kn_ta/translate/translate-symaction/01.md

10 KiB

ವಿವರಣೆಗಳು

ಸಾಂಕೇತಿಕ ಅಭಿನಯವು ಕೆಲವರು ತಾವು ಮಾಡುತ್ತಿರುವ ಕೆಲಸವನ್ನು ಕ್ರಮವಾಗಿ ಮಾಡಲು, ಅಭಿವ್ಯಕ್ತಿಸಲು ಬಳಸುವ ಉದ್ದೇಶ. ಕೆಲವು ಸಂಸ್ಕೃತಿಯಲ್ಲಿ ಜನರು ತಮ್ಮ ತಲೆಯನ್ನು ಮೇಲಿನಿಂದ ಕೆಳಗೆ ತಲೆಹಾಕಿದರೆ / ತೂಗಿದರೆ "ಹೌದು" ಎಂದು ಅರ್ಥ ಹಾಗೆಯೇ ತಲೆಯನ್ನು ಎಡಬಲಕ್ಕೆ ತೂಗಿದರೆ "ಇಲ್ಲ" ಎಂದು ಅರ್ಥ. ಇಂತಹ ಸಾಂಕೇತಿಕ ಅಭಿನಯಗಳು /ಕ್ರಿಯೆಗಳು ಎಲ್ಲಾ ಸಂಸ್ಕೃತಿಯಲ್ಲಿ ಒಂದೇ ರೀತಿಯಾಗಿ ಇರುವುದಿಲ್ಲ. ಕೆಲವೊಮ್ಮೆ ಸತ್ಯವೇದದಲ್ಲಿ ಜನರು ಸಾಂಕೇತಿಕ ಅಭಿನಯವನ್ನು ಮಾಡುತ್ತಾರೆ ಮತ್ತು ಕೆಲವೊಮ್ಮೆ ಅವರು ಸಾಂಕೇತಿಕ ಅಭಿನಯವನ್ನು ಉದ್ದೇಶಿಸಿ ಹೇಳಬಹುದು.

ಸಾಂಕೇತಿಕ ಕ್ರಿಯೆಯ ಬಗ್ಗೆ ಉದಾಹರಣೆಗಳು

ಕೆಲವು ಸಂಸ್ಕೃತಿಯಲ್ಲಿ ಜನರು ತಾವು ಇನ್ನೊಬ್ಬರ ಸ್ನೇಹವನ್ನು ಪಡೆಯಲು ಬಯಸುವುದನ್ನು ತಿಳಿಸಲು ಕೈಕುಲುಕುತ್ತಾರೆ. ಕೆಲವು ಸಂಸ್ಕೃತಿಯಲ್ಲಿ ಜನರು ಕೆಲವರನ್ನು ಕಂಡು ವಂದಿಸುವಾಗ ತಲೆಬಾಗಿ ವಂದಿಸಿ ಗೌರವ ಸೂಚಿಸುತ್ತಾರೆ.

ಕಾರಣ ಇದೊಂದು ಭಾಷಾಂತರ ವಿಷಯ.

ಒಂದು ಅಭಿನಯಕ್ಕೆ/ ನಟನೆಗೆ ಒಂದು ಸಂಸ್ಕೃತಿಯಲ್ಲಿ ಒಂದು ಅರ್ಥವಿದ್ದರೆ ಇನ್ನೊಂದು ಸಂಸ್ಕೃತಿಯಲ್ಲಿ ಬೇರೆ ಅರ್ಥ ಇರಬಹುದು ಇಲ್ಲವೆ ಅರ್ಥವಿಲ್ಲದೆ ಇರಬಹುದು. ಉದಾಹರಣೆಗೆ ಕೆಲವು ಸಂಸ್ಕೃತಿಯಲ್ಲಿ ಹುಬ್ಬುಗಳನ್ನು ಹಾರಿಸಿದರೆ " ನಾನು ಆಶ್ಚರ್ಯಚಕಿತನಾಗಿದ್ದೇನೆ " ಎಂದು ಅಥವಾ " ನೀವು ಏನು ಹೇಳುತ್ತಿದ್ದೀರಿ " ? ಎಂದು ಅರ್ಥ. ಬೇರೆ ಸಂಸ್ಕೃತಿಯಲ್ಲಿ ಇದರ ಅರ್ಥ " ಹೌದು " ಎಂದು. ಸತ್ಯವೇದದಲ್ಲಿ ಬರುವ ಜನರು ಮಾಡಿರುವ ಕೆಲಸಗಳು ಸಂಸ್ಕೃತಿಯಲ್ಲಿ ನಿರ್ದಿಷ್ಟ ಅರ್ಥಗಳಿರುವುದನ್ನು ಗುರುತಿಸಬೇಕು. ನಾವು ಸತ್ಯವೇದವನ್ನು ಓದುವಾಗ ಅಲ್ಲಿ ಬರುವ ಕೆಲವು ಸಾಂಕೇತಿಕ ವಿಷಯಗಳನ್ನು ಮತ್ತು ಅಭಿನಯಗಳ ಬಗ್ಗೆ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಪ್ರತಿಕ್ರಿಯಿಸುತ್ತೇವೆ. ಆದರೆ ಭಾಷಾಂತರಗಾರರು ಸತ್ಯವೇದದಲ್ಲಿ ಬರುವ ವ್ಯಕ್ತಿಗಳು ಯಾವ ಉದ್ದೇಶದಿಂದ, ಅರ್ಥದಿಂದ ಈ ಸಾಂಕೇತಿಕ ಕ್ರೀಯೆ ಮಾಡಿದರು ಎಂಬುದನ್ನುಅರ್ಥಮಾಡಿ ಕೊಳ್ಳಬೇಕು. ಅವರು ಬಳಸುವ ಚಟುವಟಿಕೆ ಅವರ ಸಂಸ್ಕೃತಿಯಲ್ಲಿ ಅವರು ಉದ್ದೇಶಿಸಿದ ಅರ್ಥವನ್ನು ನೀಡಲು ಅಸಮರ್ಥವಾದರೆ ಆ ಕ್ರಿಯೆಯು ಸರಿಯಾದ ಅರ್ಥಕೊಡುವ ಪದಗಳನ್ನು ಬಳಸಿ ಭಾಷಾಂತರಿಸಬೇಕು.

ಸತ್ಯವೇದದಿಂದ ಉದಾಹರಣೆಗಳು

ಯಾಯೀರನೆಂಬುವವನು ಬಂದು ಯೇಸುವಿನ ಪಾದಗಳ ಮೇಲೆ ಬಿದ್ದನು. (ಲೂಕ 8:41 ULB)

ಸಾಂಕೇತಿಕ ಕ್ರಿಯೆ ಇದರ ಅರ್ಥ: ಅವನು ಹೀಗೆ ಮಾಡಿದ್ದು ಅವನಿಗೆ ಯೇಸುವಿನ ಬಗ್ಗೆ ಗೌರವವನ್ನು ತೋರಿಸಲು.

ಇಗೋ, ಬಾಗಿಲಿನಲ್ಲಿ ನಿಂತುಕೊಂಡು ತಟ್ಟುತ್ತಾ. ಇದ್ದೇನೆ. ಯಾರಾದರೂ ನನ್ನ ಶಬ್ದವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟಮಾಡುವೆನು., ಅವನು ನನ್ನ ಸಂಗಡ ಊಟಮಾಡುವನು. (ಪ್ರಕಟಣೆ3:20 ULB)

ಸಾಂಕೇತಿಕ ಕ್ರಿಯೆ ಅರ್ಥ ಯಾರನ್ನಾದರೂ ನಮ್ಮ ಮನೆಯೊಳಗೆ ಬರುವಂತೆ ಆಹ್ವಾನಿಸುವುದಾದರೆ ಅವರು ಬಾಗಿಲಲ್ಲೇ ನಿಂತು ಮನೆಗೆ ಬರುವವರು ಬಾಗಿಲು ತಟ್ಟುತ್ತಿದ್ದಂತೆ ತೆರೆಯಬೇಕು.

ಭಾಷಾಂತರ ಕೌಶಲ್ಯಗಳು

ಓದುಗರು ಸತ್ಯವೇದದಲ್ಲಿನ ಜನರು ಯಾವ ಉದ್ಧೇಶದಿಂದ ಈ ಸಾಂಕೇತಿಕ ಕ್ರಿಯೆ ಮಾಡಿದರೊ ಮತ್ತು ಅದನ್ನು ಅರ್ಥಮಾಡಿಕೊಂಡರೋಅದು ಸರಿಯಾಗಿದ್ದರೆ ಅದನ್ನೇ ಬಳಸಿಕೊಳ್ಳಿ. ಹಾಗೆ ಸಾಧ್ಯವಾಗದಿದ್ದರೆ ಇಲ್ಲಿ ಕೊಟ್ಟಿರುವ ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿಕೊಳ್ಳಿ.

  1. ಇಲ್ಲಿ ಸಂಬಂಧಿಸಿದ ವ್ಯಕ್ತಿ ಏನು ಮಾಡಿದ ಮತ್ತು ಏಕೆ ಮಾಡಿದ ಎಂಬುದರ ಬಗ್ಗೆ ತಿಳಿಹೇಳಿ.
  2. ಆ ವ್ಯಕ್ತಿ ಏನು ಮಾಡಿದ ಎಂದು ಹೇಳಬೇಡಿ. ಆದರೆ ಅವನು ಯಾವ ಅರ್ಥದಲ್ಲಿ ಅದನ್ನು ಮಾಡಿದ ಎಂಬುದನ್ನು ತಿಳಿಸಿ.
  3. ನಿಮ್ಮ ಸಂಸ್ಕೃತಿಗೆ ಅನುಗುಣವಾಗಿ ಅದೇ ಅರ್ಥನೀಡುವ ಕ್ರಿಯೆ ಪದವಿದ್ದರೆ ಬಳಸಿಕೊಳ್ಳಿ.

ಇಂತಹ ಪ್ರಯೋಗಗಳನ್ನು ಪದ್ಯಭಾಗದಲ್ಲಿ, ಸಾಮ್ಯಗಳಲ್ಲಿ ಮತ್ತು ದೈವಸಂದೇಶಗಳಲ್ಲಿ ಬಳಸಬಹುದು. ಕೆಲವೊಮ್ಮೆ ಇಂತಹ ಸನ್ನಿವೇಶಗಳಲ್ಲಿ ಬರುವ ವ್ಯಕ್ತಿಗಳ ಕ್ರಿಯೆ ನಿರ್ದಿಷ್ಟವಾಗಿ, ನಿಜವಾಗಲು ನೇರವಾಗಿ ನಡೆಯುತ್ತಿದ್ದರೆ ಈ ತಂತ್ರ ಪ್ರಯೋಗಿಸಬೇಡಿ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು

  1. ಆ ವ್ಯಕ್ತಿ ಏನು ಮಾಡಿದ ಮತ್ತು ಏಕೆ ಹೀಗೆ ಮಾಡಿದ ಎಂಬುದನ್ನು ತಿಳಿಸಿ.
  • ಯಾಯೀರ ಯೇಸುವಿನ ಪಾದಗಳ ಮೇಲೆ ಬಿದ್ದನು (ಲೂಕ 8:41 ULB)
  • ಯಾಯೀರನು ಯೇಸುವಿನ ಪಾದಗಳ ಮೇಲೆ ಬಿದ್ದು ತನಗೆ ಯೇಸುವಿನ ಬಗ್ಗೆ ಇರುವ ಗೌರವವನ್ನು ತೋರಿಸಿದ.
  • ಇಗೋ, ನಾನು ಬಾಗಿಲ ಬಳಿ ನಿಂತು ತಟ್ಟುತ್ತಿದ್ದೇನೆ (ಪ್ರಕಟಣೆ 3:20 ULB)
  • ಇಗೋ ನೋಡಿ, ನಾನು ಬಾಗಿಲ ಬಳಿ ನಿಂತುಕೊಂಡಿದ್ದೇನೆ ಮತ್ತು ಬಾಗಿಲು ತಟ್ಟುತ್ತಿದ್ದೇನೆ ನನ್ನನ್ನು ಒಳಗೆ ಕರೆಯಿರಿ ಎಂದು ಕೇಳುತ್ತಿದ್ದೇನೆ.
  1. ಆ ವ್ಯಕ್ತಿ ಏನು ಮಾಡಿದ ಎಂದು ಹೇಳಬೇಡಿ. ಆದರೆ ಅವನು ಯಾವ ಅರ್ಥದಲ್ಲಿ ಅದನ್ನು ಮಾಡಿದ ಎಂಬುದನ್ನು ತಿಳಿಸಿ.
  • ಯಾಯೀರನು ಯೇಸುವಿನ ಪಾದಗಳ ಮೇಲೆ ಬಿದ್ದನು (ಲೂಕ 8:41 ULB)
  • ಯಾಯೀರನು ಯೇಸುವಿನ ಬಗ್ಗೆ ಇದ್ದ ಗೌರವವನ್ನು ತೋರಿಸಿದನು.
  • ಇಗೋ ನಾನು ಬಾಗಿಲ ಬಳಿ ನಿಂತು ತಟ್ಟುತ್ತಿದ್ದೇನೆ (ಪ್ರಕಟಣೆ 3:20 ULB)
  • ನೋಡಿ ನಾನು ಬಾಗಿಲ ಬಳಿ ನಿಂತು ನನ್ನನ್ನು ಒಳಗೆ ಕರೆಯಿರಿ ಎಂದು ಕೇಳುತ್ತಿದ್ದೇನೆ.
  1. ನಿಮ್ಮ ಭಾಷೆಯಲ್ಲಿ ಸಂಸ್ಕೃತಿಯಲ್ಲಿ ಇದೇ ಅರ್ಥವನ್ನು ಕೊಡುವ ಕ್ರಿಯೆಯ / ಅಭಿನಯದ ಪದವನ್ನು ಬಳಸಿ.
  • ಯಾಯೀರನು ಯೇಸುವಿನ ಪಾದಗಳ ಮೇಲೆ ಬಿದ್ದನು (ಲೂಕ 8:41 ULB) ಯಾಯೀರನು ಹೀಗೆ ಮಾಡಿದ್ದರಿಂದ ನಮ್ಮ ಸಂಸ್ಕೃತಿಯಲ್ಲಿ ಪೂರಕ ಪದವನ್ನು ಬಳಸುವ ಅಗತ್ಯವಿಲ್ಲ.
  • ಇಗೋ, ನಾನು ಬಾಗಿಲ ಬಳಿಯಲ್ಲಿ ನಿಂತು ತಟ್ಟುತ್ತಿದ್ದೇನೆ (ಪ್ರಕಟಣೆ 3:20 ULB) ಇಲ್ಲಿ ಯೇಸು ನಿಜವಾಗಲೂ ಬಾಗಿಲ ಬಳಿಯಲ್ಲಿ ನಿಂತುಕೊಂಡಿಲ್ಲ. ಆತನು ತನ್ನ ಜನರೊಂದಿಗೆ ಸಂಬಂಧವನ್ನು ಬೆಳೆಸಲು ಅವರೊಂದಿಗೆ ಮಾತನಾಡುತ್ತಿದ್ದಾನೆ. ಅನೇಕ ಸಂಸ್ಕೃತಿಯಲ್ಲಿ ಜನರು ವಿನಯದಿಂದ ಯಾರನ್ನಾದರೂ ಮನೆಯೊಳಗೆ ಸೇರಿಸಿಕೊಳ್ಳಲು ಗಂಟಲು ಸರಿಪಡಿಸಿಕೊಳ್ಳಲು ಬಳಸಿಕೊಳ್ಳಬಹುದು.
  • ಇಗೋ ನಾನು ಬಾಗಿಲ ಬಳಿ ನಿಂತು ನನ್ನ ಗಂಟಲು ಸರಿಮಾಡಿಕೊಳ್ಳುತ್ತೇನೆ.