kn_ta/translate/figs-verbs/01.md

12 KiB
Raw Permalink Blame History

ವಿವರಣೆ

ಕ್ರಿಯಾಪದಗಳೆಂದರೆ ಕ್ರಿಯೆಯನ್ನು ಸೂಚಿಸುವ ಪದ, ಕೆಲವೊಮ್ಮೆ ಘಟನೆ ಅಥವಾ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ವಿವರಿಸುವ ಅಥವಾ ಗುರುತಿಸುವ ಪದವಾಗಿ ಬಳಕೆಯಾಗುತ್ತದೆ.

** ಉದಾಹರಣೆಗಳು** ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕ್ರಿಯಾಪದಗಳನ್ನು ಗುರುತಿಸಲಾಗಿದೆ.

  • ಜಾನ್ ಓಡಿದನು. (" ಓಡು" ಎಂಬುದು ಕ್ರಿಯೆ)
  • ಜಾನ್ ಬಾಳೆಹಣ್ಣನ್ನು ತಿಂದನು. (" ತಿನ್ನು " ಎಂಬುದು ಕ್ರಿಯೆ)
  • ಜಾನ್ ಮಾರ್ಕನನ್ನು ನೋಡಿದನು. ("ನೋಡಿದನು " ಎಂಬುದು ಒಂದು ಘಟನೆ)
  • ಜಾನ್ ಮರಣಹೊಂದಿದನು. (" ಮರಣಹೊಂದಿದ " ಎಂಬುದು ಒಂದು ಘಟನೆ)
  • ಜಾನ್ ಎತ್ತರವಾಗಿದ್ದಾನೆ.

ಇಲ್ಲಿ " ಎತ್ತರವಾಗಿದ್ದಾನೆ " ಎಂಬುದು ಜಾನ್ ನನ್ನು ವರ್ಣಿಸುತ್ತದೆ ಇಲ್ಲಿ "is" ಎಂಬುದು ಕ್ರಿಯಾಪದವಾಗಿ ಜಾನ್ ಮತ್ತು ಎತ್ತರ ಎರಡೂ ಪದಗಳ ನಡುವೆ ಸಂಬಂಧ ಕಲ್ಪಿಸುತ್ತದೆ

  • ಜಾನ್ ನೋಡಲು.ಸುಂದರವಾಗಿದ್ದಾನೆ.

"is handsome" - ಸುಂದರವಾಗಿದ್ದಾನೆ ಎಂಬುದು ಜಾನ್ ನನ್ನು ವರ್ಣಿಸುತ್ತದೆ. ಇಲ್ಲಿ "ನೋಡಲು" looks" ಎಂಬ ಕ್ರಿಯಾಪದ ಜಾನ್ ಮತ್ತು ಸುಂದರ ಎಂಬ ಪದಗಳನಡುವೆ ಸಂಬಂಧ ಕಲ್ಪಿಸುತ್ತದೆ.

  • ಜಾನ್ ನನ್ನ.ಸಹೋದರ (ಇಲ್ಲಿ ಬರುವ "is my brother" ಜಾನ್ ನನ್ನು ಗುರುತಿಸುತ್ತದೆ.)

ಜನರು ಅಥವಾ ವಸ್ತುಗಳು ಕ್ರಿಯಾಪದದೊಂದಿಗೆ ಸಂಬಂಧಪಟ್ಟಿರುವುದಕ್ಕೆ ಉದಾಹರಣೆ.

ಕ್ರಿಯಾಪದವು ಸಾಮಾನ್ಯವಾಗಿ ಯಾರ ಬಗ್ಗೆಯಾಗಲೀ ಯಾವುದರ ಬಗ್ಗೆಯಾಗಲಿ ಉದಾಹರಣೆಗಳನ್ನು ಹೇಳುವಂತಾದ್ದು. ಮೇಲೆ ಕೊಟ್ಟಿರುವ ಉದಾಹರಣೆಗಳು ಜಾನ್ ಬಗ್ಗೆ ಹೇಳಿದಂತಹವು.

"ಜಾನ್" ಇಲ್ಲಿ ಎಲ್ಲಾ ವಾಕ್ಯಗಳಲ್ಲೂ ಕರ್ತೃಪದ subject. ಇಂಗ್ಲೀಷ್ ಭಾಷೆಯಲ್ಲಿ ಕರ್ತೃಪದ /ಕ್ರಿಯಾಪದಕ್ಕೆ ಮೊದಲೇ ಬರುತ್ತದೆ. ಕೆಲವೊಮ್ಮೆ ಇನ್ನೊಬ್ಬ ವ್ಯಕ್ತಿ ಅಥವಾ ವಸ್ತು ಕ್ರಿಯಾಪದದೊಂದಿಗೆ ಸೇರಿಕೊಳ್ಳುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕ್ರಿಯಾಪದವನ್ನು ಗುರುತಿಸಲಾಗಿದೆ. ಹಾಗೆಯೇ "ಕರ್ಮಪದವನ್ನು" object ಹಾಗೆಯೇ ದೊಡ್ಡ ಅಕ್ಷರಗಳಲ್ಲಿ ನಮೂದಿಸಿದೆ. ಇಂಗ್ಲೀಷ್ ಭಾಷೆಯಲ್ಲಿ ಕರ್ಮಪದ ಕ್ರಿಯಾಪದದ ನಂತರ ಬರುತ್ತದೆ.

  • ಅವನು ಊಟ ಮಾಡಿದನು .

  • He sang a song. ಅವನು ಒಂದು ಹಾಡನ್ನು ಹಾಡಿದನು ** ಅವನು ಒಂದು ಪುಸ್ತಕವನ್ನು ಓದಿದನು**

  • ಅವನು ಪುಸ್ತಕವನ್ನು ನೋಡಿದನು ಕೆಲವು ಕ್ರಿಯಾಪದಗಳಿಗೆ ಕರ್ಮಪದ (object.) ಇರುವುದಿಲ್ಲ.

  • ಸೂರ್ಯನು ಆರುಗಂಟೆಗೆ ಹುಟ್ಟಿದನು

  • ಜಾನ್ ಚೆನ್ನಾಗಿ ನಿದ್ದೆಮಾಡಿದನು

  • ಜಾನ್ ನಿನ್ನೆ ಬಿದ್ದು ಬಿಟ್ಟನು

ಇಂಗ್ಲೀಷ್ ಭಾಷೆಯಲ್ಲಿ ಕರ್ಮಪದವನ್ನು ಬಿಟ್ಟು (ಅದು ಮುಖ್ಯವಲ್ಲದಿದ್ದರೆ) ವಾಕ್ಯಮಾಡಬಹುದು.

  • ಅವನು ರಾತ್ರಿಹೊತ್ತು ಊಟ ಮಾಡುವುದಿಲ್ಲ
  • ಅವನು ಯಾವಾಗಲೂಹಾಡುತ್ತಿರುತ್ತಾನೆ
  • ಅವನು ಚೆನ್ನಾಗಿ ಓದುತ್ತಾನೆ ಅವನಿಂದ ನೋಡಲುಆಗುವುದಿಲ್ಲ.

ಕೆಲವು ಭಾಷೆಯಲ್ಲಿ ಕ್ರಿಯಾಪದಕ್ಕೆ ಕರ್ಮಪದ ಮುಖ್ಯವಲ್ಲದಿದ್ದರೂ ಬಳಸುವ ಅವಶ್ಯಕತೆ ಇರುತ್ತದೆ. ಇಂತಹ ಭಾಷೆ ಮಾತನಾಡುವವರು ಮೇಲಿನ ವಾಕ್ಯಗಳಂತೆ ಬಳಸಬಹುದು.

ಅವನು ರಾತ್ರಿಹೊತ್ತು ಊಟ ಯಾವಾಗಲು ಮಾಡುವುದಿಲ್ಲ ಅವನು ಯಾವಾಗಲೂ ಹಾಡುಗಳನ್ನು ಹಾಡುತ್ತಾನೆ ಅವನು ಪದಗಳನ್ನು ಚೆನ್ನಾಗಿ ಓದುತ್ತಾನೆ

  • ಅವನು ಯಾವುದನ್ನೂ ನೋಡಲು ಆಗುವುದಿಲ್ಲ.

ಕರ್ತೃಪದ ಮತ್ತು ಕರ್ಮಪದ ಕ್ರಿಯಾಪದದೊಂದಿಗೆ ಗುರುತಿಸಲ್ಪಡುತ್ತದೆ.

ಕೆಲವು ಭಾಷೆಯಲ್ಲಿ ವ್ಯಕ್ತಿಗಳಿಗೆ ಅಥವಾ ವಸ್ತುಗಳಿಗೆ ಸಂಬಂಧಿಸಿದಂತೆ ಸ್ವಲ್ಪಮಟ್ಟಿಗೆ ಕ್ರಿಯಾಪದಗಳು ಭಿನ್ನವಾಗಬಹುದು. ಇಂಗ್ಲೀಷ್ ಭಾಷೆಯಲ್ಲಿ ಕೆಲವೊಮ್ಮೆ ಕ್ರಿಯಾಪದದ ಕೊನೆಯಲ್ಲಿ "s" ಅಕ್ಷರ ಸೇರಿಸಿ ಬಳಸುತ್ತಾರೆ.ಏಕೆಂದರೆ ಕರ್ತೃಪದ ಒಬ್ಬ ವ್ಯಕ್ತಿಯಾಗಿದ್ದರೆ (ಕ್ರಿಯಾಪದವನ್ನು ಏಕವಚನ ರೂಪದಲ್ಲಿ ಬಳಸಲು "s" ಸೇರಿಸಿ ಬಳಸಬೇಕು)

ಇನ್ನೂ ಬೇರೆ ಭಾಷೆಯಲ್ಲಿ ಕರ್ತೃಪದ "ನಾನು", "ನೀನು," ಅಥವಾ " ಅವನು," " ಅವಳು," ಏಕವಚನ, ಬಹುವಚನ, ಪುರುಷ, ಮಹಿಳೆ, ಮಾನವ,ಪ್ರಾಣಿ, ವಸ್ತು ಇವುಗಳನ್ನು ಅವಲಂಬಿಸಿ ಬಳಸುತ್ತಾರೆ.

  • ಅವರು ಪ್ರತಿದಿನ ಬಾಳೆಹಣ್ಣುಗಳನ್ನು - ತಿನ್ನುತ್ತಾರೆ ಇಲ್ಲಿ ಕರ್ತೃಪದ ಒಬ್ಬ ವ್ಯಕ್ತಿಗಿಂತ ಹೆಚ್ಚು " ಅವರು," ಜಾನ್ ಪ್ರತಿದಿನ ಬಾಳೆಹಣ್ಣುಗಳನ್ನು ತಿನ್ನುತ್ತಾನೆ
  • ಇಲ್ಲಿ ಕರ್ತೃಪದ ಜಾನ್ ಒಬ್ಬನೇ ವ್ಯಕ್ತಿ (ಏಕವಚನ)

ಕಾಲ ಮತ್ತು ಕಾಲಸೂಚಕ ಪ್ರತ್ಯಯಗಳು.

ಯಾವುದಾದರೂ ಒಂದು ಘಟನೆಯ ಬಗ್ಗೆ ಹೇಳುವಾಗ ಅದು ಯಾವಾಗ ನಡೆಯಿತು, ಈ ಘಟನೆ ನಡೆಯುತ್ತಿದೆಯೇ ಅಥವಾ ಮುಂದೆ ನಡೆಯುತ್ತದೆಯೇಎಂದು ಹೇಳುವಂತದ್ದು ಕಾಲಸೂಚಕ ಪ್ರತ್ಯಯಗಳು. ಕೆಲವೊಮ್ಮೆ ನಾವು ಇದನ್ನು ನೆನ್ನೆ, ಈಗ, ನಾಳೆ ಎಂಬ ಪದಗಳೊಂದಿಗೆ ಘಟನೆಯನ್ನು ಜೋಡಿಸಿ ಹೇಳುತ್ತೇವೆ. ಕೆಲವು ಭಾಷೆಯಲ್ಲಿ ಕ್ರಿಯಾಪದಗಳು ಸಮಯವನ್ನು ಆಧರಿಸಿ ಸ್ವಲ್ಪಮಟ್ಟಿಗೆ ವ್ಯತ್ಯಾಸಗಳೊಡನೆ ನಡೆಯಬಹುದು. ಈ ರೀತಿಯ ಸಮಯಕ್ಕೆ ಅನುಗುಣವಾಗಿ ನಡೆದ ಘಟನೆ ಬಗ್ಗೆ ಹೇಳುವುದೇ ಕಾಲಸೂಚಕ ಪ್ರತ್ಯಯ / ಕಾಲಗಳು ಎಂದು ಕರೆಯತ್ತೇವೆ. ಇಂಗ್ಲೀಷ್ ಭಾಷೆಯಲ್ಲಿ ಕ್ರಿಯಾಪದದ ಕೊನೆಯಲ್ಲಿ "ed" ಎಂಬುದನ್ನು ಸೇರಿಸಿ ಭೂತಕಾಲದಲ್ಲಿ ನಡೆದ ಘಟನೆ ಬಗ್ಗೆ ಹೇಳುತ್ತಾರೆ.

  • ಕೆಲವೊಮ್ಮೆ ಮೇರಿ ಮಾಂಸದ ಅಡುಗೆಯನ್ನು ಮಾಡುತ್ತಾಳೆ
  • ಮೇರಿ ನೆನ್ನೆ ಮಾಂಸದ ಅಡುಗೆಯನ್ನುಮಾಡಿದಳು (ಇಲ್ಲಿ ಮೇರಿ ಭೂತಕಾಲದಲ್ಲಿ ಮಾಡಿದ ಕೆಲಸವಿದು)

ಕೆಲವೊಮ್ಮೆ ಕೆಲವರು ಕ್ರಿಯೆ ನಡೆದ ಸಮಯವನ್ನು ನಮೂದಿಸಬಹುದಾದ ಕಾಲದಲ್ಲಿ ನಡೆಯುವ ಕೆಲಸ ಬಗ್ಗೆ ಹೇಳುತ್ತಾರೆ. ಇಂಗ್ಲೀಷ್ ಭಾಷೆಯಲ್ಲಿ "will" ಎಂಬ ಪದ ಬಳಸಿ ಭವಿಷ್ಯತ್ ಕಾಲದಲ್ಲಿ ನಡೆಯುವ ಕೆಲಸ/ಕಾರ್ಯದಬಗ್ಗೆ ಹೇಳುತ್ತಾರೆ.

  • ಮೇರಿ ನಾಳೆ ಮಾಂಸದ ಅಡುಗೆಯನ್ನು ಮಾಡುತ್ತಾಳೆ

ಅಂಶ

ಒಂದು ಘಟನೆಯ ಬಗ್ಗೆ ಹೇಳುವಾಗ ಕೆಲವೊಮ್ಮೆ ನಾವು ಆ ಘಟನೆ ಹೇಗೆ ನಡೆಯಿತು, ಎಷ್ಟು ಸಮಯ ತೆಗೆದುಕೊಂಡಿತು ಮತ್ತು ಇನ್ನೊಂದು ಘಟನೆಯೊಂದಿಗೆ ಸಂಬಂಧಹೊಂದಿದೆ. ಇದನ್ನೇ ಘಟನೆಯ ಸ್ವರೂಪ /ದೃಷ್ಟಿ ಎಂದು ಕರೆಯುತ್ತೇವೆ. ಇಂಗ್ಲೀಷ್ ಭಾಷೆಯಲ್ಲಿ ಕೆಲವೊಮ್ಮೆ ಕ್ರಿಯಾಪದದೊಂದಿಗೆ "is" or "has" ಮತ್ತು "s," "ing," or "edಕೊನೆಯಲ್ಲಿ ಸೇರಿವುದರೊಮದಿಗೆ ಒಂದು ಘಟನೆಗೂ ಮತ್ತು ಇನ್ನೊಂದು ಘಟನೆಗೂ ನಡುವೆ ಇರುವ ಸಂಬಂಧವನ್ನು ಸಮಯವನ್ನು ಸೂಚಿಸುತ್ತದೆ.

  • ಮೇರಿ ಪ್ರತಿದಿನ ಮಾಂಸದ ಅಡುಗೆಯನ್ನು ಬೇಯಿಸುತ್ತಾಳೆ ಇದು ಮೇರಿ ಆಗಿಂದಾಗ್ಗೆ ಮಾಡುವ ಕೆಲಸದ ಬಗ್ಗೆ ತಿಳಿಸುತ್ತದೆ.
  • ಮೇರಿ ಮಾಂಸದ ಅಡುಗೆಯನ್ನು ಬೇಯಿಸುತ್ತಿದ್ದಾಳೆ ಇದು ಮೇರಿ ಈ ಕ್ಷಣ ಏನು ಮಾಡುತ್ತಿದ್ದಾಳೆ ಎಂಬುದನ್ನು ಸೂಚಿಸುತ್ತದೆ. ಮೇರಿ ಮಾಂಸದ ಅಡುಗೆಯನ್ನು ಮಾಡಿದಳುಮತ್ತು ಜಾನ್ ಮನೆಗೆ ಬಂದನು ಇಲ್ಲಿ ಮೇರಿ ಮತ್ತು ಜಾನ್ ಮಾಡಿದ ಕೆಲಸದ ಬಗ್ಗೆ ಸರಳವಾಗಿ ಹೇಳಿದೆ.
  • ಮೇರಿ ಮಾಂಸದ ಅಡುಗೆ ಮಾಡುತ್ತಿರುವಾಗ ಜಾನ್ ಮನೆಗೆ ಬಂದನು. (ಇದು ಮೇರಿ ಕೆಲಸ ಮಾಡುತ್ತಿರುವಾಗ ಜಾನ್ ಮನೆಗೆ ಬಂದನು ಎಂಬುದನ್ನು ಸೂಚಿಸುತ್ತದೆ.)
  • ಮೇರಿ ಮಾಂಸದ ಅಡುಗೆ ಮಾಡಿದ್ದಾಳೆ ನಾವು ಅದನ್ನು ಊಟಮಾಡಬೇಕೆಂದು ಬಯಸುತ್ತಿದ್ದಾಳೆ. (ಇದು ಮೇರಿ ಮಾಡಿರುವ ಕೆಲಸದ ಸಮಯಕ್ಕೆ ಸಂಬಂಧಿಸಿದ್ದು.)
  • ಮೇರಿ ಮಾಂಸದ ಅಡಿಗೆ ಮಾಡುವ ಸಮಯದೊಳಗೆ ಮಾರ್ಕನು ಮನೆಗೆ ಬಂದನು. (ಇಲ್ಲಿ ಮೇರಿ ಭೂತಕಾಲದಲ್ಲಿ ಕೆಲಸಮಾಡಿ ಮುಗಿಸಿದ ಮೇಲೆ ಇನ್ನೊಂದು ಘಟನೆ ನಡೆದ ಬಗ್ಗೆ ತಿಳಿಸುತ್ತದೆ.)