kn_tw/bible/other/horn.md

26 lines
3.5 KiB
Markdown

# ಕೊಂಬು, ಕೊಂಬುಗಳು, ಕೊಂಬುಗಳುಳ್ಳ
## ಸತ್ಯಾಂಶಗಳು:
ಕೊಂಬುಗಳು ದನಗಳು, ಕುರಿಗಳು, ಮೇಕೆಗಳು ಒಳಗೊಂಡಂತೆ ಅನೇಕ ರೀತಿಯ ಪ್ರಾಣಿಗಳ ತಲೆಯ ಮೇಲೆ ಶಾಶ್ವತವಾದ, ಗಟ್ಟಿಯಾದ, ಮೊನಚಾದ ಬೆಳವಣಿಗೆಯಾಗಿದೆ.
* ಟಗರು ಕೊಂಬುಗಳನ್ನು “ರಾಮ್ಸ್ ಹಾರ್ನ್” ಅಥವಾ “ಸೋಫಾರ್” ಎನ್ನುವ ಸಂಗೀತ ಉಪಕರಣಗಳನ್ನು ಮಾಡುವುದಕ್ಕೆ ಬಳಸುತ್ತಾರೆ, ಇವುಗಳನ್ನು ಧರ್ಮ ಸಂಬಂಧವಾದ ವಿಶೇಷವಾದ ಹಬ್ಬಗಳಲ್ಲಿ ಊದುವುದಕ್ಕೆ ಉಪಯೋಗಿಸುತ್ತಾರೆ.
* ತಾಮ್ರದ ಯಜ್ಞವೇದಿಗಳು ಮತ್ತು ಬೂದಿಯ ನಾಲ್ಕು ಮೂಲೆಗಳಿಂದ ಕೊಂಬುಗಳ ಆಕಾರವು ಚಾಚಿಕೊಂಡು ಬಂದಿರುವಂತೆ ತಯಾರು ಮಾಡಬೇಕೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದರು. ಚಾಚಿಕೊಂಡು ಬಂದಿರುವಂತಹ ಇವುಗಳನ್ನು “ಕೊಂಬುಗಳೆಂದು” ಕರೆದರೂ, ಅವು ಪ್ರಾಣಿಗಳ ಕೊಂಬುಗಳಲ್ಲ.
* “ಕೊಂಬು” ಎನ್ನುವ ಪದವು ಕೆಲವೊಂದುಬಾರಿ ನೀರನ್ನು ಅಥವಾ ಎಣ್ಣೆಯನ್ನು ಸಂಗ್ರಹಿಸಿ ಇಡುವುದಕ್ಕೆ ಕೊಂಬಿನಂತಿರುವ ಆಕಾರದಲ್ಲಿರುವ “ಬುದ್ದಲಿ”ಯನ್ನು ಸೂಚಿಸುತ್ತದೆ. ಎಣ್ಣೆಯ ಬುದ್ದಲಿಯು ಅರಸನನ್ನು ಅಭಿಷೇಕ ಮಾಡುವುದಕ್ಕೆ ಉಪಯೋಗಿಸುತ್ತಿದ್ದರು, ಸಮುವೇಲನು ದಾವೀದನಿಗೆ ಎಣ್ಣೆಯ ಬುದ್ದಲಿಯಿಂದಲೇ ಅಭಿಷೇಕ ಮಾಡಿದ್ದನು.
* ಈ ಪದವನ್ನು ಕಹಳೆಯನ್ನು ಸೂಚಿಸುವ ಪದಕ್ಕೆ ವ್ಯತ್ಯಾಸವಾಗಿರುವಂತೆ ಅನುವಾದ ಮಾಡಬೇಕಾಗಿರುತ್ತದೆ, ಯಾಕಂದರೆ ಈ ಎರಡು ಪದಗಳು ಬೇರೆ ಬೇರೆಯಾಗಿರುತ್ತವೆ.
* “ಕೊಂಬು” ಎನ್ನುವ ಪದವನ್ನು ಬಲ, ಶಕ್ತಿ, ಅಧಿಕಾರ ಮತ್ತು ರಾಜತ್ವಗಳಿಗೆ ಗುರುತಾಗಿ ಅಲಂಕಾರಿಕವಾಗಿ ಉಪಯೋಗಿಸುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : [ಅಧಿಕಾರ](../kt/authority.md), [ಹಸು](../other/cow.md), [ಜಿಂಕೆ](../other/deer.md), [ಮೇಕೆ](../other/goat.md), [ಶಕ್ತಿ](../kt/power.md), [ರಾಜಯೋಗ್ಯ](../other/royal.md), [ಕುರಿ](../other/sheep.md), [ಕಹಳೆ](../other/trumpet.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.15:27-28](rc://*/tn/help/1ch/15/27)
* [1 ಅರಸ.01:38-40](rc://*/tn/help/1ki/01/38)
* [2 ಸಮು.22:3-4](rc://*/tn/help/2sa/22/03)
* [ಯೆರೆ.17:1-2](rc://*/tn/help/jer/17/01)
* [ಆದಿ.022:20-21](rc://*/tn/help/psa/022/020)
## ಪದ ಡೇಟಾ:
* Strong's:H3104, H7160, H7161, H7162, H7782, G2768