kn_tw/bible/other/counselor.md

3.8 KiB

ಸಲಹೆ, ಸೂಚನೆ, ಸಲಹೆಗಾರ, ಸಲಹೆಗಾರರು, ಜ್ಞಾನದ ಆಲೋಚನೆ, ಆಲೋಚನೆ ಹೇಳುವಾತ

ಪದದ ಅರ್ಥವಿವರಣೆ:

“ಆಲೋಚನೆ” ಮತ್ತು “ಸಲಹೆ” ಎನ್ನುವ ಪದಗಳು ಒಂದೇ ಅರ್ಥವನ್ನು ಹೊಂದಿರುತ್ತವೆ, ಒಂದು ನಿರ್ಧಿಷ್ಟವಾದ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದೆನ್ನುವದರ ಕುರಿತಾಗಿ ಒಬ್ಬರಿಗೆ ಜ್ಞಾನದ ನಿರ್ಣಯವನ್ನು ತೆಗೆದುಕೊಳ್ಳಲು ಸಹಾಯ ಮಾಡುವುದನ್ನು ಸೂಚಿಸುತ್ತದೆ. ಜ್ಞಾನವುಳ್ಳ “ಆಲೋಚನೆ ಹೇಳುವಾತನು” ಅಥವಾ “ಸಲಹೆಗಾರನು” ಎಂದರೆ ಒಬ್ಬ ವ್ಯಕ್ತಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಸಲಹೆಗಳನ್ನು ಅಥವಾ ಜ್ಞಾನದ ಆಲೋಚನೆಗಳನ್ನು ಕೊಡುವ ವ್ಯಕ್ತಿ ಎಂದರ್ಥ.

  • ಅರಸರು ತಾವು ಆಳುತ್ತಿರುವ ಜನರ ಮೇಲೆ ಪ್ರಭಾವ ಬೀರುವಂತಹ ಪ್ರಾಮುಖ್ಯವಾದ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಸಹಾಯ ಮಾಡಲು ತಮ್ಮ ಬಳಿ ಅಧೀಕೃತ ಸಲಹೆಗಾರರನ್ನು ಅಥವಾ ಜ್ಞಾನದ ಆಲೋಚನೆಗಳನ್ನು ಹೇಳುವವರನ್ನು ಇಟ್ಟುಕೊಳ್ಳುತ್ತಿದ್ದರು.
  • ಕೆಲವೊಂದುಬಾರಿ ಕೊಡಲ್ಪಟ್ಟ ಸಲಹೆ ಅಥವಾ ಜ್ಞಾನದ ಆಲೋಚನೆಯು ಸರಿಯಾಗಿರುವುದಿಲ್ಲ. ದುಷ್ಟ ಸಲಹೆಗಾರರು ಅರಸನಿಗೂ ಅಥವಾ ತನ್ನ ಜನರಿಗೂ ಹಾನಿಯನ್ನುಂಟು ಮಾಡುವ ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ಅಥವಾ ಕಾರ್ಯಗಳನ್ನು ಮಾಡುವಂತೆ ಅರಸನನ್ನು ಒತ್ತಾಯ ಮಾಡುತ್ತಾರೆ.
  • ಸಂದರ್ಭಾನುಸಾರವಾಗಿ “ಸಲಹೆ” ಅಥವಾ “ಜ್ಞಾನದ ಆಲೋಚನೆ” ಎನ್ನುವ ಪದಗಳನ್ನು “ನಿರ್ಣಯ ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುವುದು” ಅಥವಾ “ಎಚ್ಚರಿಕೆಗಳು” ಅಥವಾ “ಸೂಚನೆಗಳು” ಅಥವಾ “ಮಾರ್ಗದರ್ಶನಗಳು” ಎಂದೂ ಅನುವಾದ ಮಾಡಬಹುದು.
  • “ಜ್ಞಾನದ ಆಲೋಚನೆ” ಎನ್ನುವ ಪದಕ್ಕೆ “ಸಲಹೆ” ಅಥವಾ “ಸಲಹೆಗಳನ್ನು ಕೊಡು” ಅಥವಾ “ಎಚ್ಚರಿಸು” ಎನ್ನುವ ಪರ್ಯಾಯ ಪದಗಳುಂಟು.
  • “ಜ್ಞಾನದ ಆಲೋಚನೆ” (ಕೌನ್ಸಲ್) ಎನ್ನುವ ಪದವು ಮತ್ತು ಜನರ ಗುಂಪನ್ನು ಸೂಚಿಸುವ “ಹಿರಿಸಭೆ” (ಕೌನ್ಸಿಲ್) ಎನ್ನುವ ಪದವು ಬೇರೆ ಬೇರೆಯಾಗಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಎಚ್ಚರಿಸು, ಪವಿತ್ರಾತ್ಮ, ಜ್ಞಾನಿ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H1697, H1847, H1875, H1884, H1907, H3272, H3289, H3982, H4156, H4431, H5475, H5779, H6440, H6963, H6098, H7592, H8458, G1011, G1012, G1106, G4823, G4825