kn_tw/bible/other/royal.md

25 lines
3.1 KiB
Markdown

# ರಾಜಯೋಗ್ಯ, ದೊರೆತನ
## ಪದದ ಅರ್ಥವಿವರಣೆ:
“ರಾಜಯೋಗ್ಯ” ಎನ್ನುವ ಪದವು ಅರಸ ಅಥವಾ ರಾಣಿಯೊಂದಿಗೆ ಸಹಕಾರವಾಗಿರುವ ವಸ್ತುಗಳನ್ನು ಮತ್ತು ಜನರನ್ನು ವಿವರಿಸುತ್ತದೆ.
* “ರಾಜಯೋಗ್ಯ” ಎಂದು ಕರೆಯಲ್ಪಡುವ ಅನೇಕ ವಿಷಯಗಳ ಉದಾಹರಣೆಗಳಲ್ಲಿ ಅರಸನ ವಸ್ತ್ರಗಳು, ಅರಮನೆ, ಸಿಂಹಾಸನ ಮತ್ತು ಕಿರೀಟ ಎನ್ನುವವುಗಳು ಒಳಗೊಂಡಿರುತ್ತವೆ.
* ಅರಸ ಅಥವಾ ರಾಣಿ ಸಹಜವಾಗಿ ರಾಜಯೋಗ್ಯ ಭವನದಲ್ಲಿ ಅಥವಾ ಅರಮನೆಯಲ್ಲಿ ನಿವಾಸವಾಗಿರುತ್ತಾರೆ.
* ಅರಸನು ವಿಶೇಷವಾದ ಉಡುಪುಗಳನ್ನು ಧರಿಸಿರುತ್ತಾನೆ, ಕೆಲವೊಂದುಬಾರಿ ಇವುಗಳನ್ನು “ರಾಜಯೋಗ್ಯ ನಿಲುವಂಗಿಗಳು” ಎಂದೂ ಕರೆಯುತ್ತಾರೆ. ಅನೇಕಬಾರಿ ಅರಸನ ನಿಲುವಂಗಿಗಳು ನೇರಳೆ ಬಣ್ಣದಲ್ಲಿರುತ್ತವೆ, ಈ ಬಣ್ಣವು ಅಪರೂಪವಾಗಿ ತಯಾರಿಸುತ್ತಾರೆ ಮತ್ತು ಇದು ತುಂಬಾ ಬೆಲೆಯುಳ್ಳದ್ದಾಗಿರುತ್ತದೆ.
* ಹೊಸ ಒಡಂಬಡಿಕೆಯಲ್ಲಿ ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬರನ್ನು “ರಾಜವಂಶಸ್ಥರಾದ ಯಾಜಕರು” ಎಂದು ಕರೆಯಲ್ಪಟ್ಟರು. ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಅರಸನಾದ ದೇವರನ್ನು ಸೇವಿಸುವ ಯಾಜಕರು” ಅಥವಾ “ಅರಸನಾದ ದೇವರಿಗಾಗಿ ಕರೆಯಲ್ಪಟ್ಟ ಯಾಜಕರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* “ರಾಜಯೋಗ್ಯ” ಎನ್ನುವ ಪದವನ್ನು “ಅರಸನ” ಅಥವಾ “ಅರಸನಿಗೆ ಸಂಬಂಧಪಟ್ಟಿರುವ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಅರಸ](../other/king.md), [ಅರಮನೆ](../other/palace.md), [ಯಾಜಕ](../kt/priest.md), [ನೇರಳೆ ಬಣ್ಣ](../other/purple.md), [ರಾಣಿ](../other/queen.md), [ನಿಲುವಂಗಿ](../other/robe.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.10:13](rc://*/tn/help/1ki/10/13)
* [2 ಪೂರ್ವ.18:28-30](rc://*/tn/help/2ch/18/28)
* [ಆಮೋಸ.07:12-13](rc://*/tn/help/amo/07/12)
* [ಆದಿ.49:19-21](rc://*/tn/help/gen/49/19)
## ಪದ ಡೇಟಾ:
* Strong's: H643, H1921, H1935, H4410, H4428, H4430, H4437, H4438, H4467, H4468, H7985, H8237, G933, G934, G937