3.4 KiB
3.4 KiB
ಗೋಣಿ
ಪದದ ಅರ್ಥವಿವರಣೆ:
ಗೋಣಿ ಎನ್ನುವ ಬಟ್ಟೆಯು ಒಂಟೆಯ ಅಥವಾ ಮೇಕೆಯ ಕೂದಲುಗಳಿಂದ ಮಾಡಲ್ಪಟ್ಟಿರುವ ಒಂದು ವಿಧವಾದ ಒರಟಾದ, ನಯನಾಜೂಕಿಲ್ಲದ ಬಟ್ಟೆಯಾಗಿರುತ್ತದೆ.
- ಈ ರೀತಿಯಾಗಿ ಮಾಡಲ್ಪಟ್ಟಿರುವ ಬಟ್ಟೆಯನ್ನು ಧರಿಸಿದ ವ್ಯಕ್ತಿ ಅಸುಖಕರವಾಗಿರುತ್ತಾನೆ. ಗೋಣಿಯನ್ನು ತಗ್ಗಿಸಿಕೊಂಡಿದ್ದು ಪಶ್ಚಾತ್ತಾಪವನ್ನು, ಪ್ರಲಾಪವನ್ನು ಅಥವಾ ಶೋಕಾಚರಣೆಯನ್ನು ತೋರಿಸುವುದಕ್ಕೆ ಧರಿಸಿಕೊಳ್ಳುತ್ತಾರೆ.
- “ಗೋಣಿ ಮತ್ತು ಬೂದಿ” ಎನ್ನುವ ಮಾತು ಪಶ್ಚಾತ್ತಾಪ ಮತ್ತು ಪ್ರಲಾಪಗಳನ್ನು ಸಾಂಪ್ರದಾಯಿಕವಾಗಿ ತೋರಿಸುವುದಕ್ಕೆ ಸೂಚಿಸುವ ಸಾಮಾನ್ಯ ಪದವಾಗಿರುತ್ತದೆ.
ಅನುವಾದ ಸಲಹೆಗಳು:
- ಈ ಪದವನ್ನು “ಪ್ರಾಣಿಯ ಕೂದಲುಗಳಿಂದ ಮಾಡಲ್ಪಟ್ಟಿರುವ ಕಳಪೆಯ ಬಟ್ಟೆ” ಅಥವಾ “ಮೇಕೆಯ ಕೂದುಲುಗಳಿಂದ ಮಾಡಲ್ಪಟ್ಟಿರುವ ಬಟ್ಟೆಗಳು” ಅಥವಾ “ಒರಟಾದ, ಕರಕರವಾಗಿರುವ ಬಟ್ಟೆ” ಎಂದೂ ಅನುವಾದ ಮಾಡಬಹುದು.
- ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಒರಟಾದ, ಕರಕರವಾಗಿರುವ ಪ್ರಲಾಪ ವಸ್ತ್ರಗಳು” ಎನ್ನುವ ಮಾತು ಒಳಗೊಂಡಿರುತ್ತದೆ.
- “ಗೋಣಿ ಕಟ್ಟಿಕೊಂಡು ಮತ್ತು ಬೂದಿಯಲ್ಲಿ ಕೂತು” ಎನ್ನುವ ಮಾತನ್ನು “ಬೂದಿಯಲ್ಲಿ ಕುಳಿತುಕೊಂಡು, ಹರಿದುಹೋಗಿರುವ ಗೋಣಿ ಬಟ್ಟೆಯನ್ನು ಕಟ್ಟಿಕೊಳ್ಳುವುದರ ಮೂಲಕ ತಗ್ಗಿಸಿಕೊಂಡಿರುವುದನ್ನು ಮತ್ತು ಪ್ರಲಾಪವನ್ನು ತೋರಿಸು” ಎಂದೂ ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬೂದಿ, ಒಂಟೆ, ಮೇಕೆ, ತಗ್ಗಿಸಿಕೊ, ಪ್ರಲಾಪ, ಪಶ್ಚಾತ್ತಾಪ, ಸೂಚನೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8242, G4526