kn_ta/translate/translate-useulbudb/01.md

28 KiB
Raw Permalink Blame History

ಭಾಷಾಂತರಗಾರರಾಗಿ ULB ಮತ್ತು UDBಯನ್ನು ಹೇಗೆ ಉತ್ತಮರೀತಿಯಲ್ಲಿ ಬಳಸಬಹುದು ಎಂಬುದು ಈ ಕೆಳಗೆ ಕೊಟ್ಟಿರುವ ULB ಮತ್ತು UDB ನಡುವೆ ಇರುವ ವ್ಯತ್ಯಾಸವನ್ನು ನೋಡಿ ತಿಳಿಯಬಹುದು ಇದರೊಂದಿಗೆ ಭಾಷಾಂತರ ಆಗುತ್ತಿರುವ ಭಾಷೆಯಲ್ಲಿ ಹೇಗೆ ಉತ್ತಮ ರೀತಿಯಲ್ಲಿ ಇಂತಹ ವ್ಯತ್ಯಾಸಗಳನ್ನು ಪರಿಹಾರ ಮಾಡಬಹುದು ಎಂದು ತಿಳಿದುಕೊಳ್ಳಬೇಕು.

ಉದ್ದೇಶಗಳ ಕ್ರಮ

ಮೂಲ ಗ್ರಂಥದಲ್ಲಿ ಇರುವ ಕಲ್ಪನೆಗಳೇ ULBಯ ಕಂಡುಬರುವಂತೆ ಅದೇ ಕ್ರಮವನ್ನು ಹೊಂದಿರುತ್ತದೆ.

UDB ಉದ್ದೇಶಗಳ ಕ್ರಮವನ್ನು ಇಂಗ್ಲೀಷ್ ಭಾಷೆಯಲ್ಲಿನ ಸಹಜವಾದ ಕ್ರಮದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ ಅಥವಾ ಅದು ತಾರ್ಕಿಕವಾದ ಕ್ರಮವನ್ನು ಅಥವಾ ಸಮಯ, ಸನ್ನಿವೇಶಗಳಿಗೆ ಅನುಗುಣವಾದ ಕ್ರಮವನ್ನು ಅನುಸರಿಸುತ್ತದೆ.

ನೀವು ಭಾಷಾಂತರ ಮಾಡುವಾಗ ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ವಿಚಾರಗಳು ಕ್ರಮವಾಗಿ ಬರುವಂತೆ ನೋಡಿಕೊಳ್ಳಬೇಕು ಘಟನಾವಳಿಗಳ ಕ್ರಮ ಗಮನಿಸಿ

1ಯೇಸುವಿನ ಸೇವಕನಾದ ಪೌಲನನ್ನು ಅಪೋಸ್ತಲನಾಗುವುದಕ್ಕೆ ಕರೆಯಲ್ಪಟ್ಟವನು. ದೇವರ ಸುವಾರ್ತೆಯನ್ನು ಸಾರುವುದಕ್ಕೆ ನೇಮಿಸಲ್ಪಟ್ಟವನೂ ಆಗಿರುವ..7 ಪೌಲನು ರೋಮಾಪುರದವರಿಗೆ ಬರೆದ ಪತ್ರದಲ್ಲಿ “ ಯೇಸು ಕ್ರಿಸ್ತನವರಾಗುವುದಕ್ಕೆ ಕರೆಯಲ್ಪಟ್ಟ ನೀವೂ ಸಹ ಅನ್ಯಜನರೊಳಗಿನವರಾದುದರಿಂದ ನಿಮಗೆ ಬರೆಯುತ್ತಿದ್ದೇನೆ.” ಎಂದನು. (ರೋಮಾಪುರದವರಿಗೆ ಬರೆದ ಪತ್ರ 1:1,7 ULB)
1ಪೌಲನಾದ ನಾನು ಯೇಸುಕ್ರಿಸ್ತನ ಸೇವಕನಾಗಿ ರೋಮಾಪುರದಲ್ಲಿನ ವಿಶ್ವಾಸಿಗಳಿಗಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ. (ರೋಮಾಪುರದವರಿಗೆ 1:1 UDB)

ULBಯಲ್ಲಿ ಪೌಲನ ಶೈಲಿಯಲ್ಲಿ ಪತ್ರದ ಪ್ರಾರಂಭವಾಗಿದೆ. ಏಳನೇ ವಾಕ್ಯದವರೆಗೆ ಪೌಲನು ತನ್ನ ಶ್ರೋತೃಗಳು ಯಾರು ಎಂದು ಹೇಳಿಲ್ಲ. ಹೇಗಿದ್ದರೂ UDB ಇಂಗ್ಲೀಷ್ ಭಾಷೆಯಲ್ಲಿ ಹೆಚ್ಚು ಸಹಜವಾಗಿರುವಂತಹ ಮತ್ತು ಇಂದಿನ ಇತರ ಭಾಷೆಗಳಲ್ಲಿ ಈ ಶೈಲಿಯನ್ನು ಅನುಸರಿಸುತ್ತದೆ.

ಅರ್ಥವಾಗುವಂತಹ ಮಾಹಿತಿ.

ULBಯು ‘ಅರ್ಥವಾಗುವತಂತಹ‘ ಉದ್ದೇಶಗಳನ್ನು ಓದುಗರಿಗೆ ಅರ್ಥವಾಗುವಂತೆ ಪ್ರಾಮುಖ್ಯತೆ ನೀಡಿ ಭಾಷಾಂತರ ಮಾಡಿದೆ. UDB ಯಲ್ಲಿ ಆಗಿಂದಾಗ್ಗೆ ಇತರ ಉದ್ದೇಶಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ. UDB ಇಂತಹ ಉದ್ದೇಶಗಳನ್ನು ಸ್ಪಷ್ಟವಾಗಿ ಹೇಳಲು ಕಾರಣನೀವು ಭಾಷಾಂತರ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂಬುದೇ. ನಿಮ್ಮ ಶ್ರೋತೃಗಳು ಮತ್ತು ಓದುಗರು ಈ ಮಾಹಿತಿಗಳನ್ನು ಕ್ರಮವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುವುದು ಅಗತ್ಯ.

ಯಾವ ಮಾಹಿತಿಯನ್ನು ಸರಿಸದೆ ಹೋದರೂ ನಿಮ್ಮ ಶ್ರೋತೃಗಳು ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂದು ನೀವು ಭಾಷಾಂತರ ಮಾಡುವಾಗ ಗಮನದಲ್ಲಿಟ್ಟು ನಿರ್ಧರಿಸಬೇಕು. ನಿಮ್ಮ ಓದುಗರು ಅಥವಾ ಶ್ರೋತೃಗಳು ಸ್ಪಷ್ಟವಾದ ಮಾಹಿತಿಯನ್ನು ನೀಡದೆ ಇದ್ದರೂ ಅರ್ಥಮಾಡಿಕೊಳ್ಳಲು ಸಮರ್ಥರಾದರೆ ಆಗ ಸ್ಪಷ್ಟ ಮಾಹಿತಿಯನ್ನು ಬಳಸಿ. ನಿಮ್ಮ ಶ್ರೋತೃಗಳು ಹೇಗಿದ್ದರೂ ಅರ್ಥಮಾಡಿಕೊಳ್ಳುತ್ತಾರೆಂದು ಭಾವಿಸಿ ಅರ್ಥವಾಗುವಂತಹ ಮಾಹಿತಿಯನ್ನು ಉಲ್ಲಂಘಿಸಿ ಭಾಷಾಂತರಮಾಡುವುದು ಸರಿಯಲ್ಲ ಎಂಬುದು ನಿಮ್ಮ ನೆನಪಿನಲ್ಲಿರಲಿ (see Assumed Knowledge and Implicit Information)

ಯೇಸು ಸಿಮೋನನಿಗೆ - " ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವ ಬೆಸ್ತನಾಗವಿ " ." (ಲೂಕ 5:10 ULB)

ಆದರೆ ಯೇಸು ಸಿಮೋನನಿಗೆ " ಅಂಜಬೇಡ " ಎಂದು ಹೇಳಿದನು. " ನೀವು ಇದುವರೆಗೂ ಮೀನನನ್ನು ಹಿಡಿಯುತ್ತಿದ್ದಿರಿ, ಆದರೆ ಇಂದಿನಿಂದ ಮನುಷ್ಯರನ್ನು ಹಿಡಿಯುವವರಾಗಿ ನನ್ನ ಶಿಷ್ಯರಾಗುವಿರಿ." (ಲೂಕ5:10 UDB)

ಇಲ್ಲಿರುವ ವಾಕ್ಯಭಾಗಗಳಲ್ಲಿ UDB ಓದುಗರಿಗೆ ಸಿಮೋನನು ಮೀನು ಹಿಡಿಯುವವರಿಗಾಗಿ ವ್ಯಾಪಾರ ಮಾಡುತ್ತಿದ್ದನು ಎಂದು ನೆನೆಪಿಸುತ್ತದೆ. ಇದರೊಂದಿಗೆ ಯೇಸು ಸಿಮೋನನು ಮಾಡುತ್ತಿದ್ದ ಕೆಲಸಕ್ಕೂ ಮುಂದೆ ಮಾಡುವ ಕೆಲಸಕ್ಕೂ ಇರುವ ಸಮಾನತೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಇದರೊಂದಿಗೆ ಯೇಸು ಸಿಮೋನನನ್ನು"ಮನುಷ್ಯರನ್ನು ಹಿಡಿಯುವವರಾಗ ಬೇಕು " ಎಂದು ಹೇಳುವಾಗ ಅವನ ಉದ್ದೇಶವೇನೆಂದರೆ (ULB), ಮುಂದೆ ತನ್ನ ಜನರನ್ನು ನಡೆಸುವ ನಾಯಕನಾಗಬೇಕೆಂದು ಬಯಸುತ್ತಾನೆ " (UDB).

ಮೈಯೆಲ್ಲಾ ಕುಷ್ಠರೋಗದಿಂದ ತುಂಬಿದ ಮನುಷ್ಯನೊಬ್ಬನು ಯೇಸುವನ್ನು ಕಂಡೊಡನೆ ಆತನಿಗೆ ಅಡ್ಡಬಿದ್ದು - " ಸ್ವಾಮಿ ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ .ಎಂದು ಬೇಡಿಕೊಂಡನು " (ಲೂಕ 5:12 ULB)

ಅವನು ಯೇಸುವನ್ನು ನೋಡಿದೊಡನೆ ಆತನಿಗೆ ಸಾಷ್ಠಾಂಗವೆರೆಗಿದನು ,ಯೇಸುವನ್ನು ಕುರಿತು ಅವನೊಂದಿಗೆ " ಸ್ವಾಮಿ, ನೀನು ನನ್ನನ್ನು ಶುದ್ಧಮಾಡಿ ಗುಣಪಡಿಸಬಲ್ಲೆ ಏಕೆಂದರೆ ನೀನು ಮನಸ್ಸು ಮಾಡಿದರೆ ನನ್ನನ್ನು ಗುಣಪಡಿಸುವ , ಸಾಮರ್ಥ್ಯ ಹೊಂದಿರುವೆ "!" (ಲೂಕ 5:12 UDB)

ಇಲ್ಲಿ UDB ಸತ್ಯವೇದದಲ್ಲಿ ಆ ಕುಷ್ಠರೋಗಿಯು ಆಕಸ್ಮಿಕವಾಗಿ ಯೇಸುವಿನ ಕಾಲಿಗೆ ಅಡ್ಡಬೀಳಲಿಲ್ಲ. ಅದರ ಬದಲು ಎಲ್ಲವನ್ನೂತಿಳಿದೇ ಅಡ್ಡಬಿದ್ದು ಗುಣಪಡಿಸಲು ಕೇಳಿದ ಇದರೊಂದಿಗೆ UDB ಸತ್ಯವೇದದಲ್ಲಿ ಅವರು ಯೇಸುವನ್ನು ಕುರಿತು ತನ್ನನ್ನು ಗುಣಪಡಿಸುವಂತೆ ಹೇಳಿದ ಎಂಬುದನ್ನು ಸ್ಪಷ್ಟಪಡಿಸಿದೆ. ULB ಸತ್ಯವೇದದಲ್ಲಿ ಅವನು ಸ್ಪಷ್ಟವಾಗಿ ತನ್ನ ಕೋರಿಕೆಯನ್ನು ತಿಳಿಸಿದ.

ಸಾಂಕೇತಿಕವಾದ ಕ್ರಿಯೆಗಳು.

** ವ್ಯಾಖ್ಯಾನ** - ಎಂಬುದು ನಿರ್ದಿಷ್ಟ ವಿಷಯವನ್ನು ತಿಳಿಸಲು ಕೆಲವು ಸಾಂಕೇತಿಕವಾದ ಕ್ರಿಯೆಗಳ ಮೂಲಕ ತಿಳಿಸುವುದನ್ನು ಸಾಂಕೇತಿಕ ಕ್ರಿಯೆಯೆಂದು ಕರೆಯುತ್ತಾರೆ.

ULB ಸತ್ಯವೇದದಲ್ಲಿ ಯಾವುದೇ ವಿವರಣೆ ಇಲ್ಲದೆ ಪದೇಪದೇ ಇಂತಹ ಸಾಂಕೇತಿಕ ಕ್ರಿಯೆಗಳನ್ನು ಬಳಸಲಾಗುತ್ತದೆ. UDB ಯಲ್ಲಿ ಆಗ್ಗಿಂದಾಗ್ಗೆ ಸಾಂಕೇತಿಕ ಪ್ರಕ್ರಿಯೆಗಳನ್ನು ಅರ್ಥ, ವ್ಯಾಖ್ಯಾನಗಳ ಮೂಲಕ ತಿಳಿಸಲಾಗುವುದು.

ನೀವು ಭಾಷಾಂತರಿಸುವಾಗ ನಿಮ್ಮ ಓದುಗರು ಸಾಂಕೇತಿಕ ಕ್ರಿಯೆಗಳನ್ನು ಸರಿಯಾಗಿ ಅರ್ಥಮಾಡಿ ಕೊಳ್ಳುತ್ತಾರೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ನಿಮ್ಮ ಓದುಗರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ UDB ಯಲ್ಲಿ ಮಾಡಿದಂತೆ ಮಾಡಬೇಕು.(ಸಾಂಕೇತಿಕ ಕ್ರಿಯೆಗಳು ನೋಡಿ)

ಮಹಾ ಯಾಜಕನು ತನ್ನ ಅಂಗಿಗಳನ್ನು ಹೆಣೆದುಕೊಂಡನು (ಮಾರ್ಕ 14:63 ULB)

ಯೇಸುವಿನ ಮಾತನ್ನು ಕೇಳಿ ಮಹಾಯಾಜಕನು ದಿಗಿಲುಗೊಂಡು ತನ್ನ ಮೇಲಂಗಿಗಳನ್ನು ಹೆಣೆದುಕೊಂಡನು.(ಮಾರ್ಕ 14:63 UDB)

ಇಲ್ಲಿ ಮಹಾಯಾಜಕನು ತನ್ನ ಮೇಲಂಗಿಯನ್ನು ಹರಿದುಕೊಂಡದ್ದು ಆಕಸ್ಮಿಕವಾದ ಘಟನೆಯಲ್ಲ ಎಂಬುದನ್ನು UDB ಸ್ಪಷ್ಟಪಡಿಸುತ್ತದೆ. ಅವನು ಬಹುಷಃ ತನ್ನ ಮೇಲಂಗಿಯನ್ನು ಹರಿದುಕೊಳ್ಳುವ ಮೂಲಕ ತನ್ನ ಸಿಟ್ಟನ್ನು ಇಲ್ಲವೆ ದುಃಖವನ್ನು ವ್ಯಕ್ತಪಡಿಸಲು ಇರಬಹುದು ಎಂಬುದನ್ನು UDB ತಿಳಿಸುತ್ತದೆ.

ಏಕೆಂದರೆ ಮಹಾಯಾಜಕನು ತನ್ನ ಮೇಲಂಗಿಯನ್ನು ಹರಿದುಕೊಂಡದ್ದು ಖಚಿತ ಎಂಬುದನ್ನು UDB ತಿಳಿಸುತ್ತದೆ. ಆದುದರಿಂದ ಸಾಂಕೇತಿಕವಾದ ಪ್ರಕ್ರಿಯೆ ನಡೆಯದಿದ್ದರೆ ನೀವು ಕ್ರಿಯೆಯಬಗ್ಗೆ ಹೇಳುವ / ಬರೆಯುವ ಅಗತ್ಯವಿರುವುದಿಲ್ಲ. ಇದಕ್ಕೆ ಉದಾಹರಣೆಗಳು ಈ ಕೆಳಗೆ ನೀಡಿರುವಂತಿದೆ.

ಇಂತದನ್ನು ನಿಮ್ಮ ದೇಶಾಧಿಪತಿಗೆ ಒಪ್ಪಿಸಿ, ಆಗ ನಿಮ್ಮನ್ನು ಮೆಚ್ಚುವನೋ ?ಇಲ್ಲವೇ ನಿಮ್ಮ ಬಗ್ಗೆ ಪ್ರಸನ್ನನಾಗಿ ಗೌರವಿಸಿ ಸ್ವೀಕರಿಸುವನೋ ? ?" (ಮಲಾಕಿ 1:8 ULB)

ನೀವು ನಿಮ್ಮ ದೇಶಾಧಿಪತಿಗೆ ಇಂತಹ ಕಾಣಿಕೆಗಳನ್ನು ಅರ್ಪಿಸುವ ಧೈರ್ಯಮಾಡಲಾರಿರಿ. ಅವನು ಅವುಗಳನ್ನು ಸ್ವೀಕರಿಸಲಾರ. ಅವನು ನಿಮ್ಮ ಇಂತಹ ಕಾಣಿಕೆಯಿಂದ ಅಸಮಾಧಾನಗೊಳ್ಳಬಹುದು ಮತ್ತುನಿಮ್ಮ ಕಾರ್ಯವನ್ನು ನಿರೀಕ್ಷಿಸುವುದಿಲ್ಲ.! (ಮಲಾಕಿ i 1:8 UDB)

"ನಿನ್ನನ್ನು ಮೆಚ್ಚಿ, ಪ್ರಸನ್ನನಾಗಿ ಗೌರವಿಸಿ ಸ್ವೀಕರಿಸುವನು," ಎಂಬ ಸಾಂಕೇತಿಕ ಪ್ರತಿಕ್ರಿಯೆULB,ಯಲ್ಲಿ ತಿಳಿಸಿದಂತೆ UDB:ಯಲ್ಲೂ ಇದೆ. ನಿಮ್ಮ ಕಾರ್ಯದ ಬಗ್ಗೆ ಅವನು ಅಸಮಾಧಾನಗೊಳ್ಳುವುದರೊಂದಿಗೆ, ನಿಮ್ಮ ಕಾರ್ಯವನ್ನು ನಿರೀಕ್ಷಿಸುವುದಿಲ್ಲ. ಮಲಾಕಿ ಇಲ್ಲಿ ಯಾವ ಒಂದು ನಿರ್ಧಿಷ್ಟವಾದ ಕಾರ್ಯವನ್ನು ಹೇಗೆ ನಡೆಯಿತೋ ಎಂದು ಹೇಳಲ್ಲಿಲ್ಲ ಅದ್ದರಿಂದ ನೀವು ಅದನ್ನು ಈ ರೀತಿ ಹೇಳಬಹುದು. ಈ ಘಟನೆಯಿಂದ ವ್ಯಕ್ತವಾದ ಉದ್ದೇಶವನ್ನು ಕುರಿತು ಹೇಳುವುದೇ ಮಲಾಕಿಯ ಉದ್ದೇಶ.

ಕರ್ಮಣಿ ಕ್ರಿಯಾಪದಗಳ ನಮೂನೆಗಳು.

ಹಿಬ್ರೂ ಮತ್ತು ಗ್ರೀಕ್ ಸತ್ಯವೇದಗಳಲ್ಲಿ ಕರ್ಮಣಿ ಕ್ರಿಯಾಪದಗಳ ನಮೂನೆಗಳು ಬಳಕೆಯಾದರೂ ಇತರ ಭಾಷೆಗಳಲ್ಲಿ ಬಳಸುವ ಸಾಧ್ಯತೆ ಇರುವುದಿಲ್ಲ. ಮೂಲಭಾಷೆಯಲ್ಲಿ ಬಳಸಿದಂತೆ ULBಯಲ್ಲಿ ಇಂತಹ ಕರ್ಮಣಿ ಕ್ರಿಯಾಪದ ರೂಪಗಳನ್ನು ಬಳಸಲಾಗುತ್ತದೆ. ಆದರೆ UDBಯಲ್ಲಿ ಇಂತಹ ಕರ್ಮಣಿ ಕ್ರಿಯಾಪದ ನಮೂನೆಗಳನ್ನು ಬಳಸುವುದಿಲ್ಲ. ಇದರ ಫಲಿತಾಂಶದಿಂದ UDBಯಲ್ಲಿ ಅನೇಕ ಪದಗುಚ್ಛ ಗಳನ್ನು ಮರುರಚನೆ ಮಾಡುತ್ತದೆ.

ನೀವು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಇಂತಹ ಘಟನೆಗಳನ್ನು ಅಥವಾ ವಾಕ್ಯಗಳನ್ನು ಬಳಸುವಾಗ ಕರ್ಮಣಿ ಕ್ರಿಯಾಪದಗಳ ಅಭಿವ್ಯಕ್ತಿಯನ್ನು ಹೇಗೆ ಬಳಸಬಹುದು ಎಂದು ನಿರ್ಧರಿಸಬೇಕು. ಉದಾಹರಣೆಗೆ ಕೆಳಗೆ ನಮೂದಿಸಿರುವ ವಾಕ್ಯಗಳನ್ನು ಗಮನಿಸಿ. ನೀವು ಇಂತಹ ಕರ್ಮಣಿ ಕ್ರಿಯಾಪದ ನಮೂನೆಯನ್ನು ನಿಗಧಿತ ಸಂದರ್ಭದಲ್ಲಿ ಬಳಸಲಾಗದಿದ್ದರೆ UDB ಯಲ್ಲಿರುವ ಇದಕ್ಕೆ ಪರ್ಯಾಯವಾದ ಮರುರಚನೆಯಾದ ಪದಗುಚ್ಛಗಳನ್ನು ಬಳಸಬಹುದು (ಕರ್ತರಿ ಕರ್ಮಣಿ ಪ್ರಯೋಗವನ್ನು ನೋಡಿ)

ಸತ್ಯವೇದದಿಂದ ಉದಾಹರಣೆಗಳು

ಅವನಿಗೂ < u>ಅವನ ಸಂಗಡ ಇದ್ದವರೆಲ್ಲರೂ, ತಾವು ಹಿಡಿದ ಮೀನುಗಳನ್ನು ನೋಡಿ , ವಿಸ್ಮಯಗೊಂಡರು. (ಲೂಕ 5:9 ULB)

ಅವನು ಹೀಗೆ ಹೇಳಲು ಕಾರಣವೇನೆಂದರೆ ಮೀನುಗಳು ತುಂಬಿದ ಬಲೆಯನ್ನು ನೋಡಿ ಅವನು ವಿಸ್ಮಯಗೊಂಡನು ಅವನೊಂದಿಗೆ ಇದ್ದ ಎಲ್ಲರೂ ವಿಸ್ಮಯಗೊಂಡರು. (ಲೂಕ 5:9 UDB)

ULBಯಲ್ಲಿ ಬಳಸಿರುವ ಕರ್ಮಣಿ ಕ್ರಿಯಾಪದ ಬಳಕೆಯ ಬದಲಾಗಿ ಇಲ್ಲಿ UDB ಕರ್ತರಿ ಪ್ರಯೋಗದಲ್ಲಿ ಕ್ರಿಯಾಪದವಾಗಿ ಆಶ್ಚರ್ಯಚಕಿತರಾದರು ಪದವನ್ನು ಬಳಸುತ್ತಿದ್ದಾರೆ.

ಆತನ ಸುದ್ದಿಯು ಮತ್ತಷ್ಟು ಹರಡಿತು, ಜನರು ಆತನ ಉಪದೇಶವನ್ನು ಕೇಳುವುದಕ್ಕೆ ತಮ್ಮ ರೋಗಗಳಿಂದ ಗುಣಹೊಂದಲು ಗುಂಪು ಗುಂಪಾಗಿ ಕೂಡಿ ಬಂದರು. (ಲೂಕ 5:15 ULB)

ಇದರ ಪರಿಣಾಮವಾಗಿ ಜನರು ಗುಂಪು ಗುಂಪಾಗಿ ಯೇಸುವಿನ ಉಪದೇಶವನ್ನು ಕೇಳಲು ಮತ್ತು ಆತನಿಂದ ತಮ್ಮ ರೋಗ ಗುಣಪಡಿಸಿ ಕೊಳ್ಳಲು . ಬಂದರು. (ಲೂಕ 5:15 UDB)

ಇಲ್ಲಿ UDB ಮತ್ತು ULBಯಲ್ಲಿ ಬಳಕೆಯಾಗಿರುವ ಕರ್ಮಣಿಕ್ರಿಯಾಪದ ಬಳಕೆ ಮಾಡುವುದಿಲ್ಲ. ಇಲ್ಲಿ ಪದಗುಚ್ಛವನ್ನು ಮರುರಚಿಸಿ ಬಳಸಲಾಗಿದೆ. ಇಲ್ಲಿ ಯಾರು ಗುಣಹೊಂದುವವರು ಎಂಬುದನ್ನು ತಿಳಿಸಿದೆ. ಆತನಿಂದ ಅವರು ಗುಣಹೊಂದಲು ಬಯಸಿದರು.

ರೂಪಕ ಅಲಂಕಾರಗಳು ಮತ್ತು ಇತರ ಅಲಂಕಾರಗಳು

** ವ್ಯಾಖ್ಯಾನ** - ULB ಸತ್ಯವೇದದ ವಾಕ್ಯಭಾಗಗಳಲ್ಲಿ ಕಂಡುಬರುವ ಅಲಂಕಾರಗಳನ್ನು ಪ್ರತಿನಿಧಿಸಲು ಪ್ರಯತ್ನಿಸುತ್ತದೆ. ಆದರೆ UDB ಈ ಉದ್ದೇಶಗಳ ಅರ್ಥವನ್ನು ಬೇರೇ ರೀತಿಯಲ್ಲಿ ಹೇಳುತ್ತದೆ. ನೀವು ಭಾಷಾಂತರಿಸುತ್ತಿರುವ ಭಾಷೆಯ ಓದುಗರು ನೀವು ಬಳಸಿರುವ ಅಲಂಕಾರಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವರೋ, ಹೆಚ್ಚು ಪ್ರಯಾಸಪಡುತ್ತಾರೋ ಅಥವಾ ಅರ್ಥವೇ ಮಾಡಿಕೊಳ್ಳಲಾರರೋ,ತಿಳಿದುಕೊಳ್ಳಬೇಕು. ಅರ್ಥ ಮಾಡಿಕೊಳ್ಳಲು ಅವರು ಹೆಚ್ಚು ಪ್ರಯತ್ನಪಟ್ಟರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ನೀವು ಸರಿಯಾದ ಅರ್ಥನೀಡುವಂತೆ ಅಲಂಕಾರಗಳನ್ನು ಸರಿಯಾದ ರೀತಿಯಲ್ಲಿ ಬಳಸಬೇಕು.

ಕ್ರಿಸ್ತನ ವಿಷಯವಾದ ಸಾಕ್ಷಿಯು ನಿಮ್ಮಲ್ಲಿ ದೃಢವಾಗಿ ನೆಲೆಗೊಂಡ ಕಾರಣನೀವು ಎಲ್ಲಾ ನುಡಿಯಲ್ಲಿಯೂ ಎಲ್ಲಾ ತಿಳಿವಳಿಕೆಯಲ್ಲಿಯೂ ಆತನಲ್ಲಿ ಸಮೃದ್ಧಿಹೊಂದಿದವರಾಗಿದ್ದೀರಿ , (1 ಕೊರಿಂಥ 1:5 ULB)

ಕ್ರಿಸ್ತನು ನಿಮಗೆ ತುಂಬಾ ವಸ್ತುಗಳನ್ನು ನೀಡಿದ್ದಾನೆ . ಆತನ ತನ ಸತ್ಯವನ್ನು ಕುರಿತು ಮಾತನಾಡುವಂತೆಯೂ ದೇವರನ್ನು ಕುರಿತು ತಿಳಿದುಕೊಳ್ಳುವಂತೆ ಸಹಾಯಮಾಡುವನು. (1 ಕೊರಿಂಥ 1:5 UDB)

ಪೌಲನು "ಐಶ್ವರ್ಯ." "ಭೌತಿಕವಾದ ಐಶ್ವರ್ಯ"ಎಂಬ ರೂಪಕ ಅಲಂಕಾರದೊಂದಿಗೆ ಬಳಸಿ ಹೇಳಿದ್ದಾನೆ. "ಎಲ್ಲಾ ನುಡಿಯಲ್ಲಿಯೂ,ಎಲ್ಲಾ ತಿಳಿವಳಿಕೆಯಲ್ಲಿಯೂ " ಎಂಬ ವಿಷಯವನ್ನು ಕುರಿತು ವರ್ಣಿಸಿ ಹೇಳಿದ್ದಾನೆ.ಆದರೆ ಇದನ್ನು ಕೆಲವು ಓದುಗರು ಅರ್ಥ ಮಾಡಿಕೊಳ್ಳಲಾರರು UDBಯಲ್ಲಿ ಇದನ್ನು ವಿಭಿನ್ನವಾಗಿ ಹೇಳಿದೆ "ಭೌತಿಕ ಐಶ್ವರ್ಯ" ಕುರಿತು ಯಾವುದೇ ರೂಪಕ ಅಲಂಕಾರ ಬಳಸದೇ ಹೇಳಿದೆ.(ರೂಪಕ ಅಲಂಕಾರ) ನೋಡಿ.

ತೋಳಗಳ ನಡುವೆ ಕುರಿಗಳನ್ನು ಹೊಗಿಸಿದಂತೆ , ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ (ಮತ್ತಾಯ 10:16 ULB)

ನಾನು ನಿಮ್ಮನ್ನು ಹೊರಗೆ ಕಳುಹಿಸಿದಾಗ ನೀವು ತೋಳಗಳಂತೆ ಅಪಾಯಕಾರಿಯಾದ ಜನರ ನಡುವೆ ರಕ್ಷಣೆ ಇಲ್ಲದ ಕುರಿಗಳಂತೆ ಇರುವಿರಿ. . (ಮತ್ತಾಯ 10:16 UDB)

ಯೇಸು ಆತನ ಶಿಷ್ಯರಾದ ಅಪೋಸ್ತಲರು ಇತರ ಜನರ ಬಳಿಗೆ ಹೋಗುವಾಗ ಕುರಿಗಳು ತೋಳಗಳ ನಡುವೆ ಹೋದಂತೆ ಎಂಬ ಉಪಮಾ ಅಲಂಕಾರವನ್ನು ಬಳಸಿ ಹೇಳುತ್ತಾನೆ. ಕೆಲವು ಓದುಗರು ಅಪೋಸ್ತಲರು ಕುರಿಗಳಂತೆ ಮತ್ತು ಇತರೆ ಜನಗಳು ತೋಳಗಳಂತೆ ಇರಲು ಹೇಗೆ ಸಾಧ್ಯ ಎಂದು ಯೋಚಿಸಬಹುದು. UDB ಇದಕ್ಕೆ ಸರಿಯಾದ ವಿವರ ನೀಡುತ್ತದೆ. ಅಪೋಸ್ತಲರು ನಿರಾಯುಧರಾಗಿ, ಮುಗ್ಧರಾಗಿದ್ದರೆ, ಅವರ ಶತೃಗಳು, ನಿಂದಕರು ಅಪಾಕಾರಿಯಾಗಿರಬಹುದು (ಗಮನಿಸಿ. ಉಪಮಾ ಅಲಂಕಾರ)

ನಿಮ್ಮಲ್ಲಿ ಯಾರ್ಯಾರು ಕರ್ಮಗಳಿಂದ ನೀತಿವಂತರಾಗಬೇಕೆಂದು ಯೋಚಿಸುತ್ತಾರೋ ಅವರು ಕ್ರಿಸ್ತನಿಂದ ಅಗಲಿ ಹೋಗುವರು . ನೀವು ಕೃಪೆಯಿಂದ ದೂರವಾಗುವವರು. (ಗಲಾತ್ಯ 5:4 ULB)

ನೀವು ದೇವರ ದೃಷ್ಟಿಯಲ್ಲಿ ಒಳ್ಳೆಯವರೆಂದು ನಿರ್ಣಯಿಸಲ್ಪಡಬೇಕೆಂದು ನಿರೀಕ್ಷಿಸಿದರೆ, ನೀವು ನೀತಿವಂತರಾಗಿರಬೇಕು , ಆದರೆ ನೀವು ಕ್ರಿಸ್ತನನ್ನು ಅಗಲಿ ಆತನಿಂದ ಪ್ರತ್ಯೇಕವಾಗಿದ್ದೀರಿ ಇದರಿಂದ ದೇವರು ನಿಮಗೆ ಕೃಪಾಶೀರ್ವಾದಗಳನ್ನು ನೀಡುವುದಿಲ್ಲ. (ಗಲಾತ್ಯ 5:4 UDB)

ಅವರು ಧರ್ಮನೀತಿಗಳನ್ನು ಪಾಲಿಸುವವರಾದರೆ ಎಂದು ಹೇಳುವಾಗ ಪೌಲನು ವ್ಯಂಗ್ಯೋಕ್ತಿಯನ್ನು ಬಳಸುತ್ತಾನೆ. ಧರ್ಮ ಪ್ರಮಾಣದಲ್ಲಿ ಹೇಳಿರುವಂತೆ ಪ್ರತಿಯೊಬ್ಬರೂ ಮಾಡುವ ಹಂಗಿನಲ್ಲಿದ್ದಾರೆ ಎಂದು ಅವರಿಗೆ ಬೋಧಿಸಿದ್ದಾನೆ. ULB ಧರ್ಮ ಪ್ರಮಾಣದಂತೆ ಎಂಬ ಪದವನ್ನು ಆವರಣ ಚಿಹ್ನೆಗಳಲ್ಲಿ ಗುರುತಿಸಿ ಪೌಲನು ಅವರೆಲ್ಲರೂ ನೀತಿ ಪ್ರಮಾಣಗಳಿಗೆ ಬದ್ಧರಾಗಿರಬೇಕೆಂದು ತಿಳಿಸಿದ್ದಾನೆ. UDBಯಲ್ಲಿ ಇದೇ ಉದ್ದೇಶವನ್ನು ಇನ್ನೂ ಸ್ಪಷ್ಟವಾಗಿ ತಿಳಿಸುತ್ತಾ ಇತರರು ಇದು ಹೇಗೆ ನಂಬಿದ್ದಾರೆ ಎಂಬುದನ್ನು ತಿಳಿಸಿದೆ. (ಗಮನಿಸಿ ವ್ಯಂಗ್ಯೋಕ್ತಿ)

ಭಾವನಾಮಗಳ ಅಭಿವ್ಯಕ್ತಿ.

ULBಯಲ್ಲಿ ಪದೇಪದೇ ಭಾವನಾಮಗಳು, ಗುಣವಾಚಕಗಳು ಮತ್ತು ಇತರ ವಾಚಕಗಳನ್ನು ಬಳಸಲಾಗುತ್ತದೆ, ಏಕೆಂದರೆ ಸತ್ಯವೇದದ ವಾಕ್ಯಭಾಗಗಳನ್ನು ಅತ್ಯಂತ ಸೂಕ್ಷ್ಮವಾಗಿ ಹೋಲುತ್ತದೆ. UDBಯಲ್ಲಿ ಭಾವನಾಮಗಳ ಬಳಕೆ ಮಾಡಲಾಗಿದೆ, ಏಕೆಂದರೆ ಅನೇಕ ಭಾಷೆಯಲ್ಲಿ ಇಂತಹ ಭಾವನಾಮಗಳ ಆಭಿವ್ಯಕ್ತಿಯ ಬಳಕೆ ಇರುವುದಿಲ್ಲ.

ಇಂತಹ ವಿಚಾರಗಳನ್ನುನೀವು ಭಾಷಾಂತರಿಸುತ್ತಿರುವ ಭಾಷೆಯಲ್ಲಿ ಯಾವ ರೀತಿ ಅಭಿವ್ಯಕ್ತಿ ಪಡಿಸಿದರೆ ಸೂಕ್ತ ಎಂಬುದನ್ನು ನೀವು ನಿರ್ಧರಿಸಬೇಕು (see Abstract Nouns).

ಆತನು ನಿಮ್ಮನ್ನು ಎಲ್ಲಾ ನುಡಿಯಲ್ಲಿಯೂ ಸಕಲ ಜ್ಞಾನದಲ್ಲಿಯೂ, ತಿಳಿವಳಿಕೆಯಲ್ಲಿಯೂ ಸಮೃದ್ಧಿಯಾಗಿರುವಂತೆ .ಮಾಡಿದ್ದಾನೆ. (1 ಕೊರಿಥ1:5 ULB)

ಕ್ರಿಸ್ತನು ನಿಮಗೆ ಬೇಕಾದುದೆಲ್ಲವನ್ನೂ ಸಮೃದ್ಧಿಯಾಗಿ ನೀಡಿದ್ದಾನೆ. ಅವನು ಅವನ ಸತ್ಯವನ್ನು ಮಾತನಾಡಲು ಸಹಾಯ ಮಾಡಿದ್ದಲ್ಲದೆ ದೇವರನ್ನು ಕಂಡುಕೊಳ್ಳಲು ಸಹಾಯ ಮಾಡಿದ್ದಾನೆ. . (1 ಕೊರಿಂಥ 1:5 UDB)

ಇಲ್ಲಿ ULBಯಲ್ಲಿ "ಎಲ್ಲಾ ಮಾತುಗಳು / ನುಡಿಗಳು " ಮತ್ತು ಸಕಲ ಜ್ಞಾನ, ತಿಳಿವಳಿಕೆ ಎಂದು ಬಳಸುವುದು ಭಾವನಾಮಗಳಾಗಿ ಬಂದಿವೆ, abstract noun. ಇಲ್ಲಿ ಬರುವ ಒಂದು ಸಮಸ್ಯೆ ಎಂದರೆ ಓದುಗರಿಗೆ ಯಾರು ಮಾತನಾಡಬೇಕು, ಯಾವುದನ್ನು ಮಾತನಾಡ ಬೇಕು, ಯಾವ ಜ್ಞಾನ ತಿಳಿವಳಿಕೆ ತಿಳಿದುಕೊಳ್ಳಬೇಕು, ಹೇಗೆ ಳಿದುಕೊಳ್ಳಬೇಕು ಎಂಬ ಸಮಸ್ಯೆ ಬರುತ್ತದೆ. UDB ಈ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.

ಅಂತಿಮ ಅಭಿಪ್ರಾಯಗಳು

ಒಟ್ಟು ಅಭಿಪ್ರಾಯದ ಸಾರಾಂಶವೇನೆಂದರೆ ನಿಮಗೆ ಭಾಷಾಂತರಿಸಲು ಅನುಕೂಲವಾಗುವಂತೆ ಹೆಚ್ಚಿನ ಪ್ರಮಾಣದಲ್ಲಿ ಸತ್ಯವೇದದ ವಾಕ್ಯಗಳನ್ನು ಅರ್ಥ ಮಾಡಿಕೊಳ್ಳಲು ಮೂಲವಾಕ್ಯಭಾಗಗಳನ್ನು ತಿಳಿದುಕೊಳ್ಳಲು ULB ಸಹಾಯ ಮಾಡುತ್ತದೆ. UDB, ULBಯಲ್ಲಿನ ವಾಕ್ಯಭಾಗಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ಸತ್ಯವೇದದ ಮೂಲ ವಾಕ್ಯಭಾಗಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಎಲ್ಲ ಮಾರ್ಗಗಳನ್ನು ಪರಿಚಯಿಸಿ ಅರ್ಥಮಾಡಿಸುತ್ತದೆ.