kn_tw/bible/other/reject.md

4.7 KiB
Raw Permalink Blame History

ತಿರಸ್ಕರಿಸು, ತಿರಸ್ಕರಿಸುವುದು, ತಿರಸ್ಕರಿಸಲಾಗಿದೆ,

ಪದದ ಅರ್ಥವಿವರಣೆ:

ಯಾರಾದರೊಬ್ಬರನ್ನು ಅಥವಾ ಯಾವುದಾದರೊಂದನ್ನು “ತಿರಸ್ಕರಿಸುವುದು” ಎಂದರೆ ಆ ವಸ್ತುವನ್ನು ಅಥವಾ ಆ ವ್ಯಕ್ತಿಯನ್ನು ಅಂಗೀಕರಿಸದೇ ನಿರಾಕರಿಸು ಎಂದರ್ಥವಾಗಿರುತ್ತದೆ.

  • “ತಿರಸ್ಕರಿಸು” ಎನ್ನುವ ಪದಕ್ಕೆ ಯಾವುದಾದರೊಂದನ್ನು “ನಂಬಲು ನಿರಾಕರಿಸು” ಎಂದು ಅರ್ಥೈಸುತ್ತದೆ..
  • ದೇವರನ್ನು ತಿರಸ್ಕರಿಸು ಎನ್ನುವುದಕ್ಕೂ ಆತನಿಗೆ ವಿಧೇಯತೆ ತೋರಿಸಲು ನಿರಾಕರಿಸು ಎಂದು ಅರ್ಥೈಸುತ್ತದೆ..
  • ಇಸ್ರಾಯೇಲ್ಯರು ಮೋಶೆಯ ನಾಯಕತ್ವವನ್ನು ತಿರಸ್ಕರಿಸಿದಾಗ, ಇದಕ್ಕೆ ಆತನ ಅಧಿಕಾರಕ್ಕೆ ವಿರುದ್ಧವಾಗಿ ಅವರೆಲ್ಲರು ತಿರುಗಿಬಿದ್ದರು ಎಂದರ್ಥ. ಅವರು ಆತನಿಗೆ ವಿಧೇಯತೆ ತೋರಿಸುವುದಕ್ಕೆ ಇಷ್ಟವಾಗುವುದಿಲ್ಲ.
  • ಇಸ್ರಾಯೇಲ್ಯರು ಸುಳ್ಳು ದೇವರುಗಳನ್ನು ಆರಾಧನೆ ಮಾಡುವಾಗ ಅವರು ದೇವರನ್ನು ತಿರಸ್ಕರಿಸಿದ್ದರೆಂದು ಅವರು ಚೆನ್ನಾಗಿ ತೋರಿಸಿದ್ದಾರೆ.
  • ಈ ಪದಕ್ಕೆ “ಪಕ್ಕಕ್ಕೆ ನೂಕು” ಎನ್ನುವ ಅಕ್ಷರಾರ್ಥವಾಗಿರುತ್ತದೆ. ಇತರ ಭಾಷೆಗಳಲ್ಲಿ ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು ನಂಬುವುದಕ್ಕೆ ತಿರಸ್ಕರಿಸುವುದು ಅಥವಾ ನಿರಾಕರಿಸುವುದು ಎನ್ನುವ ಅರ್ಥಗಳನ್ನು ಒಂದೇ ಮಾತಿನಲ್ಲಿ ಹೇಳುತ್ತಿರುತ್ತಾರೆ.

ಅನುವಾದ ಸಲಹೆಗಳು:

  • ಸಂದರ್ಭಾನುಗುಣವಾಗಿ, “ತಿರಸ್ಕರಿಸು” ಎನ್ನುವ ಪದವನ್ನು “ಅಂಗೀಕರಿಸಬೇಡ” ಅಥವಾ “ಸಹಾಯ ಮಾಡುವುದನ್ನು ನಿಲ್ಲಿಸು” ಅಥವಾ “ವಿಧೇಯತೆ ತೋರಿಸಲು ನಿರಾಕರಿಸು” ಅಥವಾ “ವಿಧೇಯತೆ ತೋರಿಸುವುದನ್ನು ನಿಲ್ಲಿಸು” ಎಂದೂ ಅನುವಾದ ಮಾಡಬಹುದು.
  • “ಕಟ್ಟುವವರು ನಿರಾಕರಿಸಿದ ಕಲ್ಲು” ಎನ್ನುವ ಮಾತಿನಲ್ಲಿರುವಂತೆ, “ನಿರಾಕರಿಸಿದ” ಎನ್ನುವ ಮಾತನ್ನು “ಉಪಯೋಗಿಸುವುದಕ್ಕೆ ನಿರಾಕರಿಸಲ್ಪಟ್ಟಿದೆ” ಅಥವಾ “ಅಂಗೀಕರಿಸಿರುವುದಿಲ್ಲ” ಅಥವಾ “ಹೊರಕ್ಕೆ ಬಿಸಾಡು” ಅಥವಾ “ಬೆಲೆರಹಿತವೆಂದು ಪಕ್ಕಕ್ಕೆ ಹಾಕು” ಎಂದೂ ಅನುವಾದ ಮಾಡಬಹುದು.
  • ದೇವರ ಆಜ್ಞೆಗಳನ್ನು ತಿರಸ್ಕಾರ ಮಾಡಿದ ಜನರ ಸಂದರ್ಭದಲ್ಲಿ, ತಿರಸ್ಕರಿಸಲ್ಪಟ್ಟಿರುವ ಎನ್ನುವ ಮಾತನ್ನು ಆತನ ಆಜ್ಞೆಗಳಿಗೆ “ವಿಧೇಯತೆ ತೋರಿಸುವುದಕ್ಕೆ ನಿರಾಕರಿಸುವುದು” ಅಥವಾ ದೇವರ ಆಜ್ಞೆಗಳನ್ನು “ಹಠವಾಗಿ ಅಂಗೀಕಾರ ಮಾಡದಿರುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆಜ್ಞೆ, ಅವಿಧೇಯತೆ, ವಿಧೇಯತೆ, ಹಠಮಾರಿ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H947, H959, H2186, H2310, H3988, H5006, H5034, H5186, H5203, H5307, H5541, H5800, G114, G483, G550, G579, G580, G593, G683, G720, G1609, G3868