46 lines
5.8 KiB
Markdown
46 lines
5.8 KiB
Markdown
# ಶಾಪ, ಶಾಪಗ್ರಸ್ತ, ಶಪಿದನು, ಶಪಿಸುವುದು
|
||
|
||
## ಪದದ ಅರ್ಥವಿವರಣೆ
|
||
|
||
ಶಾಪಗ್ರಸ್ತ ಒಂದು ವಸ್ತು ಅಥವಾ ವ್ಯಕ್ತಿಗೆ ನಕಾರಾತ್ಮಕವಾದ ವಿಷಯಗಳು ಸಂಭವಿಸಬೇಕೆಂದು ಹೇಳುವುದು “ಶಾಪ” ಎನ್ನುವ ಪದಕ್ಕೆ ಅರ್ಥವಾಗಿದೆ.
|
||
|
||
* ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವಿಗೆ ಕೇಡು ಆಗಬೇಕೆಂದು ಹೇಳುವಿಕೆ ಶಾಪವಾಗಿರುತ್ತದೆ.
|
||
* ಯಾರಿಗಾದರೂ ಕೆಟ್ಟ ವಿಷಯಗಳು ನಡೆಯಬೇಕೆಂದು ಬಯೇಕೆ ಇರುವುದು ಸಹ ಶಾಪದ ಒಂದು ರೂಪವಾಗಿರಬಹುದು.
|
||
* ಯಾರಾದರು ಯಾರಿಗಾದರೂ ನಕಾರಾತ್ಮಕವಾದ ಸಂಗತಿಗಳು ನಡೆಯುವಂತೆ ಶಿಕ್ಷಿಸುವುದು ಸಹ ಶಾಪವನ್ನು ಸೂಚಿಸುತ್ತದೆ.
|
||
|
||
## ಅನುವಾದ ಸಲಹೆಗಳು:
|
||
|
||
* “ಕೆಟ್ಟ ಕಾರ್ಯಗಳು ನಡೆಯುವಂತೆ ಮಾಡುವುದು” ಅಥವಾ “ಕೆಟ್ಟ ಕಾರ್ಯ ನಡೆಯಬೇಕೆಂದು ಘೋಷಿಸುವುದು” ಅಥವಾ “ದುಷ್ಟ ಕಾರ್ಯಗಳು ನಡೆಯುವಂತೆ ಆಣೆಯಿದುವುದು” ಎಂದು ಈ ಪದವನ್ನು ಅನುವಾದ ಮಾಡಬಹುದು.
|
||
* ದೇವರು ತನ್ನ ಅವಿಧೇಯ ಜನರನ್ನು ಶಪಿಸಿದರು ಎನ್ನುವ ಸಂದರ್ಭದಲ್ಲಿ, “ಕೆಟ್ಟ ಕಾರ್ಯಗಳು ನಡೆಯುವಂತೆ ಅಪ್ಪಣೆಕೊಟ್ಟು ಶಿಕ್ಷಿಸುವುದು” ಎಂದು ಅನುವಾದ ಮಾಡಬಹುದು.
|
||
* “ಶಾಪಗ್ರಸ್ತ” ಎನ್ನುವ ಪದವನ್ನು ಜನರನ್ನು ಕುರಿತಾಗಿ ಹೇಳಲ್ಪಟ್ಟಿರುವಾಗ ಅದನ್ನು “(ಈ ವ್ಯಕ್ತಿಯು) ಬಹಳ ತೊಂದರೆಯನ್ನು ಅನುಭವಿಸುತ್ತಾನೆ” ಎಂದು ಅನುವಾದ ಮಾಡಬಹುದು.
|
||
* “ಶಾಪಗ್ರಸ್ತನಾದವನು” ಎನ್ನುವ ಪದವನ್ನು “(ಈ ವ್ಯಕ್ತಿ) ಹೆಚ್ಚಿನ ಸಂಕಟಗಳನ್ನು ಅನುಭವಿಸಲಿ” ಎಂದು ಅನುವಾದ ಮಾಡಬಹುದು.
|
||
* “ಭೂಮಿಯು ಶಪಿತವಾಗಿದೆ” ಎನ್ನುವ ವಾಕ್ಯವನ್ನು “ಮಣ್ಣು ಸಾರವಂತವಾಗಿರುವದಿಲ್ಲ” ಎಂದು ಅನುವಾದ ಮಾಡಬಹುದು.
|
||
* “ನಾನು ಹುಟ್ಟಿದ ದಿನ ಶಪಿತವಾಗಲಿ” ಎನ್ನುವ ವಾಕ್ಯವನ್ನು “ನಾನು ಎಷ್ಟು ಸಂಕಟವನ್ನು ಅನುಭವಿಸುತ್ತಿದ್ದೇನೆ, ನಾನು ಹುಟ್ಟದಿದ್ದರೆ ಚೆನ್ನಾಗಿರುತಿತ್ತು” ಎಂದು ಅನುವಾದ ಮಾಡಬಹುದು.
|
||
* ಹೀಗಿದ್ದಲ್ಲಿ, ಅನುವಾದ ಮಾಡಲ್ಪಡುವ ಭಾಷೆಯಲ್ಲಿ “ಶಾಪಗ್ರಸ್ತನಾದವನು” ಎನ್ನುವ ಪದಕ್ಕೆ ಸಮಾನಾರ್ಥಕ ಪದವಿದ್ದರೆ ಅದನ್ನೇ ಉಪಯೋಗಿಸುವುದು ಒಳ್ಳೆಯದು.
|
||
|
||
(ಈ ಪದಗಳನ್ನು ಸಹ ನೋಡಿರಿ : [ಆಶಿರ್ವಾದ](../kt/bless.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು :
|
||
|
||
* [1 ಸಮು.14:24-26](rc://*/tn/help/1sa/14/24)
|
||
* [2 ಪೇತ್ರನು.02:12-14](rc://*/tn/help/2pe/02/12)
|
||
* [ಗಲಾತ್ಯ.03:10-12](rc://*/tn/help/gal/03/10)
|
||
* [ಗಲಾತ್ಯ.03:13-14](rc://*/tn/help/gal/03/13)
|
||
* [ಆದಿ.03:14-15](rc://*/tn/help/gen/03/14)
|
||
* [ಆದಿ.03:17-19](rc://*/tn/help/gen/03/17)
|
||
* [ಯಾಕೋಬ.03:9-10](rc://*/tn/help/jas/03/09)
|
||
* [ಅರಣ್ಯ.22:5-6](rc://*/tn/help/num/22/05)
|
||
* [ಕೀರ್ತನೆ.109:28-29](rc://*/tn/help/psa/109/028)
|
||
|
||
## ಸತ್ಯವೇದದಿಂದ ಕೆಲವು ಉದಾಹರಣೆಗಳು :
|
||
|
||
* __[02:09](rc://*/tn/help/obs/02/09)__ ಯೆಹೋವನಾದ ದೇವರು ಸರ್ಪಕ್ಕೆ “ನೀನು __ಶಾಪಗ್ರಸ್ತನಾಗಿರುವೆ__” ಎಂದು ಹೇಳಿದನು.
|
||
* __[02:11](rc://*/tn/help/obs/02/11)__ “ಈಗ ಭೂಮಿಯು __ಶಾಪಗ್ರಸ್ತವಾಯಿತು__, ನೀನು ಆಹಾರವನ್ನು ಬೆಳೆಸಲು ಕಷ್ಟಪಟ್ಟು ಬೆವರು ಸುರಿಸಬೇಕು”
|
||
* __[04:04](rc://*/tn/help/obs/04/04)__ “ನಿನ್ನನ್ನು ಆಶಿರ್ವಾದಿಸುವವರನ್ನು ನಾನು ಆಶಿರ್ವಾದಿಸುವೆನು; ನಿನ್ನನ್ನು __ಶಪಿಸುವವರನ್ನು__ ನಾನು __ಶಪಿಸುವೆನು__.”
|
||
* __[39:07](rc://*/tn/help/obs/39/07)__ ಆದರೆ ಅವನು, “ಈ ಮನುಷ್ಯನನ್ನು ನಾನರಿಯೆ” ಎಂದು ಹೇಳಿ ತನ್ನನ್ನು __ಶಪಿಸಿಕೊಂಡನು__.
|
||
* __[50:16](rc://*/tn/help/obs/50/16)__ ಆದಾಮ ಮತ್ತು ಹವ್ವ ದೇವರಿಗೆ ಅವಿಧೇಯರಾಗಿ ಲೋಕಕ್ಕೆ ಪಾಪವನ್ನು ಪ್ರವೇಶಿಸುವಂತೆ ಮಾಡಿದರು, ದೇವರು ಅದನ್ನು __ಶಪಿಸಿ__ ನಾಶ ಮಾಡಲು ನಿಶ್ಚಯಿಸಿದನು.
|
||
|
||
## ಪದ ಡೇಟಾ:
|
||
|
||
* Strong's: H422, H423, H779, H1288, H2763, H2764, H3994, H5344, H6895, H7043, H7045, H7621, H8381, G331, G332, G685, G1944, G2551, G2652, G2653, G2671, G2672, G6035
|