3.5 KiB
3.5 KiB
ಕೊಂಬು, ಕೊಂಬುಗಳು, ಕೊಂಬುಗಳುಳ್ಳ
ಸತ್ಯಾಂಶಗಳು:
ಕೊಂಬುಗಳು ದನಗಳು, ಕುರಿಗಳು, ಮೇಕೆಗಳು ಒಳಗೊಂಡಂತೆ ಅನೇಕ ರೀತಿಯ ಪ್ರಾಣಿಗಳ ತಲೆಯ ಮೇಲೆ ಶಾಶ್ವತವಾದ, ಗಟ್ಟಿಯಾದ, ಮೊನಚಾದ ಬೆಳವಣಿಗೆಯಾಗಿದೆ.
- ಟಗರು ಕೊಂಬುಗಳನ್ನು “ರಾಮ್ಸ್ ಹಾರ್ನ್” ಅಥವಾ “ಸೋಫಾರ್” ಎನ್ನುವ ಸಂಗೀತ ಉಪಕರಣಗಳನ್ನು ಮಾಡುವುದಕ್ಕೆ ಬಳಸುತ್ತಾರೆ, ಇವುಗಳನ್ನು ಧರ್ಮ ಸಂಬಂಧವಾದ ವಿಶೇಷವಾದ ಹಬ್ಬಗಳಲ್ಲಿ ಊದುವುದಕ್ಕೆ ಉಪಯೋಗಿಸುತ್ತಾರೆ.
- ತಾಮ್ರದ ಯಜ್ಞವೇದಿಗಳು ಮತ್ತು ಬೂದಿಯ ನಾಲ್ಕು ಮೂಲೆಗಳಿಂದ ಕೊಂಬುಗಳ ಆಕಾರವು ಚಾಚಿಕೊಂಡು ಬಂದಿರುವಂತೆ ತಯಾರು ಮಾಡಬೇಕೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದರು. ಚಾಚಿಕೊಂಡು ಬಂದಿರುವಂತಹ ಇವುಗಳನ್ನು “ಕೊಂಬುಗಳೆಂದು” ಕರೆದರೂ, ಅವು ಪ್ರಾಣಿಗಳ ಕೊಂಬುಗಳಲ್ಲ.
- “ಕೊಂಬು” ಎನ್ನುವ ಪದವು ಕೆಲವೊಂದುಬಾರಿ ನೀರನ್ನು ಅಥವಾ ಎಣ್ಣೆಯನ್ನು ಸಂಗ್ರಹಿಸಿ ಇಡುವುದಕ್ಕೆ ಕೊಂಬಿನಂತಿರುವ ಆಕಾರದಲ್ಲಿರುವ “ಬುದ್ದಲಿ”ಯನ್ನು ಸೂಚಿಸುತ್ತದೆ. ಎಣ್ಣೆಯ ಬುದ್ದಲಿಯು ಅರಸನನ್ನು ಅಭಿಷೇಕ ಮಾಡುವುದಕ್ಕೆ ಉಪಯೋಗಿಸುತ್ತಿದ್ದರು, ಸಮುವೇಲನು ದಾವೀದನಿಗೆ ಎಣ್ಣೆಯ ಬುದ್ದಲಿಯಿಂದಲೇ ಅಭಿಷೇಕ ಮಾಡಿದ್ದನು.
- ಈ ಪದವನ್ನು ಕಹಳೆಯನ್ನು ಸೂಚಿಸುವ ಪದಕ್ಕೆ ವ್ಯತ್ಯಾಸವಾಗಿರುವಂತೆ ಅನುವಾದ ಮಾಡಬೇಕಾಗಿರುತ್ತದೆ, ಯಾಕಂದರೆ ಈ ಎರಡು ಪದಗಳು ಬೇರೆ ಬೇರೆಯಾಗಿರುತ್ತವೆ.
- “ಕೊಂಬು” ಎನ್ನುವ ಪದವನ್ನು ಬಲ, ಶಕ್ತಿ, ಅಧಿಕಾರ ಮತ್ತು ರಾಜತ್ವಗಳಿಗೆ ಗುರುತಾಗಿ ಅಲಂಕಾರಿಕವಾಗಿ ಉಪಯೋಗಿಸುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಹಸು, ಜಿಂಕೆ, ಮೇಕೆ, ಶಕ್ತಿ, ರಾಜಯೋಗ್ಯ, ಕುರಿ, ಕಹಳೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's:H3104, H7160, H7161, H7162, H7782, G2768