kn_tw/bible/other/stiffnecked.md

4.0 KiB

ಗಟ್ಟಿಯಾದ ಕುತ್ತಿಗೆ, ಮೊಂಡು, ಮೊಂಡುತನದಿಂದ, ಮೊಂಡುತನ

ಪದದ ಅರ್ಥವಿವರಣೆ:

“ಗಟ್ಟಿಯಾದ ಕುತ್ತಿಗೆ” ಎನ್ನುವ ಮಾತು ಪಶ್ಚಾತ್ತಾಪವನ್ನು ತಿರಸ್ಕರಿಸುತ್ತಾ, ದೇವರಿಗೆ ಅವಿಧೇಯತೆಯನ್ನು ತೋರಿಸುವ ಜನರನ್ನು ಸೂಚಿಸುವುದಕ್ಕೆ ಸತ್ಯವೇದದಲ್ಲಿ ಉಪಯೋಗಿಸಲ್ಪಟ್ಟ ಒಂದು ನಾಣ್ಣುಡಿಯಾಗಿರುತ್ತದೆ. ಅಂತಹ ಜನರು ತುಂಬಾ ಅಹಂಕಾರಿಗಳಾಗಿರುತ್ತಾರೆ ಮತ್ತು ಅವರು ದೇವರ ಅಧಿಕಾರಕ್ಕೆ ತಮ್ಮನ್ನು ತಾವು ಒಳಪಡಿಸಿಕೊಳ್ಳುವುದಿಲ್ಲ.

  • ಹಾಗೆಯೇ, “ಮೊಂಡು” ಎನ್ನುವ ಪದವು ಒಬ್ಬ ವ್ಯಕ್ತಿ ತನ್ನ ನಡತೆಯನ್ನು ಮಾರ್ಪಾಟು ಮಾಡಿಕೊಳ್ಳಬೇಕಾದ ಅವಶ್ಯಕತೆ ಇದ್ದರೂ, ತನ್ನ ಮನಸ್ಸನ್ನು ಅಥವಾ ಕ್ರಿಯೆಗಳನ್ನು ಮಾರ್ಪಾಟು ಮಾಡಿಕೊಳ್ಳುವುದಕ್ಕೆ ತಿರಸ್ಕಾರ ಮಾಡುವ ವ್ಯಕ್ತಿಯನ್ನು ವಿವರಿಸುತ್ತದೆ. ಮೊಂಡುತನದ ಜನರು ಇತರ ವ್ಯಕ್ತಿಗಳು ಹೇಳುವ ಒಳ್ಳೇಯ ಸಲಹೆಗಳನ್ನು ಅಥವಾ ಎಚ್ಚರಿಕೆಗಳನ್ನು ಕೇಳುವುದಕ್ಕೆ ಇಷ್ಟಪಡುವುದಿಲ್ಲ.
  • ಇಸ್ರಾಯೇಲ್ಯರು “ಗಟ್ಟಿಯಾದ ಕುತ್ತಿಗೆ” ಇರುವವರು ಎಂದು ಹಳೇ ಒಡಂಬಕೆಯಲ್ಲಿ ಹೇಳಲ್ಪಟ್ಟಿರತ್ತದೆ, ಯಾಕಂದರೆ ಇವರು ಪಶ್ಚಾತ್ತಾಪ ಹೊಂದಿ, ಯೆಹೋವನ ಕಡೆಗೆ ತಿರುಗಿಕೊಳ್ಳಿರಿ ಎಂದು ಬೇಡುವ ದೇವರ ಪ್ರವಾದಿಗಳಿಂದ ಬರುವ ಅನೇಕ ಸಂದೇಶಗಳನ್ನು ಕೇಳುವುದಕ್ಕೆ ಅವರು ಇಷ್ಟಪಡುವುದಿಲ್ಲ.
  • ಕುತ್ತಿಗೆ “ಬಿರುಸಾಗಿದ್ದರೆ”, ಅದು ಸುಲಭವಾಗಿ ಬಾಗುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಮಾರ್ಗಗಳನ್ನು ಮಾರ್ಪಡಿಸಿಕೊಳ್ಳುವುದಕ್ಕೆ ತಿರಸ್ಕರಿಸುವ ಅಥವಾ “ಬಾಗದಿರುವ” ವ್ಯಕ್ತಿಯನ್ನು ಸೂಚಿಸುವುದಕ್ಕೆ ಅನುವಾದ ಭಾಷೆಯಲ್ಲಿ ಬೇರೊಂದು ನಾಣ್ಣುಡಿಯನ್ನು ಹೊಂದಿರಬಹುದು.
  • ಈ ಪದವನ್ನು ಅಥವಾ ಈ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಗರ್ವದಿಂದ ಮೊಂಡುತನವಿರುವ” ಅಥವಾ “ಅಹಂಕಾರಿ ಮತ್ತು ಬಗ್ಗದ” ಅಥವಾ “ಮಾರ್ಪಡುವುದಕ್ಕೆ ತಿರಸ್ಕರಿಸುವ” ಎನ್ನುವ ಮಾತುಗಳನ್ನು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಅಹಂಕಾರಿ, ಗರ್ವ, ಪಶ್ಚಾತ್ತಾಪ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H47, H3513, H5637, H6203, H6484, H7185, H7186, H7190, H8307, G483, G4644, G4645