kn_tw/bible/other/winepress.md

2.8 KiB

ದ್ರಾಕ್ಷಾರಸ ಗಾಣ ಅಥವಾ ಆಲೆಮನೆ

ಪದದ ಅರ್ಥವಿವರಣೆ:

ಸತ್ಯವೇದದ ಕಾಲದಲ್ಲಿ “ದ್ರಾಕ್ಷಾರಸ ಗಾಣ” ಅಥವಾ "ಆಲೆಮನೆ"" ಎನ್ನುವ ಮಾತು ಒಂದು ದೊಡ್ಡ ಪಾತ್ರೆಯನ್ನು ಸೂಚಿಸುತ್ತದೆ ಅಥವಾ ದ್ರಾಕ್ಷಾರಸವನ್ನು ಮಾಡುವುದಕ್ಕೆ ದ್ರಾಕ್ಷಿಗಳಿಂದ ರಸವನ್ನು ಹೊರ ತೆಗೆಯುವ ಸ್ಥಳವನ್ನು ಸೂಚಿಸುತ್ತದೆ.

  • ಇಸ್ರಾಯೇಲಿನಲ್ಲಿ ದ್ರಾಕ್ಷಾರಸ ಗಾಣಗಳು ಸಾಧಾರಣವಾಗಿ ದೊಡ್ಡದಾಗಿರುತ್ತವೆ, ಬಲವಾದ ಬಂಡೆಗಳನ್ನು ಅಗೆದು ದೊಡ್ಡ ವಿಸ್ತಾರವಾದ ಬೋಗುಣಿಗಳಾಗಿರುತ್ತವೆ. ದ್ರಾಕ್ಷಿಗಳ ಗೊಂಚಲುಗಳನ್ನು ಆ ಗುಂಡಿಯ ಕೆಳಭಾಗದಲ್ಲಿ ಇಟ್ಟಿರುತ್ತಾರೆ ಮತ್ತು ಜನರು ದ್ರಾಕ್ಷಾರಸವನ್ನು ತೆಗೆಯುವುದಕ್ಕೆ ತಮ್ಮ ಕಾಲುಗಳ ಮೂಲಕ ಅವುಗಳನ್ನು ತುಳಿಯುತ್ತಾರೆ.
  • ಸಾಧಾರಣವಾಗಿ ದ್ರಾಕ್ಷಾರಸ ಗಾಣವು ಎರಡು ಮಟ್ಟಗಳು ಹೊಂದಿರುತ್ತವೆ, ಮೇಲ್ಮಟ್ಟದಲ್ಲಿ ದ್ರಾಕ್ಷಿಗಳನ್ನು ತುಳಿಯುವುದರ ಮೂಲಕ ರಸವು ಕೆಳಮಟ್ಟಕ್ಕೆ ಇಳಿದು ಹೋಗಿ ಅಲ್ಲಿ ಸಂಗ್ರಹವಾಗಿರುತ್ತದೆ.
  • “ದ್ರಾಕ್ಷಾರಸ ಗಾಣ” ಎನ್ನುವ ಮಾತು ದುಷ್ಟ ಜನರ ಮೇಲೆ ದೇವರ ಕ್ರೋಧವು ಸುರಿಸಲ್ಪಡುವ ಸನ್ನಿವೇಶವನ್ನು ಸೂಚಿಸುವುದಕ್ಕೆ ಸತ್ಯವೇದದಲ್ಲಿ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ. (ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ದ್ರಾಕ್ಷಿ, ಕ್ರೋಧ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ದತ್ತಾಂಶ:

  • Strong's: H1660, H3342, H6333, G3025, G5276