kn_tw/bible/other/tenth.md

3.2 KiB

ಹತ್ತನೆಯ, ಹತ್ತರಲ್ಲಿ, ದಶಮಾಂಶ, ದಶಮಾಂಶಗಳು

ಪದದ ಅರ್ಥವಿವರಣೆ:

“ಹತ್ತನೆಯ” ಮತ್ತು “ದಶಮಾಂಶ” ಎನ್ನುವ ಪದಗಳು “ಶೇಕಡಾ ಹತ್ತು” ಅಥವಾ ಒಬ್ಬರ ಹಣದಲ್ಲಿ, ಬೆಳೆಗಳಲ್ಲಿ, ಪಶುಪ್ರಾಣಿಗಳಲ್ಲಿ, ಅಥವಾ ಅವರ ಆಸ್ತಿಪಾಸ್ತಿಗಳಲ್ಲಿ ದೇವರಿಗೆ ಕೊಡುವ “ಹತ್ತನೆಯ ಭಾಗ” ಎನ್ನುವದನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ದೇವರು ತನಗೆ ಕೃತಜ್ಞತೆಯ ಅರ್ಪಣೆಯನ್ನಾಗಿ ತಮಗೆ ಸಂಬಂಧಪಟ್ಟ ಪ್ರತಿಯೊಂದರಲ್ಲಿಯೂ ದಶಮಾಂಶಗಳನ್ನು ಕೊಡಬೇಕೆಂದು ಆತನು ಇಸ್ರಾಯೇಲ್ಯರಿಗೆ ಸೂಚಿಸಿದ್ದನು.
  • ಗುಡಾರವನ್ನು ಮತ್ತು ಸ್ವಲ್ಪ ಕಾಲವಾದ ನಂತರ ದೇವಾಲಯವನ್ನು ನೋಡಿಕೊಳ್ಳುತ್ತಾ ಸೇವೆ ಮಾಡುತ್ತಾ, ಯಾಜಕರಾಗಿರುವ ಇಸ್ರಾಯೇಲ್ಯರಿಗೆ ಸೇವೆ ಮಾಡುವ ಇಸ್ರಾಯೇಲ್ ಕುಲವಾದ ಲೇವಿಗೆ ಬೆಂಬಲ ಕೊಡುವುದಕ್ಕೆ ಈ ಅರ್ಪಣೆಯನ್ನು ಉಪಯೋಗಿಸುತ್ತಿದ್ದರು.
  • ಹೊಸ ಒಡಂಬಡಿಕೆಯಲ್ಲಿ ದೇವರಿಗೆ ದಶಮಾಂಶಗಳನ್ನು ಕೊಡುವ ಅವಶ್ಯಕತೆಯಿದ್ದಿಲ್ಲ, ಆದರೆ ಕ್ರೈಸ್ತ ಸೇವೆಯ ಕೆಲಸವನ್ನು ಬಲಪಡಿಸುವುದಕ್ಕೆ ಮತ್ತು ಅಗತ್ಯತೆಯಲ್ಲಿರುವ ಜನರಿಗೆ ಧಾರಾಳವಾಗಿ, ಸಂತೋಷವಾಗಿ ಸಹಾಯ ಮಾಡಬೇಕೆಂದು ವಿಶ್ವಾಸಿಗಳಿಗೆ ಆಜ್ಞಾಪಿಸಿದ್ದಾರೆ.
  • ಇದನ್ನು “ಹತ್ತನೆಯ ಭಾಗ” ಅಥವಾ “ಹತ್ತರಲ್ಲಿ ಒಂದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಂಬು, ಇಸ್ರಾಯೇಲ್, ಲೇವಿ, ಕುರಿದನಗಳು, ಮೆಲ್ಕೀಚೆದೆಕ, ಹೋಮ, ಗುಡಾರ, ದೇವಾಲಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H4643, H6237, H6241, G586, G1181, G1183