kn_tw/bible/other/assembly.md

4.7 KiB

ವಿಧಾನಸಭೆ, ವಿಧಾನಸಭೆಗಳು, ಗುಂಪುಸೇರಿಸು, ಗುಂಪು ಗೂಡಿಸಲ್ಪಟ್ಟಿದೆ

ಪದದ ಅರ್ಥವಿವರಣೆ:

ಹಳೇ ಒಡಂಬಡಿಕೆ

“ವಿಧಾನಸಭೆ” ಎನ್ನುವ ಪದವನ್ನು ಸಹಜವಾಗಿ ಜನರೆಲ್ಲರು ಸಮಸ್ಯೆಗಳನ್ನು ಚರ್ಚಿಸುವುದಕ್ಕೆ, ಸಲಹೆ ಕೊಡುವುದಕ್ಕೆ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಸೇರಿ ಬರುವ ಒಂದು ಗುಂಪನ್ನು ಸೂಚಿಸುತ್ತದೆ. ಹಳೇ ಒಡಂಬಡಿಕೆ

  • ಸ್ಥಿರವಾಗಿರಲು ಮತ್ತು ಅಧೀಕೃತವಾಗಿ ಕ್ರಮಪಡಿಸಿದ ಗುಂಪು ವಿಧಾನಸಭೆಯಾಗಿರಬಹುದು ಅಥವಾ ಒಂದು ಉದ್ದೇಶಕ್ಕಾಗಿ ತಾತ್ಕಾಲಿಕವಾಗಿ ಜನರು ಸೇರಿ ಬರುವ ಗುಂಪು ಸಭೆಯಾಗಿರಬಹುದು.
  • ಹಳೇ ಒಡಂಬಡಿಕೆಯಲ್ಲಿ ಯೆಹೋವಾನನ್ನು ಆರಾಧನೆ ಮಾಡುವುದಕ್ಕೆ ಇಸ್ರಾಯೇಲ್ ಜನರೆಲ್ಲರು ಸೇರಿಬರುವ ಒಂದು ವಿಶೇಷವಾದ ಸಭೆಯನ್ನು “ಪರಿಶುದ್ಧ ವಿಧಾನಸಭೆ” ಎಂದು ಕರೆಯುತ್ತಾರೆ.
  • “ವಿಧಾನಸಭೆ” ಎನ್ನುವ ಪದವು ಕೆಲವೊಂದುಬಾರಿ ಸಾಧಾರಣವಾಗಿ ಒಂದು ಗುಂಪಾಗಿರುವ ಇಸ್ರಾಯೇಲ್ಯರಿಗೆ ಸೂಚಿಸುತ್ತದೆ.
  • ಶತ್ರು ಸೈನಿಕರು ದೊಡ್ಡ ಗುಂಪಾಗಿ ಕೂಡಿಬರುವುದನ್ನು ಕೆಲವೊಂದುಸಲ “ವಿಧಾನಸಭೆ”ಯನ್ನಾಗಿ ಸೂಚಿಸುತ್ತದೆ. ಇದನ್ನು “ಸೈನ್ಯ” ಎಂದು ಅನುವಾದ ಮಾಡಬಹುದು.

ಹೊಸ ಒಡಬಡಿಕೆ

  • ಹೊಸ ಒಡಂಬಡಿಕೆಯಲ್ಲಿ 70 ಮಂದಿ ಯೆಹೂದ್ಯ ನಾಯಕರ ಸಭೆ ಯೆರೂಸಲೇಮ್ ಎನ್ನುವ ದೊಡ್ಡ ಪಟ್ಟಣಗಳಲ್ಲಿ ಇರುತ್ತಿತ್ತು, ಆ ಸಭೆ ಜನರ ಮಧ್ಯೆದಲ್ಲಿರುವ ವಿವಾದಗಳನ್ನು ಪರಿಷ್ಕರಿಸಲು ಮತ್ತು ಕಾನೂನುಬದ್ಧವಾದ ವಿಷಯಗಳಿಗೆ ತೀರ್ಪು ಮಾಡುವುದಕ್ಕೆ ಕೂಡಿಕೊಳ್ಳುತ್ತಿದ್ದರು. ಈ ವಿಧಾನಸಭೆಯನ್ನು “ಸೇನ್ಹೆದ್ರಿನ್” ಅಥವಾ “ಕೌನ್ಸಿಲ್” ಎಂಬುದಾಗಿ ಕರೆಯುತ್ತಾರೆ.

ಅನುವಾದ ಸಲಹೆಗಳು

  • ಸಂದರ್ಭಕ್ಕೆ ತಕ್ಕಂತೆ, “ವಿಧಾನಸಭೆ” ಎನ್ನುವುದನ್ನು “ವಿಶೇಷವಾದ ಗುಂಪು” ಅಥವಾ “ಗುಂಪುಸೇರಿಸುವುದು” ಅಥವಾ “ಕೌನ್ಸಿಲ್” ಅಥವಾ “ಸೈನ್ಯ” ಅಥವಾ “ದೊಡ್ಡ ಗುಂಪು” ಎಂದೂ ಅನುವಾದ ಮಾಡಬಹುದು.
  • “ವಿಧಾನಸಭೆ” ಎನ್ನುವ ಪದವು ಇಸ್ರಾಯೇಲ್ಯರೆಲ್ಲರನ್ನು ಸೂಚಿಸುವಾಗ, ಅದನ್ನು “ವರ್ಗ” ಅಥವಾ “ಇಸ್ರಾಯೇಲ್ ಜನರು” ಎಂಬುದಾಗಿಯೂ ಅನುವಾದ ಮಾಡಬಹುದು.
  • “ವಿಧಾನಸಭೆಗಳು” ಎನ್ನುವ ಮಾತನ್ನು “ಜನರೆಲ್ಲರು” ಅಥವಾ “ಇಸ್ರಾಯೇಲ್ಯರ ಸರ್ವ ಸಮಾಜ” ಅಥವಾ “ಪ್ರತಿಯೊಬ್ಬರು” ಎಂಬುದಾಗಿಯೂ ಅನುವಾದ ಮಾಡಬಹುದು. (ನೋಡಿರಿ: ಅತಿಶಯೋಕ್ತಿ)

(ಈ ಪದಗಳನ್ನು ಸಹ ನೋಡಿರಿ : ಕೌನ್ಸಿಲ್)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H622, H627, H1413, H1481, H2199, H3259, H4150, H4186, H4744, H5475, H5712, H5789, H6116, H6633, H6908, H6950, H6951, H6952, H7284, G1577, G1997, G3831, G4863, G4864, G4871, G4905