5.8 KiB
5.8 KiB
ಶಾಪ, ಶಾಪಗ್ರಸ್ತ, ಶಪಿದನು, ಶಪಿಸುವುದು
ಪದದ ಅರ್ಥವಿವರಣೆ
ಶಾಪಗ್ರಸ್ತ ಒಂದು ವಸ್ತು ಅಥವಾ ವ್ಯಕ್ತಿಗೆ ನಕಾರಾತ್ಮಕವಾದ ವಿಷಯಗಳು ಸಂಭವಿಸಬೇಕೆಂದು ಹೇಳುವುದು “ಶಾಪ” ಎನ್ನುವ ಪದಕ್ಕೆ ಅರ್ಥವಾಗಿದೆ.
- ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವಿಗೆ ಕೇಡು ಆಗಬೇಕೆಂದು ಹೇಳುವಿಕೆ ಶಾಪವಾಗಿರುತ್ತದೆ.
- ಯಾರಿಗಾದರೂ ಕೆಟ್ಟ ವಿಷಯಗಳು ನಡೆಯಬೇಕೆಂದು ಬಯೇಕೆ ಇರುವುದು ಸಹ ಶಾಪದ ಒಂದು ರೂಪವಾಗಿರಬಹುದು.
- ಯಾರಾದರು ಯಾರಿಗಾದರೂ ನಕಾರಾತ್ಮಕವಾದ ಸಂಗತಿಗಳು ನಡೆಯುವಂತೆ ಶಿಕ್ಷಿಸುವುದು ಸಹ ಶಾಪವನ್ನು ಸೂಚಿಸುತ್ತದೆ.
ಅನುವಾದ ಸಲಹೆಗಳು:
- “ಕೆಟ್ಟ ಕಾರ್ಯಗಳು ನಡೆಯುವಂತೆ ಮಾಡುವುದು” ಅಥವಾ “ಕೆಟ್ಟ ಕಾರ್ಯ ನಡೆಯಬೇಕೆಂದು ಘೋಷಿಸುವುದು” ಅಥವಾ “ದುಷ್ಟ ಕಾರ್ಯಗಳು ನಡೆಯುವಂತೆ ಆಣೆಯಿದುವುದು” ಎಂದು ಈ ಪದವನ್ನು ಅನುವಾದ ಮಾಡಬಹುದು.
- ದೇವರು ತನ್ನ ಅವಿಧೇಯ ಜನರನ್ನು ಶಪಿಸಿದರು ಎನ್ನುವ ಸಂದರ್ಭದಲ್ಲಿ, “ಕೆಟ್ಟ ಕಾರ್ಯಗಳು ನಡೆಯುವಂತೆ ಅಪ್ಪಣೆಕೊಟ್ಟು ಶಿಕ್ಷಿಸುವುದು” ಎಂದು ಅನುವಾದ ಮಾಡಬಹುದು.
- “ಶಾಪಗ್ರಸ್ತ” ಎನ್ನುವ ಪದವನ್ನು ಜನರನ್ನು ಕುರಿತಾಗಿ ಹೇಳಲ್ಪಟ್ಟಿರುವಾಗ ಅದನ್ನು “(ಈ ವ್ಯಕ್ತಿಯು) ಬಹಳ ತೊಂದರೆಯನ್ನು ಅನುಭವಿಸುತ್ತಾನೆ” ಎಂದು ಅನುವಾದ ಮಾಡಬಹುದು.
- “ಶಾಪಗ್ರಸ್ತನಾದವನು” ಎನ್ನುವ ಪದವನ್ನು “(ಈ ವ್ಯಕ್ತಿ) ಹೆಚ್ಚಿನ ಸಂಕಟಗಳನ್ನು ಅನುಭವಿಸಲಿ” ಎಂದು ಅನುವಾದ ಮಾಡಬಹುದು.
- “ಭೂಮಿಯು ಶಪಿತವಾಗಿದೆ” ಎನ್ನುವ ವಾಕ್ಯವನ್ನು “ಮಣ್ಣು ಸಾರವಂತವಾಗಿರುವದಿಲ್ಲ” ಎಂದು ಅನುವಾದ ಮಾಡಬಹುದು.
- “ನಾನು ಹುಟ್ಟಿದ ದಿನ ಶಪಿತವಾಗಲಿ” ಎನ್ನುವ ವಾಕ್ಯವನ್ನು “ನಾನು ಎಷ್ಟು ಸಂಕಟವನ್ನು ಅನುಭವಿಸುತ್ತಿದ್ದೇನೆ, ನಾನು ಹುಟ್ಟದಿದ್ದರೆ ಚೆನ್ನಾಗಿರುತಿತ್ತು” ಎಂದು ಅನುವಾದ ಮಾಡಬಹುದು.
- ಹೀಗಿದ್ದಲ್ಲಿ, ಅನುವಾದ ಮಾಡಲ್ಪಡುವ ಭಾಷೆಯಲ್ಲಿ “ಶಾಪಗ್ರಸ್ತನಾದವನು” ಎನ್ನುವ ಪದಕ್ಕೆ ಸಮಾನಾರ್ಥಕ ಪದವಿದ್ದರೆ ಅದನ್ನೇ ಉಪಯೋಗಿಸುವುದು ಒಳ್ಳೆಯದು.
(ಈ ಪದಗಳನ್ನು ಸಹ ನೋಡಿರಿ : ಆಶಿರ್ವಾದ)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಸಮು.14:24-26
- 2 ಪೇತ್ರನು.02:12-14
- ಗಲಾತ್ಯ.03:10-12
- ಗಲಾತ್ಯ.03:13-14
- ಆದಿ.03:14-15
- ಆದಿ.03:17-19
- ಯಾಕೋಬ.03:9-10
- ಅರಣ್ಯ.22:5-6
- ಕೀರ್ತನೆ.109:28-29
ಸತ್ಯವೇದದಿಂದ ಕೆಲವು ಉದಾಹರಣೆಗಳು :
- 02:09 ಯೆಹೋವನಾದ ದೇವರು ಸರ್ಪಕ್ಕೆ “ನೀನು ಶಾಪಗ್ರಸ್ತನಾಗಿರುವೆ” ಎಂದು ಹೇಳಿದನು.
- 02:11 “ಈಗ ಭೂಮಿಯು ಶಾಪಗ್ರಸ್ತವಾಯಿತು, ನೀನು ಆಹಾರವನ್ನು ಬೆಳೆಸಲು ಕಷ್ಟಪಟ್ಟು ಬೆವರು ಸುರಿಸಬೇಕು”
- 04:04 “ನಿನ್ನನ್ನು ಆಶಿರ್ವಾದಿಸುವವರನ್ನು ನಾನು ಆಶಿರ್ವಾದಿಸುವೆನು; ನಿನ್ನನ್ನು ಶಪಿಸುವವರನ್ನು ನಾನು ಶಪಿಸುವೆನು.”
- 39:07 ಆದರೆ ಅವನು, “ಈ ಮನುಷ್ಯನನ್ನು ನಾನರಿಯೆ” ಎಂದು ಹೇಳಿ ತನ್ನನ್ನು ಶಪಿಸಿಕೊಂಡನು.
- 50:16 ಆದಾಮ ಮತ್ತು ಹವ್ವ ದೇವರಿಗೆ ಅವಿಧೇಯರಾಗಿ ಲೋಕಕ್ಕೆ ಪಾಪವನ್ನು ಪ್ರವೇಶಿಸುವಂತೆ ಮಾಡಿದರು, ದೇವರು ಅದನ್ನು ಶಪಿಸಿ ನಾಶ ಮಾಡಲು ನಿಶ್ಚಯಿಸಿದನು.
ಪದ ಡೇಟಾ:
- Strong's: H422, H423, H779, H1288, H2763, H2764, H3994, H5344, H6895, H7043, H7045, H7621, H8381, G331, G332, G685, G1944, G2551, G2652, G2653, G2671, G2672, G6035