾನನು “ಮೋಸಗಾರ” ಎಂದು ಕರೆಯಲ್ಪಟ್ಟಿದ್ದಾನೆ. ಇವನು ನಿಯಂತ್ರಿಸುವ ದುರಾತ್ಮಗಳನ್ನು ಕೂಡ ಮೋಸಗಾರರೆಂದು ಕರೆಯುತ್ತಾರೆ.
|
||
* ಒಬ್ಬ ವ್ಯಕ್ತಿಯ ಸಂದೇಶವು ಅಥವಾ ಕ್ರಿಯೆಯು ಸತ್ಯವಾಗದಿದ್ದರೆ ಅದನ್ನು “ಮೋಸಗೊಳಿಸುವಿಕೆ” ಎಂದು ಹೇಳಲಾಗುತ್ತದೆ.
|
||
* “ಮೋಸ ಮಾಡು” ಮತ್ತು “ಮೋಸಗೊಳಿಸು” ಎನ್ನುವ ಪದಗಳಿಗೆ ಒಂದೇ ಅರ್ಥವು ಇರುತ್ತದೆ, ಆದರೆ ಅವರು ಉಪಯೋಗಿಸುವ ವಿಧಾನದಲ್ಲಿ ಕೆಲವೊಂದು ಚಿಕ್ಕ ಚಿಕ್ಕ ವ್ಯತ್ಯಾಸಗಳು ಇರುತ್ತವೆ.
|
||
* “ಮೋಸದಿಂದ” ಮತ್ತು “ಮೋಸ ಹೋಗುವ” ಎನ್ನುವ ವಿವರಣಾತ್ಮಕವಾದ ಪದಗಳು ಒಂದೇ ಅರ್ಥವನ್ನು ಹೊಂದಿರುತ್ತವೆ ಮತ್ತು ಅವು ಒಂದೇ ಸಂದರ್ಭದಲ್ಲಿ ಉಪಯೋಗಿಸಲ್ಪಟ್ಟಿರುತ್ತವೆ.
|
||
|
||
## ಅನುವಾದ ಸಲಹೆಗಳು:
|
||
|
||
* “ವಂಚಿಸು” ಎನ್ನುವ ಪದಕ್ಕೆ ಇತರ ಪರ್ಯಾಯ ಪದಗಳಾಗಿ “ಸುಳ್ಳು ಹೇಳು” ಅಥವಾ “ತಪ್ಪು ಹೊಂದುವುದಕ್ಕೆ ಕಾರಣನಾಗು” ಅಥವಾ “ನಿಜವಲ್ಲದ ವಿಷಯಗಳನ್ನು ಆಲೋಚನೆ ಮಾಡುವುದಕ್ಕೆ ಇನ್ನೊಬ್ಬರನ್ನು ಪ್ರೇರೇಪಿಸು” ಎನ್ನುವ ಮಾತುಗಳನ್ನು ಹೇಳಬಹುದು.
|
||
* “ವಂಚನೆ” ಎನ್ನುವ ಪದಕ್ಕೆ ಪರ್ಯಾಯ ಪದಗಳಾಗಿ “ತಪ್ಪಾದ ವಿಷಯಗಳನ್ನು ಆಲೋಚನೆ ಮಾಡುವುದಕ್ಕೆ ಕಾರಣವಾಗುವುದು” ಅಥವಾ “ಸುಳ್ಳು ಹೇಳಿರುವುದು” ಅಥವಾ “ತಂತ್ರ ಹೂಡಲಾಗಿದೆ” ಅಥವಾ “ಅವಿವೇಕತನಕ್ಕೆ ಗುರಿಮಾಡು” ಅಥವಾ “ದಾರಿತಪ್ಪಿಸಿದೆ” ಎಂದೂ ಹೇಳಬಹುದು.
|
||
* “ಮೋಸಗಾರ” ಎನ್ನುವ ಪದವನ್ನು “ಸುಳ್ಳುಗಾರ” ಅಥವಾ “ದಾರಿ ತಪ್ಪಿಸುವವನು” ಅಥವಾ “ಮೋಸ ಮಾಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
|
||
* ಸಂದರ್ಭಾನುಸಾರವಾಗಿ “ಮೋಸಗೊಳಿಸು” ಅಥವಾ “ವಂಚನೆ” ಎನುವ ಪದಗಳನ್ನು “ಅಸತ್ಯ” ಅಥವಾ “ಸುಳ್ಳಾಡುವುದು” ಅಥವಾ “ತಂತ್ರ ಮಾಡುವುದು” ಅಥವಾ “ಕುಟಿಲತೆ” ಎಂದೂ ಅರ್ಥಬರುವ ಪದಗಳೊಂದಿಗೆ ಅನುವಾದ ಮಾಡಬಹುದು.
|
||
* “ಮೋಸಗೊಳಿಸು” ಅಥವಾ “ಮೋಸಹೋಗುವ” ಎನ್ನುವ ಪದಗಳನ್ನು ಸತ್ಯವಾಗದ ವಿಷಯಗಳನ್ನು ನಂಬುವುದಕ್ಕೆ ಇತರ ಜನರನ್ನು ಪ್ರೇರೇಪಿಸುವ ವಿಧಾನದಲ್ಲಿ ಮಾತನಾಡುವ ವ್ಯಕ್ತಿಯನ್ನು “ಸತ್ಯವಲ್ಲದ” ಅಥವಾ “ದಾರಿ ತಪ್ಪಿಸುವ” ಅಥವಾ “ಸುಳ್ಳಾಡುವ” ಎನ್ನುವ ಪದಗಳೊಂದಿಗೆ ಅನುವಾದ ಮಾಡಬಹುದು,
|
||
|
||
(ಈ ಪದಗಳನ್ನು ಸಹ ನೋಡಿರಿ : [ನಿಜ](../kt/true.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [1 ಯೋಹಾನ.01:8](rc://*/tn/help/1jn/01/08)
|
||
* [1 ತಿಮೊಥೆ.02:14](rc://*/tn/help/1ti/02/14)
|
||
* [2 ಥೆಸ್ಸ.02:3-4](rc://*/tn/help/2th/02/03)
|
||
* [ಆದಿ.03:12-13](rc://*/tn/help/gen/03/12)
|
||
* [ಆದಿ.31:26-28](rc://*/tn/help/gen/31/26)
|
||
* [ಯಾಜಕ.19:11-12](rc://*/tn/help/lev/19/11)
|
||
* [ಮತ್ತಾಯ.27:64](rc://*/tn/help/mat/27/64)
|
||
* [ಮೀಕಾ.06:11-12](rc://*/tn/help/mic/06/11)
|
||
|
||
## ಪದ ಡೇಟಾ:
|
||
|
||
* Strong’s: H898, H2048, H3577, H3584, H3868, H4123, H4820, H4860, H5230, H5377, H5558, H6121, H6231, H6601, H7411, H7423, H7683, H7686, H7952, H8267, H8496, H8582, H8591, H8649, G538, G539, G1386, G1387, G1388, G1818, G3884, G4105, G4106, G4108, G5422, G5423
|