2.6 KiB
2.6 KiB
ಜಿಂಕೆ, ಹೆಣ್ಣು ಜಿಂಕೆ, ಹೆಣ್ಣು ಜಿಂಕೆಗಳು, ಜಿಂಕೆ ಮರಿಗಳು, ಗಂಡು ಜಿಂಕೆ, ಗಂಡು ಜಿಂಕೆಗಳು
ಪದದ ಅರ್ಥವಿವರಣೆ:
ಜಿಂಕೆ ಎನ್ನುವುದು ಪರ್ವತಗಳ ಮೇಲೆ ಅಥವಾ ಅಡವಿಗಳಲ್ಲಿ ಜೀವಿಸುವ ದೊಡ್ಡದಾದ, ಸುಂದರವಾದ ನಾಲ್ಕು ಕಾಲುಗಳುಳ್ಳ ಪ್ರಾಣಿ. ಗಂಡು ಜಿಂಕೆಯ ತಲೆಯ ಮೇಲೆ ದೊಡ್ಡ ಕೊಂಬುಗಳು ಅಥವಾ ಉದುರುಗೊಂಬುಗಳು ಇರುತ್ತವೆ.
- ಆಂಗ್ಲದಲ್ಲಿ "doe" (ಡೋ) ಎನ್ನುವ ಪದವು “ಹೆಣ್ಣು ಜಿಂಕೆ”ಯನ್ನು ಸೂಚಿಸುತ್ತದೆ ಮತ್ತು "fawn" (ಫಾನ್) ಎನ್ನುವ ಆಂಗ್ಲ ಪದವು ಜಿಂಕೆಯ ಮರಿಯನ್ನು ಸೂಚಿಸುತ್ತದೆ.
- ಆಂಗ್ಲ ಭಾಷೆಯಲ್ಲಿರುವ "buck" (ಬಕ್) ಎನ್ನುವ ಪದವು ಗಂಡು ಜಿಂಕೆಯನ್ನು ಸೂಚಿಸುತ್ತದೆ.
- "roebuck" (ರೋಬಕ್) ಎನ್ನುವ ಆಂಗ್ಲ ಪದವು "roedeer" (ರೋಡೀರ್) ಎಂದು ಕರೆಯಲ್ಪಡುವ ಗಂಡು ಜಿಂಕೆಯನ್ನು ಸೂಚಿಸುತ್ತದೆ.
- ಜಿಂಕೆಗೆ ಬಲವುಳ್ಳ ತೆಳುವಾದ ಕಾಲುಗಳು ಇರುತ್ತವೆ, ಈ ಬಲವಾದ ಕಾಲುಗಳ ಸಹಾಯದಿಂದಲೇ ಅವು ತುಂಬಾ ವೇಗವಾಗಿ ಓಡುತ್ತವೆ ಮತ್ತು ಜಿಗಿಯುತ್ತವೆ.
- ಅವುಗಳ ಪಾದಗಳು ಒಡೆದುಹೋಗಿರುವಂತೆ ಇರುತ್ತವೆ, ಇದರಿಂದಲೇ ಅವು ಅತೀ ಎತ್ತರವಾದ ಸ್ಥಳಗಳಿಗೆ ಕೂಡ ಏರುತ್ತವೆ ಅಥವಾ ನಡೆಯುತ್ತವೆ.
(ಅನುವಾದ ಸಲಹೆಗಳು: ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H354, H355, H365, H3180, H3280, H6643, H6646