kn_ta/translate/figs-events/01.md

13 KiB
Raw Permalink Blame History

ವಿವರಣೆ.

ಸತ್ಯವೇದದಲ್ಲಿ ಕೆಲವೊಮ್ಮೆ ನಡೆದ ಘಟನೆಗಳನ್ನು ಅನುಕ್ರಮವಾಗಿ ಹೇಳುವುದಿಲ್ಲ. ಸತ್ಯವೇದವನ್ನು ಬರೆದ ಲೇಖಕರು ತಾವು ತಿಳಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲವೇ ಘಟನೆಗಳ ಬಗ್ಗೆ ಬರೆಯುವಾಗ ಹಿಂದಿನ ಕೆಲವು ಸನ್ನಿವೇಶಗಳನ್ನು ಘಟನೆಗಳನ್ನು ಸಂದರ್ಭೋಚಿತವಾಗಿ ಬಳಸಿಕೊಂಡು ಚರ್ಚಿಸಬಹುದು ಅಥವಾ ಉಲ್ಲೇಖಿಸ ಬಹುದು. ಕೆಲವೊಮ್ಮೆ ಇಂತಹ ವಿಷಯಗಳು ಓದುಗರಿಗೆ ಗೊಂದಲ ಉಂಟುಮಾಡಬಹುದು

** ಇದಕ್ಕೆ ಕಾರಣವೇನೆಂದರೆ ಇದೊಂದು ಭಾಷಾಂತರ ಪ್ರಕರಣ** ಭಾಷಾಂತರ ಆಗದಿದ್ದರೆ ಓದುಗರು ಸನ್ನಿವೇಶಗಳನ್ನು ಯಾವ ಅನುಕ್ರಮದಲ್ಲಿ ಹೇಳಿದೆಯೋ ಅದೇ ಸರಿಯೆಂದು ತಿಳಿಯುವ ಸಾಧ್ಯತೆ ಇರುತ್ತದೆ. ಆದುದರಿಂದ ಸರಿಯಾದ ಅನುಕ್ರಮದಲ್ಲಿ ಘಟನೆಗಳನ್ನು ಸನ್ನಿವೇಶಗಳನ್ನು ಓದುಗರು ಅರ್ಥಮಾಡಿಕೊಳ್ಳುವಂತೆ ಬರೆಯುವುದು ಅವಶ್ಯಕ.

ಸತ್ಯವೇದದಲ್ಲಿನ ಉದಾಹರಣೆಗಳು.

ಆದರೆ ಹೆರೋದನು.. ಯೋಹಾನನ್ನು ಸೆರೆಯಲ್ಲಿ ಹಾಕಿಸಿದನು. ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಸಹ ದೀಕ್ಷಾಸ್ನಾನ ಮಾಡಿಸಿಕೊಂಡನು. (ಲೂಕ 3:20-21 ULB)

ಈ ಎರಡೂ ವಾಕ್ಯಗಳನ್ನು ಓದಿದಾಗ ಯೋಹಾನನು ಸೆರೆಗೆ ಹಾಕಲ್ಪಟ್ಟ ಮೇಲೆ ಯೇಸುವಿಗೆ ದೀಕ್ಷಾಸ್ನಾನ ಕೊಟ್ಟಂತೆ ಇದೆ. ಆದರೆ ಯೋಹಾನನು ಸೆರೆಗೆ ಹಾಕಿಸಿಕೊಳ್ಳುವುದಕ್ಕಿಂತ ಮೊದಲೇ ಯೇಸುವಿಗೆ ದೀಕ್ಷಾಸ್ನಾನ ನೀಡಿದ್ದನು.

ಯೆಹೋಶುವನು ಆಜ್ಞಾಪಿಸಿದಂತೆ ಏಳುಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಊದುತ್ತಾ ಯೆಹೋವನ ಮುಂದೆ ನಡೆದರು. ಯುದ್ಧಸನ್ನದರಾದವರು ಕೊಂಬುಗಳನ್ನು ಊದುತ್ತಿದ್ದರು. ಯೆಹೋಶುವನು ಜನರಿಗೆ "ನೀವು ಈಗ ಆರ್ಭಟಿಸಬಾರದು" ಅಂದನು ನಿಮ್ಮ ಧ್ವನಿಯು ಕೇಳಿಸದಿರಲಿ ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ, ಆರ್ಭಟಿಸಿರೆಂದು ನಾನು ಹೇಳುವ ದಿನದಂದು. ಮಾತ್ರ ಆರ್ಭಟಿಸಿರಿ ಎಂದು ಆಜ್ಞಾಪಿಸಿದನು." (ಯೆಹೋಶುವ 6:8-10 ULB)

ಈ ವಾಕ್ಯಗಳನ್ನು ಓದಿದಾಗ ಯೆಹೋಶುವನು ಜನರಿಗೆ ಸೈನ್ಯದವರು ಸನ್ನದ್ಧರಾಗಿ ನಡೆಯತೊಡಗಿದ ಮೇಲೆ ಆರ್ಭಟಿಸಬೇಡಿ ಎಂದು ಆಜ್ಞಾಪಿಸಿದಂತಿದೆ. ಆದರೆ ಯೆಹೋಶುವನು ಸೈನ್ಯದವರು, ಸನ್ನದ್ಧರಾಗಿ ನಡೆಯುವ ಮೊದಲೇ ಅದನ್ನು ಆಜ್ಞಾಪಿಸಿದ್ದನು.

ಬಲಿಷ್ಠನಾದ ದೇವದೂತನೊಬ್ಬನು " ಈ ಸುರುಳಿಯನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು ? ಎಂದು ಮಾಹಶಬ್ದದಿಂದ ಸಾರವುದನ್ನು ಕಂಡೆನು. (ಪ್ರಕಟಣೆ 5:2 ULB)

ಈ ವಾಕ್ಯಗಳನ್ನು ಓದಿದಾಗ ಮೊದಲು ಸುರುಳಿ ಬಿಚ್ಚಿದ ನಂತರ ಮುದ್ರೆ ಒಡೆಯಬೇಕು ಎಂಬಂತಿದೆ. ಆದರೆ ಮೊದಲು ಮುದ್ರೆ ಒಡೆದ ನಂತರವೇ ಸುರುಳಿ ಬಿಚ್ಚಲು ಸಾಧ್ಯ ಎಂದು ಎಲ್ಲರಿಗೂ ತಿಳಿದ ವಿಷಯ

ಭಾಷಾಂತರ ತಂತ್ರಗಳು.

  1. ನಿಮ್ಮ ಭಾಷೆಯಲ್ಲಿ ಈಗಾಗಲೇ ನಡೆದಿರುವ ಘಟನೆಗಳನ್ನು ಸಂದರ್ಭೋಚಿತವಾಗಿ ಪ್ರಸ್ತುತ ತಿಳಿಸುವ ವಿಷಯದೊಂದಿಗೆ ಸೇರಿಸಿ ಹೇಳುವ ಪದಗಳು, ನುಡಿಗಟ್ಟುಗಳು ಇದ್ದರೆ ಅವುಗಳನ್ನು ಬಳಸಿಕೊಳ್ಳಿ.
  2. ನಿಮ್ಮ ಭಾಷೆಯಲ್ಲಿ ಈಗಾಗಲೇ ನಡೆದಿರುವ ಘಟನೆಗಳನ್ನು ಪ್ರಸ್ತುತಪಡಿಸಿ ಹೇಳುವಾಗ ಕ್ರಿಯಾಪದಗಳು ಕಾಲವನ್ನು ಸೂಚಿಸುವ (ಕಾಲಸೂಚಕ) ಪದಗಳು ಇದ್ದರೆ ಬಳಸಿಕೊಳ್ಳಬಹುದು. (ಕ್ರಿಯಾಪದಗಳ ಬಗ್ಗೆ ಇರುವ ವಿವರವನ್ನು ನೋಡಿ)
  3. ನಿಮ್ಮ ಭಾಷೆಯಲ್ಲಿ ಅನುಕ್ರಮವಾಗಿ ತಿಳಿಸಬಹುದಾದರೆ ಎಲ್ಲಾ ಘಟನೆಗಳನ್ನು ಒಂದರನಂತರ ಒಂದರಂತೆ ಕ್ರಮವಾಗಿ ಬಳಸಬಹುದು. ಇದಕ್ಕೆ ಎರಡು ಅಥವಾ ಮೂರು ವಾಕ್ಯಗಳನ್ನು ಒಟ್ಟಿಗೆ ಸೇರಿಸಬೇಕಾಗಬಹುದು. (5-6ರತೆ). (ವಾಕ್ಯ ಬಂಧ Verse Bridges ನೋಡಿ)

ಭಾಷಾಂತರದ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು

  1. ನಿಮ್ಮ ಭಾಷೆಯಲ್ಲಿ ಬಳಸುವ ನುಡಿಗಟ್ಟುಗಳು, ಕಾಲಸೂಚಕ ಪದಗಳು ಒಂದು ಘಟನೆ ಈಗಾಗಲೇ ನಡೆದಬಗ್ಗೆ ತಿಳಿಸುವ ಪ್ರಸ್ತುತ ಅದನ್ನು ಬಳಸಿಕೊಳ್ಳಲು ಬಳಸಬಹುದಾದ ಸೂಕ್ತ ಪದಗಳು ಇದ್ದರೆ ಅವುಗಳಲ್ಲಿ ಒಂದನ್ನು ಬಳಸಿಕೊಳ್ಳಬಹುದು.
  • 20ಆಗ ಹೆರೋದನು ಯೋಹಾನನ್ನು ಸೆರೆಯಲ್ಲಿರಿಸಿದನು 21ಎಲ್ಲಾ ಜನರು ಯೋಹಾನನಿಂದ ದೀಕ್ಷಸ್ನಾನ ಪಡೆಯುವಾಗ, ಯೇಸು ಸಹ ದೀಕ್ಷಾ ಸ್ನಾನ ಪಡೆದನು. (ಲೂಕ 3:20-21 ULB)
  • 20ಹೆರೋದನು ಯೋಹಾನನ್ನು ಸೆರೆಯಲ್ಲಿಹಾಕಿಸಿದನು, 21ಯೋಹಾನನನ್ನು ಸೆರೆಯಲ್ಲಿ ಹಾಕುವ ಮೊದಲೇ,ಎಲ್ಲಾ ಜನರು ಯೋಹಾನನಿಂದ ದೀಕ್ಷಸ್ನಾನ ಮಾಡಿಸಿಕೊಂಡಾಗ ಯೇಸು ಸಹ ದೀಕ್ಷಾಸ್ನಾನ ಹೊಂದಿದನು.
  • ಇದರ ಸುರುಳಿಗಳನ್ನು ಬಿಚ್ಚುವುದಕ್ಕೂ, ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು ? (ಪ್ರಕಟಣೆ 5:2 ULB)
  • ಇದರ ಮುದ್ರೆಗಳನ್ನು ಒಡೆದ ನಂತರ ಇದರ ಸುರುಳಿಗಳನ್ನುಬಿಚ್ಚಲು ಯಾವನುಯೋಗ್ಯನು?
  1. ನಿಮ್ಮ ಭಾಷೆಯಲ್ಲಿ ಈಗಾಗಲೇ ನಡೆದಿರುವ ಘಟನೆಗಳನ್ನು ಪ್ರಸ್ತುತಪಡಿಸಿ ಹೇಳುವಾಗ ಕ್ರಿಯಾಪದಗಳು ಕಾಲವನ್ನು ಸೂಚಿಸುವ (ಕಾಲಸೂಚಕ) ಪದಗಳು ಇದ್ದರೆ ಬಳಸಿಕೊಳ್ಳಬಹುದು.
  • **8ಯೆಹೋಶುವನು ಜನರಿಗೆ ಆಜ್ಞಾಪಿಸಿದಂತೆ ಏಳುಜನ ಯಾಜಕರು ಏಳು ಕೊಂಬುಗಳನ್ನು ಹಿಡಿದು ಊದುತ್ತಾ ಯೆಹೋವನ ಮುಂದೆ ನಡೆದರು. ಮುಂದೆ ಹೋದಂತೆ ಅವರು ಆರ್ಭಟಿಸುತ್ತಾ ಕೊಂಬು ಊದುತ್ತಾ ನಡೆದರು..10ಆದರೆ ಯೆಹೋಶುವನು ಜನರಿಗೆ " ನೀವು ಈಗ ಆರ್ಭಟಿಸದಿರಿ ಎಂದು ಆಜ್ಞಾಪಿಸಿದನು.

ನಿಮ್ಮ ಧ್ವನಿಯು ಕೇಳಿಸದಿರಲಿ ನಾನು ಆರ್ಭಟಿಸಿರೆಂದು ಹೇಳುವ ದಿನಮಾತ್ರ ಆರ್ಭಟಿಸಿರಿ,.ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ ನಾನು ಹೇಳಿದ ದಿನಮಾತ್ರ ಆರ್ಭಟಿಸಿರಿ "** (ಯೆಹೋಶುವ 6:8-10 ULB)

  • **8ಯೆಹೋಶುವನು ಜನರಿಗೆ ಆಜ್ಞಾಪಿಸಿದಂತೆ ಏಳುಜನ ಯಾಜಕರು ಏಳು ಕೊಂಬುಗಳನ್ನು ಹಿಡಿದು ಊದುತ್ತಾ ಯೆಹೋವನ ಮುಂದೆ ನಡೆದರು. ಮುಂದೆ ಹೋದಂತೆ ಅವರು ಆರ್ಭಟಿಸುತ್ತಾ ಕೊಂಬು ಊದುತ್ತಾ ನಡೆದರು..10ಆದರೆ ಯೆಹೋಶುವನು ಜನರಿಗೆ " ನೀವು ಈಗ ಆರ್ಭಟಿಸದಿರಿ ಎಂದು ಆಜ್ಞಾಪಿಸಿದನು.

ನಿಮ್ಮ ಧ್ವನಿಯು ಕೇಳಿಸದಿರಲಿ ನಾನು ಆರ್ಭಟಿಸಿರೆಂದು ಹೇಳುವ ದಿನಮಾತ್ರ ಆರ್ಭಟಿಸಿರಿ,.ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ ನಾನು ಹೇಳಿದ ದಿನಮಾತ್ರ ಆರ್ಭಟಿಸಿರಿ**

  1. ನಿಮ್ಮ ಭಾಷೆಯಲ್ಲಿ ಅನುಕ್ರಮವಾಗಿ ತಿಳಿಸಬಹುದಾದರೆ ಎಲ್ಲಾ ಘಟನೆಗಳನ್ನು ಒಂದರನಂತರ ಒಂದರಂತೆ ಕ್ರಮವಾಗಿ ಬಳಸಬಹುದು.

ಇದಕ್ಕೆ ಎರಡು ಅಥವಾ ಮೂರು ವಾಕ್ಯಗಳನ್ನು ಒಟ್ಟಿಗೆ ಸೇರಿಸಬೇಕಾಗಬಹುದು. (5-6ರತೆ).

  • **8ಯೆಹೋಶುವನು ಜನರಿಗೆ ಆಜ್ಞಾಪಿಸಿದಂತೆ ಏಳುಜನ ಯಾಜಕರು ಏಳು ಕೊಂಬುಗಳನ್ನು ಹಿಡಿದು ಊದುತ್ತಾ ಯೆಹೋವನ ಮುಂದೆ ನಡೆದರು. ಮುಂದೆ ಹೋದಂತೆ ಅವರು ಆರ್ಭಟಿಸುತ್ತಾ ಕೊಂಬು ಊದುತ್ತಾ ನಡೆದರು..10ಆದರೆ ಯೆಹೋಶುವನು ಜನರಿಗೆ " ನೀವು ಈಗ ಆರ್ಭಟಿಸದಿರಿ ಎಂದು ಆಜ್ಞಾಪಿಸಿದನು.

ನಿಮ್ಮ ಧ್ವನಿಯು ಕೇಳಿಸದಿರಲಿ ನಾನು ಆರ್ಭಟಿಸಿರೆಂದು ಹೇಳುವ ದಿನಮಾತ್ರ ಆರ್ಭಟಿಸಿರಿ,.ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ ನಾನು ಹೇಳಿದ ದಿನಮಾತ್ರ ಆರ್ಭಟಿಸಿರಿ."** (ಯೆಹೋಶುವ 6:8-10 ULB)

  • 8-10ಯೆಹೋಶುವ ಜನರಿಗೆ, "ಆರ್ಭಟಿಸ ಬೇಡಿ " ಎಂದು ಆಜ್ಞಾಪಿಸಿದನು. " ನಾನು ನಿಮಗೆ ಹೇಳುವವರೆಗೂ ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ" " ಆಗ ಮಾತ್ರ ನೀವು ಆರ್ಭಟಿಸಬೇಕು ". ಯೆಹೋಶುವನು ತನ್ನ ಜನರಿಗೆ ಆಜ್ಞಾಪಿಸಿದಂತೆ ಯೆಹೋವನ ಮುಂದೆ ಏಳುಜನ ಯಾಜಕರು ಏಳುಕೊಂಬುಗಳನ್ನು ಕೊಂಡೊಯ್ದರು.ಅವರು ಮುಂದುವರೆದಂತೆ ಕೊಂಬೂದುತ್ತಾ ನಡೆದರು.
  • ಈ ಸುರುಳಿಗಳನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು ? (ಪ್ರಕಟಣೆ 5:2 ULB)
  • ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಇದರ ಸುರುಳಿಗಳನ್ನು ಬಿಚ್ಚುವುದಕ್ಕೂ ಯಾವನು ಯೋಗ್ಯನು? ನೀವು ಈ ವೀಡಿಯೊ ವೀಕ್ಷಿಸಿ ಈ ಬಗ್ಗೆ ತಿಳಿದುಕೊಳ್ಳಿ at http://ufw.io/figs_events.