kn_tw/bible/other/fruit.md

9.9 KiB
Raw Permalink Blame History

ಫಲ, ಫಲಭರಿತ, ನಿಷ್ಫಲ

ಪದದ ಅರ್ಥವಿವರಣೆ:

“ಫಲ” ಎನ್ನುವ ಪದಕ್ಕೆ ತಿನ್ನುವುದಕ್ಕಾಗುವ ರೀತಿಯಲ್ಲಿರುವ ಮರದಲ್ಲಿ ಒಂದು ಭಾಗವನ್ನು ಸೂಚಿಸುತ್ತದೆ. “ಫಲಭರಿತ” ವಾಗಿರುವುದು ಅನೇಕ ಫಲಗಳನ್ನು ಒಳಗೊಂಡಿರುತ್ತದೆ. ಈ ಪದಗಳನ್ನು ಕೂಡ ಸತ್ಯವೇದದಲ್ಲಿ ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಲ್ಪಟ್ಟಿರುತ್ತವೆ.

  • “ಫಲ” ಎನ್ನುವ ಪದವನ್ನು ಒಬ್ಬ ವ್ಯಕ್ತಿಯ ಕ್ರಿಯೆಗಳನ್ನು ಸೂಚಿಸುವುದಕ್ಕೆ ಸತ್ಯವೇದದಲ್ಲಿ ಅನೇಕಸಲ ಉಪಯೋಗಿಸಲಾಗಿರುತ್ತದೆ. ಮರದ ಮೇಲಿರುವ ಫಲವು ಆ ಮರ ಯಾವುದೆಂದು ತೋರಿಸುವ ಹಾಗೆಯೇ ಒಬ್ಬ ವ್ಯಕ್ತಿಯ ಮಾತುಗಳು ಮತ್ತು ಕ್ರಿಯೆಗಳು ತನ್ನ ನಡೆತೆಯನ್ನು ತೋರಿಸುತ್ತವೆ.
  • ಒಬ್ಬ ವ್ಯಕ್ತಿ ಒಳ್ಳೇಯ ಅಥವಾ ಕೆಟ್ಟ ಆತ್ಮೀಯ ಫಲವನ್ನುಂಟು ಮಾಡಬಹುದು, ಆದರೆ “ಫಲಭರಿತ” ಎನ್ನುವ ಪದವು ಯಾವಾಗಲೂ ಒಳ್ಳೇಯದಾಗಿ ಫಲಿಸುವ ಹೆಚ್ಚಿನ ಫಲವನ್ನು ಕೊಡುವ ಅನುಕೂಲವಾದ ಅರ್ಥವನ್ನೇ ಹೊಂದಿರುತ್ತದೆ.
  • “ಫಲಭರಿತ” ಎನ್ನುವ ಪದವು “ಸಮೃದ್ಧಿ” ಎನ್ನುವ ಅರ್ಥವನ್ನು ಕೊಡಲು ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಿರುತ್ತಾರೆ. ಇದು ಅನೇಕ ಸಲ ಅನೇಕ ಮಂದಿ ಮಕ್ಕಳಿರುವುದನ್ನು ಮತ್ತು ಸಂತಾನವಿರುವುದನ್ನು ಸೂಚಿಸುತ್ತದೆ, ಅದೇ ರೀತಿಯಾಗಿ ಅಧಿಕ ಸಂಪತ್ತು ಮತ್ತು ಸಾಕಷ್ಟು ಆಹಾರ ಇರುವುದನ್ನೂ ಸೂಚಿಸುತ್ತದೆ.
  • ಸಾಧಾರಣವಾಗಿ “ಇದರ ಫಲ” ಎನ್ನುವ ಮಾತು ಬೇರೆ ಕಡೆಯಿಂದ ಬರುವ ಯಾವುದಾದರೊಂದನ್ನು ಅಥವಾ ಬೇರೆ ಯಾವುದಾದರಿಂದ ಉತ್ಪತ್ತಿಯಾಗುವುದನ್ನು ಸೂಚಿಸುತ್ತದೆ. ಉದಾಹರಣೆಗೆ, “ಜ್ಞಾನದ ಫಲ” ಎನ್ನುವ ಮಾತು ಜ್ಞಾನ ಹೊಂದಿರುವುದರಿಂದ ಬರುವ ಒಳ್ಳೇಯ ವಿಷಯಗಳನ್ನು ಸೂಚಿಸುತ್ತದೆ.
  • ‘”ಭೂಮಿಯ ಫಲ” ಎನ್ನುವ ಮಾತು ಸಾಧಾರಣವಾಗಿ ತಿನ್ನುವದಕ್ಕೆ ಜನರಿಗೆ ಆಹಾರವನ್ನು ಕೊಡುವ ಪ್ರತಿಯೊಂದು ಭೂಮಿಯನ್ನು ಸೂಚಿಸುತ್ತದೆ. ಇದರಲ್ಲಿ ದ್ರಾಕ್ಷಿ ಅಥವಾ ಖರ್ಜೂರ ಹಣ್ಣುಗಳು ಮಾತ್ರವಲ್ಲದೆ, ತರಕಾರಿ, ಬೀಜಗಳು ಮತ್ತು ಧಾನ್ಯಗಳು ಕೂಡ ಒಳಗೊಂಡಿರುತ್ತವೆ.
  • “ಆತ್ಮ ಫಲ” ಎನ್ನುವ ಅಲಂಕಾರಿಕ ಮಾತು ಪವಿತ್ರಾತ್ಮನಿಗೆ ವಿಧೇಯತೆ ತೋರಿಸುವ ಜನರಲ್ಲಿ ಆತನು ಹುಟ್ಟಿಸುವ ದೈವಿಕವಾದ ಗುಣಲಕ್ಷಣಗಳನ್ನು ಸೂಚಿಸುತ್ತದೆ.
  • “ಗರ್ಭ ಫಲ” ಎನ್ನುವ ಮಾತು “ಗರ್ಭ ಹುಟ್ಟಿಸುವುದನ್ನು” ಅಂದರೆ ಮಕ್ಕಳನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಹಣ್ಣಿನ ಮರದಿಂದ ತಿನ್ನುವುದಕ್ಕಾಗುವ ಹಣ್ಣುಗಳನ್ನು ಸೂಚಿಸುವುದಕ್ಕೆ ಅನುವಾದ ಭಾಷೆಯಲ್ಲಿ ಉಪಯೋಗಿಸುವ ಸಹಜವಾದ ಪದವನ್ನು “ಫಲ” ಎನ್ನುವ ಪದಕ್ಕೆ ಉಪಯೋಗಿಸಿ ಅನುವಾದಿಸುವುದು ಉತ್ತಮ. ಅನೇಕ ಭಾಷೆಗಳಲ್ಲಿ ಈ ಪದಕ್ಕೆ ತುಂಬಾ ಸ್ವಾಭಾವಿಕವಾಗಿ ಬಹುವಚನದ ಪದವನ್ನು ಉಪಯೋಗಿಸುತ್ತಾರೆ, “ಫಲಗಳು” ಎಂದು ಸೂಚಿಸಿದಾಗ ಇದು ಒಂದಕ್ಕಿಂತ ಹೆಚ್ಚು ಫಲಗಳನ್ನು ಸೂಚಿಸುತ್ತಿದೆ ಎಂದರ್ಥ.
  • ಸಂದರ್ಭಾನುಸಾರವಾಗಿ “ಫಲಭರಿತ” ಎನ್ನುವ ಪದವನ್ನು “ಹೆಚ್ಚು ಆತ್ಮೀಯಕ ಫಲವನ್ನು ಕೊಡುವುದು” ಅಥವಾ “ಹೆಚ್ಚು ಮಕ್ಕಳನ್ನು ಹೊಂದಿರುವುದು” ಅಥವಾ “ಸಮೃದ್ಧಿ” ಎಂದೂ ಅನುವಾದಿಸಬಹುದು.
  • “ಭೂಮಿಯ ಫಲ” ಎನ್ನುವ ಮಾತನ್ನು “ಭೂಮಿಯಿಂದ ಬೆಳೆಸುವ ಫಲ” ಅಥವಾ “ಪ್ರಾಂತ್ಯದಲ್ಲಿ ಬೆಳೆಯುವ ಆಹಾರ ಬೆಳೆಗಳು” ಎಂದೂ ಅನುವಾದ ಮಾಡಬಹುದು.
  • ದೇವರು ಪ್ರಾಣಿಗಳನ್ನು ಮತ್ತು ಜನರನ್ನು ಸೃಷ್ಟಿಸಿದಾಗ, ಆತನು ಅವರಿಗೆ “ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ, ಭೂಮಿಯನ್ನು ತುಂಬಿಕೊಳ್ಳಿರಿ” ಎಂದು ಆಜ್ಞಾಪಿಸಿದನು, ಇದು ಅನೇಕಮಂದಿ ಸಂತಾನವನ್ನು ಹೊಂದಿರುವುದನ್ನು ಸೂಚಿಸುತ್ತದೆ. ಈ ಪದವನ್ನು “ಅಧಿಕ ಸಂತಾನ ಹೊಂದಿರುವುದು” ಅಥವಾ “ಅನೇಕಮಂದಿ ಮಕ್ಕಳನ್ನು ಮತ್ತು ವಂಶದವರನ್ನು ಹೊಂದಿರುವುದು” ಅಥವಾ “ಅನೇಕಮಂದಿ ಮಕ್ಕಳನ್ನು ಹೊಂದಿರು, ಇದರಿಂದ ನೀನು ಅನೇಕಮಂದಿ ವಂಶಸ್ಥರನ್ನು ಹೊಂದಿರುವಿ” ಎಂದೂ ಅನುವಾದ ಮಾಡಬಹುದು.
  • “ಗರ್ಭ ಫಲ” ಎನ್ನುವ ಮಾತನ್ನು “ಗರ್ಭ ಹುಟ್ಟಿಸುವುದು” ಅಥವಾ “ಸ್ತ್ರೀ ಮಕ್ಕಳಿಗೆ ಜನ್ಮ ಕೊಡುವಳು” ಅಥವಾ “ಮಕ್ಕಳು” ಎಂದೂ ಅನುವಾದ ಮಾಡಬಹುದು. ಮರಿಯಳಿಗೆ ಎಲಿಸಬೇತಳಿಗೆ “ನಿನ್ನ ಗರ್ಭಫಲವು ಆಶೀರ್ವಾದ ಹೊಂದಲಿ” ಎಂದು ಹೇಳಿದಳು, ಆಕೆ ಮಾತಿಗೆ “ನೀನು ಜನ್ಮ ಕೊಡುವ ಮಗು ಆಶೀರ್ವಾದ ಹೊಂದುವನು” ಎಂದರ್ಥ. ಈ ಮಾತಿಗೆ ಅನುವಾದ ಮಾಡುವ ಭಾಷೆಯಲ್ಲಿ ಬೇರೊಂದು ಪದಗಳು ಅಥವಾ ಮಾತುಗಳು ಇರಬಹುದು.
  • “ದ್ರಾಕ್ಷಿ ಬಳ್ಳಿಯ ಫಲ” ಎನ್ನುವ ಇನ್ನೊಂದು ಮಾತನ್ನು “ದಾಕ್ಷಿ ಬಳ್ಳಿಯ ಹಣ್ಣು” ಅಥವಾ “ದ್ರಾಕ್ಷಿಗಳು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಕ್ಕೆ ತಕ್ಕಂತೆ “ಹೆಚ್ಚಾದ ಫಲಭರಿತವಾಗಿರುತ್ತದೆ” ಎನ್ನುವ ಮಾತನ್ನು “ಹೆಚ್ಚು ಫಲವನ್ನು ಕೊಡುತ್ತದೆ” ಅಥವಾ “ಹೆಚ್ಚು ಮಕ್ಕಳನ್ನು ಹೊಂದುತ್ತಾರೆ” ಅಥವಾ “ಸಮೃದ್ಧಿಯನ್ನು ಪಡೆಯುವಿರಿ” ಎಂದೂ ಅನುವಾದ ಮಾಡಬಹುದು.
  • ಅಪೊಸ್ತಲನಾದ ಪೌಲನು ನುಡಿದ “ಫಲಭರಿತವಾದ ಕೆಲಸ” ಎನ್ನುವ ಮಾತನ್ನು “ಒಳ್ಳೇಯ ಫಲಗಳನ್ನು ಕೊಡುವ ಕೆಲಸ” ಅಥವಾ “ಯೇಸುವಿನಲ್ಲಿ ನಂಬುವ ಅನೇಕರಲ್ಲಿ ಪ್ರಯತ್ನಗಳು ಪರಿಣಾಮಕಾರಿಯಾಗಿರುತ್ತವೆ” ಎಂದೂ ಅನುವಾದ ಮಾಡಬಹುದು.
  • “ಆತ್ಮ ಫಲ” ಎನ್ನುವ ಮಾತನ್ನು “ಪವಿತ್ರಾತ್ಮನು ಉಂಟುಮಾಡುವ ಕೆಲಸಗಳು” ಅಥವಾ “ಒಬ್ಬರಲ್ಲಿ ಪವಿತ್ರಾತ್ಮನು ಕೆಲಸ ಮಾಡುತ್ತಿದ್ದಾನೆ ಎನ್ನುವುದಕ್ಕೆ ಅವರ ಕ್ರಿಯೆಗಳು ಮತ್ತು ಮಾತುಗಳು ನಮಗೆ ತೋರಿಸುತ್ತವೆ”.

(ಈ ಪದಗಳನ್ನು ಸಹ ನೋಡಿರಿ : ವಂಶಸ್ಥರು, ಧಾನ್ಯ, ದ್ರಾಕ್ಷಿ, ಪವಿತ್ರಾತ್ಮ, ದ್ರಾಕ್ಷಿ ಬಳ್ಳಿ, ಗರ್ಭ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strongs: H4, H1061, H1063, H1069, H2233, H2981, H3581, H3759, H3899, H3978, H4022, H5108, H6509, H6529, H7019, H8393, H8570, G1081, G2590, G2592, G2593, G3703, G5052, G5352