kn_tw/bible/other/tent.md

4.0 KiB

ಗುಡಾರ, ಗುಡಾರ ಮಾಡುವವರು

ಪದದ ಅರ್ಥವಿವರಣೆ:

ಗುಡಾರ ಅಥವಾ ಡೇರೆ ಎನ್ನುವುದನ್ನು ಕಂಬಗಳ ನಿರ್ಮಾಣದ ಮೇಲೆ ಗಟ್ಟಿಯಾದ ವಸ್ತ್ರವನ್ನು ಹಾಕುವದರ ಮೂಲಕ ತಯಾರಿಸುವ ಸಾಗಿಸಲು ಸಾಧ್ಯವಾಗುವ ಆಶ್ರಯ ತಾಣ ಎಂದರ್ಥ.

  • ಡೇರೆಗಳು ಚಿಕ್ಕದಾಗಿರಬಹುದು, ಅದರಲ್ಲಿ ಜನರು ಮಲಗುವುದಕ್ಕೆ ಬೇಕಾದ ಸ್ಥಳವು ಇರುತ್ತದೆ, ಅಥವಾ ಅವು ದೊಡ್ಡವೂ ಆಗಿರಬಹುದು, ಇದರಲ್ಲಿ ಕುಟುಂಬವೆಲ್ಲಾ ಮಲಗುವುದಕ್ಕೆ, ಅಡುಗೆ ಮಾಡಿಕೊಳ್ಳುವುದಕ್ಕೆ, ಮತ್ತು ನಿವಾಸವಾಗಿರುವುದಕ್ಕೆ ಬೇಕಾದ ಸ್ಥಳವೂ ಇರುತ್ತದೆ.
  • ಅನೇಕಮಂದಿ ಜನರಿಗೋಸ್ಕರ ಡೇರೆಗಳನ್ನು ತಮ್ಮ ನಿವಾಸ ಸ್ಥಾನಗಳನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ. ಉದಾಹರಣೆಗೆ, ಅಬ್ರಾಹಾಮನ ಕುಟುಂಬವು ಕಾನಾನ್ ದೇಶದಲ್ಲಿ ವಾಸ ಮಾಡಿದ ಸಮಯವೆಲ್ಲಾ, ಅವರು ಮೇಕೆಗಳ ಕೂದಲುಗಳಿಂದ ಮಾಡಿದ ಗಟ್ಟಿಯಾದ ಬಟ್ಟೆಗಳಿಂದ ದೊಡ್ಡ ದೊಡ್ಡ ಗುಡಾರಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದರು.
  • ಇಸ್ರಾಯೇಲ್ಯರು ಕೂಡ ತಾವು ಸೀನಾಯಿ ಅರಣ್ಯದಲ್ಲಿ ನಲವತ್ತು ವರ್ಷಗಳ ಕಾಲ ಸಂಚಾರ ಮಾಡುವ ಕಾಲದಲ್ಲಿ ಅವರು ಗುಡಾರಗಳಲ್ಲಿ ವಾಸವಾಗಿದ್ದರು.
  • ದೇವದರ್ಶನ ಗುಡಾರವನ್ನು ಕಟ್ಟಿರುವುದು ಕೂಡ ಒಂದು ವಿಧವಾದ ದೊಡ್ಡ ಗುಡಾರದಂತಿತ್ತು, ಇದರ ಸುತ್ತಮುತ್ತ ವಸ್ತ್ರಗಳ ತೆರೆಗಳಿಂದ ಗೋಡೆಗಳನ್ನು ಕಟ್ಟಿದ್ದರು.
  • ಅಪೊಸ್ತಲನಾದ ಪೌಲನು ಸುವಾರ್ತೆಯನ್ನು ಸಾರುವುದಕ್ಕೆ ಅನೇಕ ಪಟ್ಟಣಗಳಿಗೆ ಪ್ರಯಾಣ ಮಾಡುತ್ತಿರುವಾಗ, ಆತನು ತನ್ನ ಪೋಷಣೆಗಾಗಿ ಡೇರೆಗಳನ್ನು ಮಾಡುವ ಕೆಲಸ ಮಾಡುತ್ತಿದ್ದನು.
  • “ಡೇರೆಗಳು” ಎನ್ನುವ ಪದವು ಕೆಲವೊಂದು ಬಾರಿ ಜನರು ವಾಸ ಮಾಡುವ ಸ್ಥಳವನ್ನು ಸೂಚಿಸುವುದಕ್ಕೆ ಸಾಧಾರಣವಾಗಿ ಅಲಂಕಾರಿಕವಾಗಿ ಉಪಯೋಗಿಸುತ್ತಿದ್ದರು. ಇದನ್ನು “ಮನೆಗಳು” ಅಥವಾ “ನಿವಾಸಗಳು” ಅಥವಾ “ಗೃಹಗಳು” ಅಥವಾ “ದೇಹಗಳು” ಎಂದೂ ಅನುವಾದ ಮಾಡಬಹುದು. (ನೋಡಿರಿ: ಲಾಕ್ಷಣಿಕ ಪ್ರಯೋಗ)

(ಈ ಪದಗಳನ್ನು ಸಹ ನೋಡಿರಿ : ಅಬ್ರಹಾಮ, ಕಾನಾನ್, ತೆರೆ, ಪೌಲ, ಸೀನಾಯಿ, ಗುಡಾರ, ಭೇಟಿ ಮಾಡುವ ಗುಡಾರ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ದತ್ತಾಂಶ:

  • Strong's: H167, H168, H2583, H3407, H6898