kn_tw/bible/other/goat.md

4.4 KiB

ಮೇಕೆ, ಮೇಕೆಗಳು, ಮೇಕೆಯ ಚರ್ಮ, ಹೋತ, ಮರಿಗಳು

ಪದದ ಅರ್ಥವಿವರಣೆ:

ಮೇಕೆ ಎಂದರೆ ಮಧ್ಯಮ ಗಾತ್ರದ ನಾಲ್ಕು ಕಾಲುಗಳಿರುವ ಪ್ರಾಣಿ, ಇದು ಕುರಿ ಹೋಲಿಕೆಯಲ್ಲಿರುತ್ತದೆ ಮತ್ತು ಇದನ್ನು ಪ್ರಾಥಮಿಕವಾಗಿ ಹಾಲಿಗಾಗಿ ಮತ್ತು ಮಾಂಸಕ್ಕಾಗಿ ಸಾಕುತ್ತಾರೆ. ಚಿಕ್ಕ ಮೇಕೆಯನ್ನು “ಮರಿ” ಎಂದು ಕರೆಯುತ್ತಾರೆ.

  • ಕುರಿಗಳು, ಮೇಕೆಗಳು ಸರ್ವಾಂಗ ಹೋಮ ಮಾಡುವುದಕ್ಕೆ ತುಂಬಾ ಪ್ರಾಮುಖ್ಯವಾದ ಪ್ರಾಣಿಗಳಾಗಿರುತ್ತವೆ, ವಿಶೇಷವಾಗಿ ಪಸ್ಕ ಹಬ್ಬದಲ್ಲಿ ತುಂಬಾ ಪ್ರಾಮುಖ್ಯ.
  • ಕುರಿಗಳು ಮತ್ತು ಮೇಕೆಗಳು ಒಂದೇ ಹೋಲಿಕೆಯಲ್ಲಿದ್ದರೂ, ಅವು ವಿಭಿನ್ನವಾದ ಪ್ರಾಣಿಗಳಾಗಿರುತ್ತವೆ:
  • ಮೇಕೆಗಳಿಗೆ ಒರಟಾದ ಕೂದಲು ಇರುತ್ತವೆ; ಕುರಿಗಳಿಗೆ ಉಣ್ಣೆ ಇರುತ್ತದೆ.
  • ಮೇಕೆಯ ಬಾಲ ನಿಂತಿರುತ್ತದೆ; ಕುರಿಯ ಬಾಲ ಇಳಿದಿರುತ್ತದೆ.
  • ಕುರಿಗಳು ಸಹಜವಾಗಿ ಹಿಂಡಿನೊಂದಿಗೆ ಇರಲು ಇಷ್ಟಪಡುತ್ತವೆ, ಆದರೆ ಮೇಕೆಗಳು ಹೆಚ್ಚಾದ ಸ್ವಾತಂತ್ರ್ಯವನ್ನು ಬಯಸುತ್ತವೆ ಮತ್ತು ಅವು ತಮ್ಮ ಹಿಂಡಿನಿಂದ ದೂರವಿರುವುದಕ್ಕೆ ಇಷ್ಟಪಡುತ್ತವೆ.
  • ಸತ್ಯವೇದದ ಕಾಲಗಳಲ್ಲಿ ಇಸ್ರಾಯೇಲಿನಲ್ಲಿ ಹಾಲಿಗೆ ಮೇಕೆಗಳೇ ಪ್ರಮುಖ ಆಧಾರವಾಗಿದ್ದವು.
  • ಮೇಕೆಯ ಚರ್ಮಗಳನ್ನು ಗುಡಾರಗಳಿಗೆ ಮತ್ತು ದ್ರಾಕ್ಷಾರಸವನ್ನು ಇಟ್ಟುಕೊಳ್ಳುವುದಕ್ಕೆ ಚೀಲಗಳನ್ನು ತಯಾರು ಮಾಡುವುದಕ್ಕೆ ಉಪಯೋಗಿಸುತ್ತಿದ್ದರು.
  • ಹಳೇ ಮತ್ತು ಹೊಸ ಒಡಂಬಡಿಕೆಗಳಲ್ಲಿ ಮೇಕೆ ಅನೀತಿವಂತರಾದ ಜನರನ್ನು ಸೂಚಿಸುವುದಕ್ಕೆ ಉಪಯೋಗಿಸಿದ್ದರು, ಬಹುಶಃ ಅದನ್ನು ಕಾಯುವವನಿಗೆ ದೂರವಿರುವುದಕ್ಕೆ ಇಷ್ಟಪಡುವ ಗುಣಲಕ್ಷಣ ಅದರಲ್ಲಿ ಇದ್ದ ಕಾರಣದಿಂದ ಈ ರೀತಿಯಾಗಿ ಉಪಯೋಗಿಸಿರಬಹುದು.
  • ಇಸ್ರಾಯೇಲ್ಯರು ಕೂಡ ಪಾಪ ಧಾರಕರನ್ನು ಸೂಚಿಸುವುದಕ್ಕೆ ಮೇಕೆಗಳನ್ನು ಉಪಯೋಗಿಸುತ್ತಿದ್ದರು. ಒಂದು ಮೇಕೆಯನ್ನು ಬಲಿ ಕೊಟ್ಟಾಗ, ಯಾಜಕನು ತನ್ನ ಹಸ್ತಗಳನ್ನು ಜೀವಂತವಾಗಿರುವ ಎರಡನೇ ಮೇಕೆಯ ಮೇಲೆ ಇಟ್ಟು ಅದನ್ನು ಅರಣ್ಯದೊಳಗೆ ಕಳುಹಿಸಬೇಕು. ಇದೀಗ ಜನರ ಪಾಪಗಳನ್ನು ಹೊತ್ತಿಕೊಂಡು ಹೋಗುವ ಪ್ರಾಣಿ ಎಂದು ಅದನ್ನು ಸೂಚಿಸುತ್ತಿದ್ದರು.

(ಈ ಪದಗಳನ್ನು ಸಹ ನೋಡಿರಿ : ಹಿಂಡು, ಬಲಿ, ಕುರಿ, ನೀತಿ, ದ್ರಾಕ್ಷಾರಸ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H689, H1423, H1429, H1601, H3277, H3629, H5795, H5796, H6260, H6629, H6842, H6939, H7716, H8163, H8166, H8495, G122, G2055, G2056, G5131