3.3 KiB
3.3 KiB
ಶಾಸ್ತ್ರಿ, ಶಾಸ್ತ್ರಿಗಳು
ಪದದ ಅರ್ಥವಿವರಣೆ:
ಶಾಸ್ತ್ರಿಗಳು ಪ್ರಭುತ್ವದ ಅಧಿಕಾರಿಗಳಾಗಿದ್ದರು, ಇವರು ತಮ್ಮ ಹಸ್ತಗಳ ಮೂಲಕ ಪ್ರಾಮುಖ್ಯವಾದ ಪ್ರಭುತ್ವದ ಅಥವಾ ಧರ್ಮಸಂಬಂಧವಾದ ಪತ್ರಗಳನ್ನು ನಕಲು ಮಾಡುವುದರಲ್ಲಿ ಅಥವಾ ಬರೆಯುವುದರಲ್ಲಿ ಬಾಧ್ಯತೆಯನ್ನು ತೆಗೆದುಕೊಂಡಿದ್ದರು. ಯೆಹೂದ್ಯ ಶಾಸ್ತ್ರಿಗೆ ಇನ್ನೊಂದು ಹೆಸರು “ಯೆಹೂದ್ಯ ಧರ್ಮಶಾಸ್ತ್ರದಲ್ಲಿ ನಿಪುಣರು” ಎಂದಾಗಿತ್ತು.
- ಹಳೇ ಒಡಂಬಡಿಕೆಯ ಪುಸ್ತಕಗಳನ್ನು ಭದ್ರಪಡಿಸುವುದರಲ್ಲಿ ಮತ್ತು ನಕಲು ಮಾಡುವುದರಲ್ಲಿ ಶಾಸ್ತ್ರಿಗಳನ್ನು ಬಾಧ್ಯತೆಯನ್ನು ಹೊಂದಿದ್ದರು.
- ದೇವರ ಧರ್ಮಶಾಸ್ತ್ರದ ಮೇಲೆ ಭಕ್ತಿಸಂಬಂಧವಾದ ಅಭಿಪ್ರಾಯಗಳನ್ನು ಮತ್ತು ವ್ಯಾಖ್ಯೆಗಳನ್ನು ಅನುವಾದ ಮಾಡುತ್ತಿದ್ದರು, ಭದ್ರಪಡಿಸುತ್ತಿದ್ದರು ಮತ್ತು ನಕಲು ಮಾಡುತ್ತಿದ್ದರು.
- ಅನೇಕ ಸಮಯಗಳಲ್ಲಿ ಶಾಸ್ತ್ರಿಗಳು ಪ್ರಾಮುಖ್ಯವಾದ ಪ್ರಭುತ್ವ ಅಧಿಕಾರಿಗಳಾಗಿದ್ದರು.
- ಸತ್ಯವೇದದಲ್ಲಿ ಪ್ರಮುಖ ಶಾಸ್ತ್ರಿಗಳಲ್ಲಿ ಬಾರೂಕ ಮತ್ತು ಎಜ್ರಗಳಿದ್ದರು.
- ಹೊಸ ಒಡಂಬಡಿಕೆಯಲ್ಲಿ “ಶಾಸ್ತ್ರಿಗಳು” ಎನ್ನುವ ಪದವನ್ನು “ಧರ್ಮಶಾಸ್ತ್ರದ ಬೋಧಕರು” ಎಂದೂ ಅನುವಾದ ಮಾಡಬಹುದು.
- ಹೊಸ ಒಡಂಬಡಿಕೆಯಲ್ಲಿ ಶಾಸ್ತ್ರಿಗಳು “ಫರಿಸಾಯರು” ಎನ್ನುವ ಧರ್ಮ ಗುಂಪಿನಲ್ಲಿ ಭಾಗವಾಗಿರುತ್ತಾರೆ, ಮತ್ತು ಎರಡು ಗುಂಪುಗಳ ಹೆಸರುಗಳನ್ನು ಅನೇಕಬಾರಿ ಸೇರಿ ದಾಖಲಿಸಿರುವುದನ್ನು ನಾವು ನೋಡಬಹುದು.
(ಈ ಪದಗಳನ್ನು ಸಹ ನೋಡಿರಿ : ಧರ್ಮಶಾಸ್ತ್ರ, ಫರಿಸಾಯ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.04:5-7
- ಲೂಕ.07:29-30
- ಲೂಕ.20:45-47
- ಮಾರ್ಕ.01:21-22
- ಮಾರ್ಕ.02:15-16
- ಮತ್ತಾಯ.05:19-20
- ಮತ್ತಾಯ.07:28-29
- ಮತ್ತಾಯ.12:38-39
- ಮತ್ತಾಯ.13:51-53
ಪದ ಡೇಟಾ:
- Strong's: H5608, H5613, H7083, G1122