kn_tw/bible/other/proud.md

6.6 KiB

ಹೆಮ್ಮೆ, ಹೆಮ್ಮೆಯ, ಗರ್ವ, ಗರ್ವದ

ಪದದ ಅರ್ಥವಿವರಣೆ:

“ಹೆಮ್ಮೆ” ಮತ್ತು “ಗರ್ವ” ಎನ್ನುವ ಪದಗಳು ಒಬ್ಬ ವ್ಯಕ್ತಿ ತನ್ನ ಕುರಿತಾಗಿ ಅತೀ ಉನ್ನತವಾಗಿ ಆಲೋಚನೆ ಮಾಡಿಕೊಳ್ಳುವುದನ್ನು, ವಿಶೇಷವಾಗಿ, ಇತರ ಜನರಿಗಿಂತ ತಾನು ಉತ್ತಮನೆಂದು ಆಲೋಚನೆ ಮಾಡಿಕೊಳ್ಳುವುದನ್ನು ಸೂಚಿಸುತ್ತದೆ.

  • ಹೆಮ್ಮೆಯುಳ್ಳ ವ್ಯಕ್ತಿ ಅನೇಕಬಾರಿ ತನ್ನ ತಪ್ಪುಗಳನ್ನು ಗುರುತಿಸುವುದಿಲ್ಲ. ಇವನು ವಿನಯವುಳ್ಳವನಲ್ಲ.
  • ಗರ್ವವು ಇತರ ಮಾರ್ಗಗಳಲ್ಲಿ ದೇವರಿಗೆ ಅವಿಧೇಯತೆಯನ್ನು ತೋರಿಸುವುದಕ್ಕೆ ನಡೆಸುತ್ತದೆ.
  • “ಹೆಮ್ಮೆ” ಮತ್ತು “ಗರ್ವ” ಎನ್ನುವ ಪದಗಳು ಸಕಾರಾತ್ಮಕ ಭಾವನೆಯಲ್ಲಿಯೂ ಉಪಯೋಗಿಸಲ್ಪಡುತ್ತವೆ, ಉದಾಹರಣೆಗೆ, ಯಾರಾದರೊಬ್ಬರು ಏನಾದರೊಂದು ಸಾಧನೆ ಮಾಡಿದಾಗ ಅವರ ವಿಷಯದಲ್ಲಿ “ಹೆಮ್ಮೆ” ಪಡುತ್ತೇವೆ ಮತ್ತು ನಿಮ್ಮ ಮಕ್ಕಳನ್ನು ನೋಡಿ “ಗರ್ವ” ಪಡುತ್ತೇವೆ. “ನಿನ್ನ ಕೆಲಸದಲ್ಲಿ ಹೆಮ್ಮೆ ಪಡು” ಎನ್ನುವ ಮಾತಿಗೆ ನೀನು ನಿನ್ನ ಕೆಲಸವನ್ನು ಮಾಡುತ್ತಿರುವಾಗ ಸಂತೋಷವನ್ನು ಹೊಂದಿಕೊಳ್ಳುವುದು ಎಂದರ್ಥ.
  • ಒಬ್ಬ ವ್ಯಕ್ತಿ ತಾನು ಸಾಧನೆ ಮಾಡಿರುವುದರ ವಿಷಯದಲ್ಲಿ ಅದರ ಕುರಿತಾಗಿ ಗರ್ವದಿಂದರದಂತೆ ಹೆಮ್ಮೆ ಪಡಬಹುದು. “ಗರ್ವ” ಎನ್ನುವ ಈ ಎರಡು ವಿಭಿನ್ನವಾದ ಅರ್ಥಗಳಿಗೆ ಕೆಲವೊಂದು ಭಾಷೆಗಳಲ್ಲಿ ವಿಭಿನ್ನವಾದ ಪದಗಳನ್ನು ಒಳಗೊಂಡಿರುತ್ತವೆ.
  • “ಗರ್ವಭರಿತ” ಎನ್ನುವ ಪದವು ಯಾವಾಗಲೂ ನಕಾರಾತ್ಮಕವಾಗಿರುತ್ತದೆ, ಈ ಪದಕ್ಕೆ “ಅಹಂಕಾರಿ” ಅಥವಾ “ಸ್ವಯಂ ಚಿಂತನೆ” ಅಥವಾ “ಸ್ವಯಂ ಪ್ರಾಮುಖ್ಯತೆ” ಎನ್ನುವ ಅರ್ಥಗಳಿಂದ ಕೂಡಿರುತ್ತದೆ.

ಅನುವಾದ ಸಲಹೆಗಳು:

  • “ಗರ್ವ” ಎನ್ನುವ ಪದವನ್ನು “ಅಹಂಕಾರ” ಅಥವಾ “ಜಂಭ” ಅಥವಾ “ಸ್ವಯಂ-ಪ್ರಾಮುಖ್ಯತೆ” ಎಂದೂ ಅನುವಾದ ಮಾಡಬಹುದು.
  • ಇತರ ಸಂದರ್ಭಗಳಲ್ಲಿ “ಗರ್ವ” ಎನ್ನುವ ಪದವನ್ನು “ಸಂತೋಷ” ಅಥವಾ “ತೃಪ್ತಿ” ಅಥವಾ “ಹರ್ಷ” ಎಂದೂ ಅನುವಾದ ಮಾಡಬಹುದು.
  • “ಗರ್ವದಿಂದ ಇರುವುದು” ಎನ್ನುವ ಮಾತನ್ನು “ಆರೊಂದಿಗೆ ಸಂತೋಷದಿಂದ ಇರುವುದು” ಅಥವಾ “ಅದರೊಂದಿಗೆ ತೃಪ್ತಿಪಡುವುದು” ಅಥವಾ “(ಸಾಧನೆಗಳನ್ನು ಮಾಡಿದವುಗಳ) ಕುರಿತಾಗಿ ಸಂತೋಷಪಡುವುದು” ಎಂದೂ ಅನುವಾದ ಮಾಡಬಹುದು.
  • “ನಿನ್ನ ಕೆಲಸಲ್ಲಿ ಗರ್ವಪಡು” ಎನ್ನುವ ಮಾತನ್ನು “ಚೆನ್ನಾಗಿ ಮಾಡುತ್ತಿರುವ ನಿನ್ನ ಕೆಲಸದಲ್ಲಿ ತೃಪ್ತಿಯನ್ನು ಪಡೆದುಕೊಳ್ಳು” ಎಂದೂ ಅನುವಾದ ಮಾಡಬಹುದು.
  • “ಯೆಹೋವನಲ್ಲಿ ಹೆಮ್ಮೆಪಡು” ಎನ್ನುವ ಮಾತನ್ನು “ಯೆಹೋವನು ಮಾಡಿದ ಅಧ್ಬುತವಾದ ಕಾರ್ಯಗಳ ಕುರಿತಾಗಿ ಸಂತೋಷಪಡುವುದು” ಅಥವಾ “ಯೆಹೋವನು ಎಷ್ಟು ಆಶ್ಚರ್ಯಕರನೆನ್ನುವುದರ ಕುರಿತಾಗಿ ಆನಂದಪಡುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಹಂಕಾರಿ, ತಗ್ಗಿಸಿಕೋ, ಸಂತೋಷ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 04:02 ಅವರು ತುಂಬಾ ___ ಅಹಂಕಾರಿಗಳಾಗಿದ್ದರು ___ , ಮತ್ತು ಅವರು ದೇವರು ಹೇಳಿದ ಮಾತುಗಳ ಕುರಿತಾಗಿ ಅವರು ಎಚ್ಚರಿಕೆ ತೆಗೆದುಕೊಳ್ಳಲಿಲ್ಲ.
  • 34:10 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ತೆರಿಗೆದಾರನ ಪ್ರಾರ್ಥನೆಯನ್ನು ದೇವರು ಕೇಳಿದನು ಮತ್ತು ನೀತಿವಂತರಾಗಿರಬೇಕೆಂದು ಪ್ರಕಟಿಸಿದನು. ಆದರೆ ಆತನು ಧರ್ಮದ ನಾಯಕ ಪ್ರಾರ್ಥನೆಯನ್ನು ಇಷ್ಟಪಡಲಿಲ್ಲ. ದೇವರು ___ ಅಹಂಕಾರಿಗಳನ್ನು ___ ತಿರಸ್ಕರಿಸುವನು, ಮತ್ತು ಆತನು ತಗ್ಗಿಸಿಕೊಂಡಿರುವವರನ್ನು ಮೇಲಕ್ಕೆ ಎತ್ತುವನು.”

ಪದ ಡೇಟಾ:

  • Strong's: H1341, H1343, H1344, H1346, H1347, H1348, H1349, H1361, H1362, H1363, H1364, H1396, H1466, H1467, H1984, H2086, H2087, H2102, H2103, H2121, H3093, H3238, H3513, H4062, H1431, H4791, H5965, H7293, H7295, H7312, H7342, H7311, H7407, H7830, H8597, G212, G1391, G1392, G2744, G2745, G2746, G3173, G5187, G5229, G5243, G5244, G5308, G5309, G5426, G5450