4.3 KiB
4.3 KiB
ಹಿರಿಸಭೆ, ಹಿರಿಸಭೆಗಳು
ಪದದ ಅರ್ಥವಿವರಣೆ:
ಹಿರಿಸಭೆ (ಕೌನ್ಸಿಲ್) ಎನ್ನುವ ಪದಕ್ಕೆ ಪ್ರಾಮುಖ್ಯವಾದ ವಿಷಯಗಳ ಕುರಿತಾಗಿ ಚರ್ಚೆ ಮಾಡಲು, ಸಲಹೆಗಳನ್ನು ಕೊಡಲು ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳಲು ಭೇಟಿಯಾಗುವ ಜನರ ಗುಂಪು ಎಂದರ್ಥ.
- ಹಿರಿಸಭೆ (ಕೌನ್ಸಿಲ್) ಎನ್ನುವದನ್ನು ಸಹಜವಾಗಿ ಒಂದು ವಿಶೇಷವಾದ ಉದ್ದೇಶಕ್ಕಾಗಿ ಯಾವಾಗಲೂ ಸ್ಥಿರವಾಗಿರಲು ಮತ್ತು ಅಧೀಕೃತವಾಗಿರಲು ಆಯೋಜನೆಮಾಡಲಾಗುತ್ತದೆ. ಅಷ್ಟೇಅಲ್ಲದೇ ಕಾನೂನುಬದ್ಧವಾದ ವಿಷಯಗಳ ಕುರಿತಾಗಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ.
- ಯೆರೂಸಲೇಮಿನಲ್ಲಿರುವ “ಯೆಹೂದ್ಯ ಕೌನ್ಸಿಲ್ (ಹಿರಿಸಭೆ)” ಅಥವಾ 70 ಸದಸ್ಯರು ಇರುವ “ಸೆನ್ಹೆದ್ರಿನ್” ಸಭೆಯಲ್ಲಿ ಪ್ರಧಾನ ಯಾಜಕರು, ಹಿರಿಯರು, ಶಾಸ್ತ್ರಿಗಳು, ಫರಿಸಾಯರು, ಮತ್ತು ಸದ್ದುಕಾಯರು ಯೆಹೂದ್ಯರ ಧರ್ಮಶಾಸ್ತ್ರ ವಿಷಯಗಳನ್ನು ನಿರ್ಣಯಿಸಲು ನಿಯಮಿತವಾಗಿ ಕೂಡಿಕೊಳ್ಳುತ್ತಿದ್ದರು. ಈ ಹಿರಿಸಭೆಯ (ಕೌನ್ಸಿಲ್) ಧರ್ಮದ ನಾಯಕರೆಲ್ಲರು ಸೇರಿ ಯೇಸುವನ್ನು ತೀರ್ಪಿಗೆ ನಿಲ್ಲಿಸಿದರು ಮತ್ತು ಆತನು ಕೊಂದುಹಾಕಬೇಕೆಂದು ನಿರ್ಣಯಿಸಿದರು.
- ಇತರ ಪಟ್ಟಣಗಳಲ್ಲಿ ಚಿಕ್ಕ ಚಿಕ್ಕ ಯೆಹೂದ್ಯ ಹಿರಿಸಭೆಗಳು (ಕೌನ್ಸಿಲ್.ಗಳು) ಇದ್ದಿದ್ದವು.
- ಸುವಾರ್ತೆಯನ್ನು ಬೋಧಿಸುತ್ತಿದ್ದಕ್ಕೆ ಅಪೊಸ್ತಲನಾದ ಪೌಲನನ್ನು ಸೆರೆಮನೆ ಹಾಕಿದಾಗ, ಆತನನ್ನು ರೋಮಾ ಕೌನ್ಸಿಲ್ ಮುಂದಕ್ಕೆ ಕರೆದುಕೊಂಡು ಬಂದಿದ್ದರು.
- ಸಂದರ್ಭಕ್ಕೆ ತಕ್ಕಂತೆ, “ಹಿರಿಸಭೆ (ಕೌನ್ಸಿಲ್)” ಎನ್ನುವ ಪದವನ್ನು “ಕಾನೂನು ಸಭೆ” ಅಥವಾ “ರಾಜಕೀಯ ಸಭೆ” ಎಂದೂ ಅನುವಾದ ಮಾಡಬಹುದು.
- “ಹಿರಿಸಭೆಯಲ್ಲಿ ಎನ್ನುವ ಪದಕ್ಕೆ ಏನಾದರೊಂದು ವಿಷಯವನ್ನು ನಿರ್ಣಯಿಸುವುದಕ್ಕೆ ಭೇಟಿಯಾಗುವ ವಿಶೇಷವಾದ ಕೂಟ ಎಂದರ್ಥ.
- ಆಂಗ್ಲ ಭಾಷೆಯಲ್ಲಿ “ಕೌನ್ಸಲ್ (counsel)” ಎಂದು ಇನ್ನೊಂದು ಪದವುಂಟು, ಆದರೆ ಈ ಪದಕ್ಕೆ “ಜ್ಞಾನವುಳ್ಳ ಸಲಹೆ” ಎಂದರ್ಥ. `
(ಈ ಪದಗಳನ್ನು ಸಹ ನೋಡಿರಿ : ವಿಧಾನಸಭೆ, ಜ್ಞಾನದ ಜ್ಞಾನದ ಆಲೋಚನೆ, ಫರಿಸಾಯ, ಧರ್ಮಶಾಸ್ತ್ರ, ಯಾಜಕ, ಸದ್ದುಕಾಯ, ಶಾಸ್ತ್ರಿ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.07:57-58
- ಅಪೊ.ಕೃತ್ಯ.24:20-21
- ಯೋಹಾನ.03:1-2
- ಲೂಕ.22:66-68
- ಮಾರ್ಕ.13:9-10
- ಮತ್ತಾಯ.05:21-22
- ಮತ್ತಾಯ.26:59-61
ಪದ ಡೇಟಾ:
- Strong's: H4186, H5475, H7277, G1010, G4824, G4892