kn_tw/bible/other/wine.md

5.0 KiB

ದ್ರಾಕ್ಷರಸ, ಬುದ್ದಲಿ, ಹೊಸ ದ್ರಾಕ್ಷಾರಸ

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ದ್ರಾಕ್ಷಾರಸ” ಎನ್ನುವ ಪದವನ್ನು ದ್ರಾಕ್ಷಿಗಳು ಎಂದು ಕರೆಯಲ್ಪಡುವ ಹಣ್ಣುಗಳ ರಸದಿಂದ ಮಾಡಿದ ಹುದುಗಿದ ಪಾನೀಯವನ್ನು ಸೂಚಿಸುತ್ತದೆ. ಮದ್ಯಪಾನೀಯವನ್ನು “ದ್ರಾಕ್ಷರಸ ಬುದ್ದಲಿಗಳಲ್ಲಿ” ಸೇಕರಿಸಿ ಇಡುತ್ತಿದ್ದರು, ಈ ಬುದ್ದಲಿಗಳನ್ನು ಪ್ರಾಣಿಯ ಚರ್ಮಗಳಿಂದ ತಯಾರುಸಿದ್ದರು.

  • “ಹೊಸ ದ್ರಾಕ್ಷಾರಸ” ಎನ್ನುವ ಮಾತನ್ನು ದ್ರಾಕ್ಷೆಗಳಿಂದ ಮಾಡಿದ ದ್ರಾಕ್ಷರಸವನ್ನು ಮತ್ತು ಹುದುಗಿಸದ ರಸವನ್ನು ಸೂಚಿಸುತ್ತದೆ. ಕೆಲವೊಂದು ಬಾರಿ “ದ್ರಾಕ್ಷಾರಸ” ಎನ್ನುವ ಪದವನ್ನು ಹುದುಗಿಸದ ದ್ರಾಕ್ಷರಸವನ್ನೂ ಸೂಚಿಸುತ್ತದೆ.
  • ದ್ರಾಕ್ಷಾರಸವನ್ನು ತಯಾರಿಸುವುದಕ್ಕೆ ದ್ರಾಕ್ಷಿಗಳನ್ನು ದ್ರಾಕ್ಷಾರಸ ಗಾಣದಲ್ಲಿ ತುಳಿಸಿ, ಅದರಿಂದ ರಸವನ್ನು ಹೊರ ತೆಗೆಯುತ್ತಾರೆ. ಕೊನೆಗೆ ರಸವನ್ನು ಹುದುಗಿಸಿ, ಅದರಲ್ಲಿ ಮದ್ಯವನ್ನುಂಟು ಮಾಡುತ್ತಾರೆ.
  • ಸತ್ಯವೇದ ಕಾಲದಲ್ಲಿ ದ್ರಾಕ್ಷಾರಸವು ಊಟ ಮಾಡುವ ಸಮಯದಲ್ಲಿ ಸಾಧಾರಣವಾದ ಪಾನೀಯವಾಗಿರುತ್ತದೆ. ಈಗಿನ ಕಾಲದಲ್ಲಿರುವ ಮದ್ಯಪಾನೀಯದಂತೆ ಹೆಚ್ಚಾದ ಮದ್ಯವನ್ನು ಆ ಕಾಲದಲ್ಲಿ ಇರುತ್ತಿಲ್ಲ.
  • ಊಟ ಮಾಡುವುದಕ್ಕೆ ದ್ರಾಕ್ಷರಸವನ್ನು ಇಡುವುದಕ್ಕೆ ಮುಂಚಿತವಾಗಿ, ಅದರಲ್ಲಿ ನೀರನ್ನು ಮಿಶ್ರಣ ಮಾಡುತ್ತಿದ್ದರು.
  • ಹಳೇ ದ್ರಾಕ್ಷಾರಸ ಬುದ್ದಲಿಯೋಳಗೆ ಒಡೆದು ಹೋಗುತ್ತದೆ, ಇದರಿಂದ ಅದರಲ್ಲಿರುವ ದ್ರಾಕ್ಷಾರಸವು ಸೋರು ಹೋಗುತ್ತದೆ. ಹೊಸ ದ್ರಾಕ್ಷಾರಸ ಬುದ್ದಲಿಗಳು ಮೃದುವಾಗಿ ಮತ್ತು ಮೆದುವಾಗಿ ಇರುತ್ತವೆ,
  • ನಿಮ್ಮ ಸಂಸ್ಕೃತಿಯಲ್ಲಿ ದ್ರಾಕ್ಷರಸವು ಗೊತ್ತಿಲ್ಲದಿದ್ದರೆ, “ಹುದುಗಿದ ದ್ರಾಕ್ಷ ರಸ” ಅಥವಾ “ದ್ರಾಕ್ಷಿಗಳೆಂದು ಕರೆಯಲ್ಪಡುವ ಹಣ್ಣಿನಿಂದ ಮಾಡಲ್ಪಟ್ಟಿರುವ ಹುದುಗಿದ ಪಾನೀಯವಾಗಿರುತ್ತದೆ” ಅಥವಾ “ಹುದುಗಿದ ಹಣ್ಣಿನ ರಸ” ಎಂದೂ ಅನುವಾದ ಮಾಡಬಹುದು. (ನೋಡಿರಿ: ಗೊತ್ತಿಲ್ಲದವುಗಳನ್ನು ಹೇಗೆ ಅನುವಾದ ಮಾಡಬೇಕು)
  • “ದ್ರಾಕ್ಷಾರಸ ಬುದ್ದಲಿ” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನದಲ್ಲಿ “ದ್ರಾಕ್ಷಾರಸಕ್ಕಾಗಿ ಮಾಡಿರುವ ಚೀಲ” ಅಥವಾ “ಪ್ರಾಣಿಯ ಚರ್ಮದ ದ್ರಾಕ್ಷಾರಸ ಚೀಲ” ಅಥವಾ “ದ್ರಾಕ್ಷಾರಸವನ್ನು ಸೇಕರಣೆ ಮಾಡುವುದಕ್ಕೆ ತಯಾರಿಸಿದ ಪ್ರಾಣಿಯ ಚರ್ಮದ ಚೀಲ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ದ್ರಾಕ್ಷಿ, ದ್ರಾಕ್ಷಿಬಳ್ಳಿ, ದ್ರಾಕ್ಷಿತೋಟ, ದ್ರಾಕ್ಷಾರಸ ಗಾಣ)

ಸತ್ಯವೇದದ ಅನುಬಂಧ ವಾಕ್ಯಗಳು :

ಜಜ್ಜಲ್ಪಟ್ಟಿದೆ

ಪದ ಡೇಟಾ:

  • Strong's: H2561, H2562, H3196, H4469, H4997, H5435, H6025, H6071, H8492, G1098, G3631, G3820, G3943