kn_tw/bible/other/jewishleaders.md

7.2 KiB

ಯೆಹೂದ್ಯರ ಅಧಿಕಾರಿಗಳು, ಯೆಹೂದ್ಯರ ನಾಯಕ

ಸತ್ಯಾಂಶಗಳು:

“ಯೆಹೂದ್ಯರ ನಾಯಕ” ಅಥವಾ “ಯೆಹೂದ್ಯ ಅಧಿಕಾರ” ಎನ್ನುವ ಪದವು ದೇವರ ಧರ್ಮಶಾಸ್ತ್ರದ ಬೋಧಕರಾಗಿರುವ ಮತ್ತು ಯಾಜಕರಾಗಿರುವ ಧರ್ಮದ ನಾಯಕರನ್ನುಸೂಚಿಸುತ್ತದೆ. ಭಕ್ತಿಗೆ ಅಥವಾ ಧರ್ಮಕ್ಕೆ ಸಂಬಂಧವಿಲ್ಲದ ವಿಷಯಗಳ ಕುರಿತಾಗಿಯೂ ಅವರು ತೀರ್ಪುಗಳನ್ನು ಮಾಡುವ ಅಧಿಕಾರವನ್ನು ಅವರು ಹೊಂದಿರುತ್ತಾರೆ.

  • ಯೆಹೂದ್ಯರ ನಾಯಕರು ಮಹಾ ಯಾಜಕರು, ಪ್ರಧಾನ ಯಾಜಕರು ಮತ್ತು ಶಾಸ್ತ್ರಿಗಳು (ದೇವರ ಧರ್ಮಶಾಸ್ತ್ರದ ಬೋಧಕರು) ಆಗಿದ್ದರು.
  • ಯೆಹೂದ್ಯರ ನಾಯಕರ ಎರಡು ಮುಖ್ಯ ಗುಂಪುಗಳು ಫರಿಸಾಯರು ಮತ್ತು ಸದ್ದುಕಾಯರು ಆಗಿರುತ್ತಾರೆ.
  • ಧರ್ಮಶಾಸ್ತ್ರದ ವಿಷಯಗಳ ಕುರಿತಾಗಿ ತೀರ್ಪುಗಳನ್ನು ಮಾಡುವುದಕ್ಕೆ ಯೆರೂಸಲೇಮಿನಲ್ಲಿ ಯೆಹೂದ್ಯ ಕೌನ್ಸಿಲ್.ನಲ್ಲಿ ಎಪ್ಪತ್ತು ಮಂದಿ ಯೆಹೂದ್ಯ ನಾಯರು ಭೇಟಿಯಾಗಿದ್ದರು.
  • ಅನೇಕಮಂದಿ ಯೆಹೂದ್ಯ ನಾಯಕರು ತಾವು ನೀತಿವಂತರೆಂದು ಆಲೋಚನೆ ಮಾಡುತ್ತಾರೆ ಮತ್ತು ಅಹಂಕಾರಿಗಳಾಗಿರುತ್ತಾರೆ. ಅವರಿಗೆ ಯೇಸು ಅಂದರೆ ಅಸೂಯೆ ಮತ್ತು ಆತನನ್ನು ಸಾಯಿಸಬೇಕೆಂದಿದ್ದರು. ಅವರಿಗೆ ದೇವರಿಗೆ ಗೊತ್ತೆಂದು ಹೇಳಿಕೊಳ್ಳುತ್ತಾರೆ, ಆದರೆ ಆತನಿಗೆ ವಿಧೇಯತೆ ತೋರಿಸುವುದಿಲ್ಲ.
  • “ಯೆಹೂದ್ಯರು” ಎನ್ನುವ ಮಾತು ಅನೇಕಬಾರಿ ಯೆಹೂದ್ಯರ ನಾಯಕರನ್ನು ಸೂಚಿಸುತ್ತದೆ, ವಿಶೇಷವಾಗಿ ಅವರು ಯೇಸುವಿನ ವಿಷಯದಲ್ಲಿ ಕೋಪದಲ್ಲಿದ್ದು, ಆತನಿಗೆ ಹಾನಿಯನ್ನುಂಟು ಮಾಡಬೇಕೆಂದು ಯತ್ನಿಸುವ ಸಂದರ್ಭಗಳಲ್ಲಿ ಸೂಚಿಸಲ್ಪಟ್ಟಿರುತ್ತದೆ.
  • ಈ ಪದಗಳನ್ನು “ಯೆಹೂದ್ಯರ ಪಾಲಕರು” ಅಥವಾ “ಯೆಹೂದ್ಯ ಜನರ ಮೇಲೆ ಆಳುವ ವ್ಯಕ್ತಿಗಳು” ಅಥವಾ “ಯೆಹೂದ್ಯ ಧರ್ಮದ ನಾಯಕರು” ಎಂಬುದಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಯೆಹೂದ್ಯ, ಪ್ರಧಾನ ಯಾಜಕರು, ಕೌನ್ಸಿಲ್, ಮಹಾ ಯಾಜಕ, ಫರಿಸಾಯ, ಯಾಜಕ, ಸದ್ದುಕಾಯ, ಶಾಸ್ತ್ರಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 24:03 ಅನೇಕಮಂದಿ __ ಧರ್ಮದ ನಾಯಕರು __ ಯೋಹಾನನಿಂದ ದೀಕ್ಷಾಸ್ನಾನ ಪಡೆದುಕೊಳ್ಳುವುದಕ್ಕೆ ಬಂದಿದ್ದರು, ಆದರೆ ಆವರು ತಮ್ಮ ಪಾಪಗಳನ್ನು ಒಪ್ಪಿಕೊಂಡಿರಲಿಲ್ಲ ಅಥವಾ ಪಾಪಗಳಿಗೆ ಪಶ್ಚಾತ್ತಾಪ ಹೊಂದಿರಲಿಲ್ಲ.
  • 37:11 ಆದರೆ __ ಯೆಹೂದ್ಯರ ಧರ್ಮದ ನಾಯಕರು __ ಅಸೂಯೆಪಟ್ಟಿದ್ದರು, ಆದ್ದರಿಂದ ಅವರು ಯೇಸುವನ್ನು ಮತ್ತು ಲಾಜರನನ್ನು ಹೇಗೆ ಕೊಲ್ಲಬೇಕೆಂದು ಪ್ರಣಾಳಿಕೆ ಮಾಡುವುದಕ್ಕೆ ಭೇಟಿಯಾಗಿದ್ದರು.
  • 38:02 ಯೇಸು ಮೆಸ್ಸೀಯನೆಂದು __ ಯೆಹೂದ್ಯರ ನಾಯಕರು __ ತಿರಸ್ಕರಿಸುತ್ತಿದ್ದಾರೆಂದು ಮತ್ತು ಅವರು ಆತನನ್ನು ಸಾಯಿಸುವುದಕ್ಕೆ ಆಲೋಚನೆ ಮಾಡುತ್ತಿದ್ದರೆಂದು ಮಾಡುತ್ತಿದ್ದಾರೆಂದು ಅವನಿಗೆ (ಯೂದಾನಿಗೆ) ಗೊತ್ತಿತ್ತು.
  • 38:03 ಮಹಾ ಯಾಜಕನಿಂದ __ ಯೆಹೂದ್ಯ ನಾಯಕರು __ ನಡೆಸಲ್ಪಟ್ಟಿದ್ದರು, ಯೇಸುವನ್ನು ಹಿಡಿಸಿಕೊಡುವುದಕ್ಕೆ ಯೂದಾನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟಿದ್ದರು.
  • 39:05 “ಆತನು (ಯೇಸು) ಸಾಯುವುದಕ್ಕೆ ಯೋಗ್ಯನು” ಎಂದು ಹೇಳುವುದಕ್ಕೆ __ ಯೆಹೂದ್ಯರ ನಾಯಕರು __ ಮಹಾ ಯಾಜಕನಿಗೆ ಎಲ್ಲಾ ಉತ್ತರಗಳನ್ನು ಹೇಳಿದ್ದರು,
  • 39:09 ಆ ಮರುದಿನ ಬೆಳಿಗ್ಗೆ, __ ಯೆಹೂದ್ಯರ ನಾಯಕರು __ ರೋಮಾ ಪಾಲಕನಾದ ಪಿಲಾತನ ಬಳಿಗೆ ಯೇಸುವನ್ನು ಕರೆದುಕೊಂಡು ಬಂದರು.
  • 39:11 ಆದರೆ __ ಯೆಹೂದ್ಯ ನಾಯಕರು __ ಮತ್ತು ಜನ ಸಮೂಹವು “ಅವನ್ನು ಶಿಲುಬೆಗೇರಿಸಿ” ಎಂದು ಜೋರಾಗಿ ಕೂಗಿದರು.
  • 40:09 ಯೇಸು ಮೆಸ್ಸೀಯನೆಂದು ನಂಬಿದ ಇಬ್ಬರು __ ಯೆಹೂದ್ಯರ ನಾಯಕರಾದ __ ಯೋಸೇಫ ಮತ್ತು ನಿಕೊದೇಮರು ಯೇಸುವಿನ ದೇಹಕ್ಕಾಗಿ ಪಿಲಾತನನ್ನು ಕೇಳಿಕೊಂಡರು.
  • 44:07 ಆ ದಿನವಾದನಂತರ, __ ಯೆಹೂದ್ಯ ನಾಯಕರು __ ಮಹಾ ಯಾಜಕ ಮತ್ತು ಇತರ __ ಧರ್ಮ ನಾಯಕರ __ ಬಳಿಗೆ ಪೇತ್ರನನ್ನು ಮತ್ತು ಯೋಹಾನನನ್ನು ಕರೆದುಕೊಂಡು ಬಂದರು.

ಪದ ಡೇಟಾ:

  • Strong's: G2453