kn_tw/bible/kt/tabernacle.md

5.1 KiB

ಗುಡಾರ

ಪದದ ಅರ್ಥವಿವರಣೆ:

ಗುಡಾರ ಎನ್ನುವುದು ಇಸ್ರಾಯೇಲ್ಯರು ಸುಮಾರು 40 ವರ್ಷಗಳ ಕಾಲ ಅರಣ್ಯದಲ್ಲಿ ಪ್ರಯಾಣ ಮಾಡಿದ ಸಮಯದಲ್ಲಿ ಅವರು ದೇವರನ್ನು ಆರಾಧಿಸುವುದಕ್ಕೆ ಇಟ್ಟುಕೊಂಡಿರುವ ವಿಶೇಷವಾದ ರಚನೆಯಿಂದ ಕೂಡಿದ ಗುಡಾರವಾಗಿದ್ದಿತ್ತು.

  • ಈ ಒಂದು ದೊಡ್ಡ ಗುಡಾರವನ್ನು ನಿರ್ಮಿಸುವುದಕ್ಕೆ ದೇವರು ಇಸ್ರಾಯೇಲ್ಯರಿಗೆ ಎಲ್ಲಾ ರೀತಿಯ ಸೂಚನೆಗಳನ್ನು ಕೊಟ್ಟಿದ್ದರು, ಅದರಲ್ಲಿ ಎರಡು ಕೊಠಡಿಗಳಿದ್ದವು, ಇದರ ಸುತ್ತಲು ಗೋಡೆಗಳಿಂದ ಕೂಡಿದ ಪ್ರಾಂಗಣವಿದ್ದಿತ್ತು.
  • ಇಸ್ರಾಯೇಲ್ಯರು ಅರಣ್ಯದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾದಾಗ, ಯಾಜಕರು ಗುಡಾರವನ್ನು ತೆಗೆದುಕೊಂಡು ಅವರು ನಿವಾಸ ಮಾಡುವುದಕ್ಕೆ ಹೋಗುತ್ತಿರುವ ಬೇರೊಂದು ಸ್ಥಳಕ್ಕೆ ಹೊತ್ತಿಕೊಂಡು ಹೋಗಬೇಕಾಗಿದ್ದಿತ್ತು. ಅವರು ಹೋಗಿರುವ ಹೊಸ ಸ್ಥಳದ ಮಧ್ಯಭಾಗದಲ್ಲಿ ಅದನ್ನು ಪುನಃ ನಿರ್ಮಿಸಬೇಕಾಗಿರುತ್ತಿತ್ತು.
  • ಗುಡಾರ ಎನ್ನುವುದನ್ನು ಬಟ್ಟೆ, ಮೇಕೆ ಕೂದಲು, ಮತ್ತು ಪ್ರಾಣಿಗಳ ಚರ್ಮಗಳಿಂದ ಮಾಡಿದ ತೆರೆಗಳನ್ನು ಕಟ್ಟಿಗೆ ಚೌಕಟ್ಟುಗಳಿಗೆ ಇಳಿಹಾಕುವುದರ ಮೂಲಕ ನಿರ್ಮಿಸುತ್ತಿದ್ದರು. ಇದರ ಸುತ್ತಮುತ್ತಲಿರುವ ಪ್ರಾಂಗಣವನ್ನು ಹೆಚ್ಚಿನ ತೆರೆಗಳಿಂದ ಸುತ್ತುವರಿಯಲ್ಪಟ್ಟಿರುತ್ತದೆ.
  • ಗುಡಾರದಲ್ಲಿರುವ ಎರಡು ಭಾಗಗಳಲ್ಲಿ ಒಂದು ಪರಿಶುದ್ಧವಾದ ಸ್ಥಳ (ಧೂಪವನ್ನು ಹಾಕುವುದಕ್ಕೆ ಯಜ್ಞವೇದಿಯನ್ನು ಇಟ್ಟಿರುವ ಸ್ಥಳವಾಗಿರುತ್ತದೆ) ಮತ್ತು ಇನ್ನೊಂದು ಅತಿ ಪರಿಶುದ್ಧ ಸ್ಥಳವಾಗಿರುತ್ತದೆ (ಒಡಂಬಡಿಕೆಯ ಮಂಜೂಷವನ್ನು ಇಟ್ಟಿರುವ ಸ್ಥಳವಾಗಿರುತ್ತದೆ).
  • ಗುಡಾರದ ಪ್ರಾಂಗಣದಲ್ಲಿ ಪ್ರಾಣಿಗಳನ್ನು ದಹಿಸುವುದಕ್ಕಿರುವ ಯಜ್ಞವೇದಿಯನ್ನು ಮತ್ತು ಧಾರ್ಮಿಕ ಶುದ್ಧೀಕರಣಕ್ಕೆ ಒಂದು ವಿಶೇಷವಾದ ಗಂಗಾಳವನ್ನು ಇಟ್ಟಿರುತ್ತಾರೆ.
  • ಸೊಲೊಮೋನನ ಮೂಲಕ ಯೆರೂಸಲೇಮಿನಲ್ಲಿ ದೇವಾಲಯವನ್ನು ಕಟ್ಟಿದಾಗ ಇಸ್ರಾಯೇಲ್ಯರು ಗುಡಾರವನ್ನು ಉಪಯೋಗಿಸುವುದನ್ನು ನಿಲ್ಲಿಸಿದರು.

ಅನುವಾದ ಸಲಹೆಗಳು:

  • “ಗುಡಾರ” ಎನ್ನುವ ಪದಕ್ಕೆ “ನಿವಾಸವಾಗಿರುವ ಸ್ಥಳ” ಎಂದರ್ಥ. ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನದಲ್ಲಿ “ಪರಿಶುದ್ಧ ಗುಡಾರ” ಅಥವಾ “ದೇವರು ಇರುವ ಗುಡಾರ” ಅಥವಾ “ದೇವರ ಗುಡಾರ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಈ ಪದಕ್ಕೆ ಮಾಡಿರುವ ಅನುವಾದವು “ದೇವಾಲಯ” ಎನ್ನುವ ಪದಕ್ಕೆ ಬೇರೆಯಾಗಿರುವಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ಧೂಪ ವೇದಿಕೆ, ಒಡಂಬಡಿಕೆಯ ಮಂಜೂಷ, ದೇವಾಲಯ, ಭೇಟಿ ಮಾಡುವ ಗುಡಾರ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H168, H4908, H5520, H5521, H5522, H7900, G4633, G4634, G4636, G4638