kn_tw/bible/other/altarofincense.md

2.0 KiB

ಧೂಪವೇದಿ, ಧೂಪದ ವೇದಿಕೆ

ಸತ್ಯಾಂಶಗಳು:

ಧೂಪವೇದಿ ಎನ್ನುವುದು ಒಂದು ಉಪಕರಣವಾಗಿದ್ದು, ಅದರ ಮೇಲೆ ಯಾಜಕನು ದೇವರಿಗೆ ಹೋಮವಾಗಿ ಧೂಪವನ್ನು ಹಾಕುತ್ತಾನೆ. ಇದನ್ನು ಬಂಗಾರದ ವೇದಿಕೆ ಎಂದೂ ಕರೆಯುತ್ತಾರೆ.

  • ಧೂಪವೇದಿಯು ಕಟ್ಟಿಗೆಯಿಂದ ಮಾಡಿರುತ್ತಾರೆ, ಅದರ ಮೇಲ್ಭಾಗ, ಎರಡು ಬದಿಗೆ ಇರುವ ಹಲಗೆಗಳ ಮೇಲೆ ಬಂಗಾರದಿಂದ ಹೊದಿಸಿರುತ್ತಾರೆ. ಅದು ಸುಮಾರು ಅರ್ಧ ಮೀಟರ್ ಉದ್ದ, ಅರ್ಧ ಮೀಟರ್ ಅಗಲ, ಮತ್ತು ಒಂದು ಮೀಟರ್ ಎತ್ತರವಿರುತ್ತದೆ.
  • ಇದನ್ನು ಮೊಟ್ಟ ಮೊದಲು ಗುಡಾರದಲ್ಲಿಟ್ಟಿದ್ದರು. ಆದನಂತರ ಅದನ್ನು ದೇವಾಲಯದಲ್ಲಿಟ್ಟರು.
  • ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಯಾಜಕನು ಧೂಪವನ್ನು ಹಾಕುತ್ತಿದ್ದನು.
  • ಇದನ್ನು “ಧೂಪವನ್ನು ಉರಿಸುವ ವೇದಿಕೆ” ಅಥವಾ “ಬಂಗಾರದ ವೇದಿಕೆ” ಅಥವಾ “ಧೂಪವನ್ನು ಉರಿಸುವದು” ಎಂದು “ಧೂಪದ ಮೇಜು” ಎಂತಲೂ ಅನುವಾದ ಮಾಡಬಹುದು.

(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಧೂಪ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H4196, H7004, G2368, G2379