kn_tw/bible/other/vine.md

2.9 KiB

ಬಳ್ಳಿ, ಬಳ್ಳಿಗಳು

ಪದದ ಅರ್ಥವಿವರಣೆ:

“ದ್ರಾಕ್ಷಬಳ್ಳಿ” ಎನ್ನುವ ಪದವು ನೆಲದ ಮೇಲೆ ಜಾಡುಗಳನ್ನು ಹಾಕುವುದರ ಮೂಲಕ ಬೆಳೆಯುವ ಮರವನ್ನು ಸೂಚಿಸುತ್ತದೆ ಅಥವಾ ಮರಗಳನ್ನು ಮೇಲಕ್ಕೆ ಏರಿಸುವುದರ ಮೂಲಕ ಮತ್ತು ಇತರ ಪದ್ಧತಿಗಳ ಮೂಲಕ ಬೆಳೆಯುವ ತೋಟವನ್ನು ಸೂಚಿಸುತ್ತದೆ. ಸತ್ಯವೇದದಲ್ಲಿ “ದ್ರಾಕ್ಷಬಳ್ಳಿ” ಎನ್ನುವ ಪದವು ಫಲಗಳನ್ನು ಕೊಡುವ ದ್ರಾಕ್ಷಿ ಗಿಡಗಳನ್ನು ಮತ್ತು ದ್ರಾಕ್ಷಿ ಬಳ್ಳಿಗಳನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.

  • ಸತ್ಯವೇದದಲ್ಲಿ “ಬಳ್ಳಿ” ಎನ್ನುವ ಪದವು ಅತೀ ಹೆಚ್ಚಾಗಿ ಯಾವಾಗಲೂ “ದ್ರಾಕ್ಷಿಬಳ್ಳಿ” ಎಂದರ್ಥದಲ್ಲಿಯೇ ಉಪಯೋಗಿಸಲ್ಪಟ್ಟಿರುತ್ತದೆ.
  • ದ್ರಾಕ್ಷಿಬಳ್ಳಿಯ ಕೊಂಬೆಗಳು ಮುಖ್ಯ ಕಾಂಡಕ್ಕೆ ಅಂಟಿಕೊಂಡಿರುತ್ತವೆ, ಯಾಕಂದರೆ ಆ ಕಾಂಡದಿಂದಲೇ ನೀರು ಮತ್ತು ಇತರ ಪೋಷಕಗಳು ಬಳ್ಳಿಗಳಿಗೆ ಹೋಗುತ್ತಿರುತ್ತವೆ, ಇದರಿಂದ ಅವು ಬೆಳೆಯುತ್ತವೆ.
  • ಯೇಸು ತನ್ನ ಕುರಿತು “ದ್ರಾಕ್ಷಿಬಳ್ಳಿ” ಎಂದು ಮತ್ತು ತನ್ನ ಜನರ ಕುರಿತಾಗಿ “ಕೊಂಬೆಗಳು” ಎಂದು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ “ಬಳ್ಳಿ” ಎನ್ನುವ ಪದವನ್ನು “ದ್ರಾಕ್ಷಿಬಳ್ಳಿ ಕಾಂಡ” ಅಥವಾ “ದ್ರಾಕ್ಷಿ ಗಿಡದ ಕಾಂಡ” ಎಂದೂ ಅನುವಾದ ಮಾಡಬಹುದು. (ನೋಡಿರಿ: ರೂಪಕಾಲಂಕಾರ)

(ಈ ಪದಗಳನ್ನು ಸಹ ನೋಡಿರಿ : ದ್ರಾಕ್ಷಿ, ದ್ರಾಕ್ಷಿತೋಟ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5139, H1612, H8321, G288, G290, G1009, G1092