kn_tw/bible/other/tentofmeeting.md

3.8 KiB

ದರ್ಶನ ಗುಡಾರ

ಸತ್ಯಾಂಶಗಳು:

“ದರ್ಶನ ಗುಡಾರ” ಎನ್ನುವ ಮಾತು ಗುಡಾರವನ್ನು ನಿರ್ಮಿಸುವುದಕ್ಕೆ ಮುಂಚಿತವಾಗಿ ದೇವರು ಮೋಶೆಯೊಂದಿಗೆ ಭೇಟಿಯಾಗಿರುವ ತಾತ್ಕಾಲಿಕವಾದ ಗುಡಾರವನ್ನು ಸೂಚಿಸುತ್ತದೆ.

  • ದರ್ಶನ ಗುಡಾರವು ಇಸ್ರಾಯೆಲ್ಯರು ಇಳುಕೊಳ್ಳುವ ಶಿಬಿರಕ್ಕೆ ಆಚೆಯಲ್ಲಿರುತ್ತಿತ್ತು.
  • ಮೋಶೆ ದೇವರೊಂದಿಗೆ ಭೇಟಿಯಾಗುವುದಕ್ಕೆ ದರ್ಶನ ಗುಡಾರಕ್ಕೆ ಹೊರಟು ಹೋದಾಗ, ದೇವರ ಪ್ರಸನ್ನತೆಯು ಅಲ್ಲಿದೆಯೆಂದು ಸೂಚಿಸುವುದಕ್ಕೆ ಗುಡಾರದ ಪ್ರವೇಶ ದ್ವಾರದಲ್ಲಿ ಮೇಘ ಸ್ತಂಭವು ನಿಲ್ಲುತ್ತಿತ್ತು.
  • ಇಸ್ರಾಯೇಲ್ಯರು ಗುಡಾರವನ್ನು ಕಟ್ಟಿದನಂತರ, ತಾತ್ಕಾಲಿಕವಾದ ಗುಡಾರದ ಅಗತ್ಯತೆ ಇನ್ನು ಮೇಲೆ ಎಂದಿಗೂ ಇದ್ದಿಲ್ಲ ಮತ್ತು “ದರ್ಶನ ಗುಡಾರ” ಎನ್ನುವ ಮಾತು ಕೆಲವೊಂದುಬಾರಿ ಗುಡಾರವನ್ನು ಸೂಚಿಸುವುದಕ್ಕೂ ಉಪಯೋಗಿಸಿದ್ದಾರೆ.

(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲ್, ಮೋಶೆ, ಸ್ತಂಭ, ಗುಡಾರ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 13:08 ಇಸ್ರಾಯೇಲ್ಯರು ಗುಡಾರವನ್ನು ಹೇಗೆ ನಿರ್ಮಿಸಬೇಕೆನ್ನುವ ಮಾಹಿತಿಯೆಲ್ಲವನ್ನು ದೇವರು ಅವರಿಗೆ ಕೊಟ್ಟಿದ್ದರು. ಇದನ್ನು __ ದರ್ಶನ ಗುಡಾರ __ ಎಂದು ಕರೆಯುತ್ತಿದ್ದರು, ಮತ್ತು ಇದರಲ್ಲಿ ಎರಡು ಕೊಠಡಿಗಳಿರುತ್ತಿದ್ದವು, ಇವುಗಳನ್ನು ಬೇರ್ಪಡಿಸುವುದಕ್ಕೆ ಮಧ್ಯೆದಲ್ಲಿ ದೊಡ್ಡ ತೆರೆಯನ್ನು ಹಾಕಿಟ್ಟಿರುತ್ತಿದ್ದರು.
  • 13:09 ದೇವರ ಧರ್ಮಶಾಸ್ತ್ರಕ್ಕೆ ಅವಿಧೇಯತೆ ತೋರಿಸುವವನು ದೇವರಿಗೆ ಹೋಮವನ್ನಾಗಿ __ ದರ್ಶನ ಗುಡಾರ __ ಮುಂದೆಯಿರುವ ಯಜ್ಞವೇದಿಯ ಬಳಿಗೆ ಒಂದು ಪ್ರಾಣಿಯನ್ನು ತೆಗೆದುಕೊಂಡುಬರಬೇಕು.
  • 14:08 ದೇವರು ತುಂಬಾ ಕೋಪಗೊಂಡಿದ್ದನು ಮತ್ತು __ ದರ್ಶನದ ಗುಡಾರದ __ ಬಳಿಗೆ ಬರುತ್ತಿದ್ದನು.
  • 18:02 __ ದರ್ಶನ ಗುಡಾರಕ್ಕೆ __ ಬದಲಾಗಿ, ಜನರು ಈಗ ದೇವರನ್ನು ದೇವಾಲಯದ ಬಳಿ ಆತನಿಗೆ ಹೋಮಗಳನ್ನು ಅರ್ಪಿಸಿದ್ದಾರೆ ಮತ್ತು ಆತನನ್ನು ಆರಾಧಿಸಿದ್ದಾರೆ.

ಪದ ಡೇಟಾ:

  • Strong's: H168, H4150