3.1 KiB
3.1 KiB
ರಾಜಯೋಗ್ಯ, ದೊರೆತನ
ಪದದ ಅರ್ಥವಿವರಣೆ:
“ರಾಜಯೋಗ್ಯ” ಎನ್ನುವ ಪದವು ಅರಸ ಅಥವಾ ರಾಣಿಯೊಂದಿಗೆ ಸಹಕಾರವಾಗಿರುವ ವಸ್ತುಗಳನ್ನು ಮತ್ತು ಜನರನ್ನು ವಿವರಿಸುತ್ತದೆ.
- “ರಾಜಯೋಗ್ಯ” ಎಂದು ಕರೆಯಲ್ಪಡುವ ಅನೇಕ ವಿಷಯಗಳ ಉದಾಹರಣೆಗಳಲ್ಲಿ ಅರಸನ ವಸ್ತ್ರಗಳು, ಅರಮನೆ, ಸಿಂಹಾಸನ ಮತ್ತು ಕಿರೀಟ ಎನ್ನುವವುಗಳು ಒಳಗೊಂಡಿರುತ್ತವೆ.
- ಅರಸ ಅಥವಾ ರಾಣಿ ಸಹಜವಾಗಿ ರಾಜಯೋಗ್ಯ ಭವನದಲ್ಲಿ ಅಥವಾ ಅರಮನೆಯಲ್ಲಿ ನಿವಾಸವಾಗಿರುತ್ತಾರೆ.
- ಅರಸನು ವಿಶೇಷವಾದ ಉಡುಪುಗಳನ್ನು ಧರಿಸಿರುತ್ತಾನೆ, ಕೆಲವೊಂದುಬಾರಿ ಇವುಗಳನ್ನು “ರಾಜಯೋಗ್ಯ ನಿಲುವಂಗಿಗಳು” ಎಂದೂ ಕರೆಯುತ್ತಾರೆ. ಅನೇಕಬಾರಿ ಅರಸನ ನಿಲುವಂಗಿಗಳು ನೇರಳೆ ಬಣ್ಣದಲ್ಲಿರುತ್ತವೆ, ಈ ಬಣ್ಣವು ಅಪರೂಪವಾಗಿ ತಯಾರಿಸುತ್ತಾರೆ ಮತ್ತು ಇದು ತುಂಬಾ ಬೆಲೆಯುಳ್ಳದ್ದಾಗಿರುತ್ತದೆ.
- ಹೊಸ ಒಡಂಬಡಿಕೆಯಲ್ಲಿ ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬರನ್ನು “ರಾಜವಂಶಸ್ಥರಾದ ಯಾಜಕರು” ಎಂದು ಕರೆಯಲ್ಪಟ್ಟರು. ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಅರಸನಾದ ದೇವರನ್ನು ಸೇವಿಸುವ ಯಾಜಕರು” ಅಥವಾ “ಅರಸನಾದ ದೇವರಿಗಾಗಿ ಕರೆಯಲ್ಪಟ್ಟ ಯಾಜಕರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
- “ರಾಜಯೋಗ್ಯ” ಎನ್ನುವ ಪದವನ್ನು “ಅರಸನ” ಅಥವಾ “ಅರಸನಿಗೆ ಸಂಬಂಧಪಟ್ಟಿರುವ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಅರಸ, ಅರಮನೆ, ಯಾಜಕ, ನೇರಳೆ ಬಣ್ಣ, ರಾಣಿ, ನಿಲುವಂಗಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H643, H1921, H1935, H4410, H4428, H4430, H4437, H4438, H4467, H4468, H7985, H8237, G933, G934, G937