kn_tw/bible/other/joy.md

8.0 KiB
Raw Permalink Blame History

ಆನಂದ, ಆನಂದಭರಿತ, ಆನಂದದಾಯಕತೆ, ಆನಂದಿಸು

ಪದದ ಅರ್ಥವಿವರಣೆ:

ಆನಂದ

"ಆನಂದ" ಎನ್ನುವುದು ದೇವರಿಂದ ಬರುವ ಆಳವಾದ ತೃಪ್ತಿ ಅಥವಾ ಸಂತೋಷದ ಭಾವನೆಯಾಗಿರುತ್ತದೆ. “ಆನಂದಭರಿತ” ಎನ್ನುವ ಅನುಬಂಧ ಪದವು ಒಬ್ಬ ವ್ಯಕ್ತಿ ತುಂಬಾ ಸಂತೋಷವಾಗಿರುವುದನ್ನು ಮತ್ತು ಆಳವಾದ ಸಂತೋಷದಿಂದ ತುಂಬಿ ತುಳುಕುತ್ತಿರುವುದನ್ನು ವಿವರಿಸುತ್ತದೆ.

  • ಒಬ್ಬ ವ್ಯಕ್ತಿ ಒಳ್ಳೇಯ ಅನುಭವಗಳನ್ನು ಹೊಂದುತ್ತಿರುವಾಗ ಪಡೆಯುವ ಆಳವಾದ ಭಾವನೆಯಲ್ಲಿ ಆನಂದವನ್ನು ಅನುಭವಿಸುತ್ತಾನೆ.
  • ದೇವರೊಬ್ಬರೇ ತನ್ನ ಜನರಿಗೆ ನಿಜವಾದ ಆನಂದವನ್ನು ಕೊಡುವವರು.
  • ಆನಂದವನ್ನು ಹೊಂದಿಕೊಂಡಿರುವುದು ಸಂತೋಷಕರವಾದ ಪರಿಸ್ಥಿತಿಗಳ ಮೇಲೆ ಆಧಾರಪಟ್ಟಿರುವುದಿಲ್ಲ. ಜನರು ತಮ್ಮ ಜೀವನಗಳಲ್ಲಿ ಅನೇಕ ಭಯಂಕರವಾದ ಸಂಕಷ್ಟಗಳಲ್ಲಿ ಹಾದು ಹೋಗುತ್ತಿರುವಾಗಲೂ ದೇವರು ಅವರಿಗೆ ಆನಂದವನ್ನು ಕೊಡುತ್ತಾನೆ.
  • ಕೆಲವೊಂದುಬಾರಿ ಸ್ಥಳಗಳನ್ನು ಆನಂದಭರಿತ ಎಂದು ವಿವರಿಸುತ್ತಾ ಬರೆದಿರುತ್ತಾರೆ, ಮನೆಗಳಿಗೆ ಅಥವಾ ಪಟ್ಟಣಗಳಿಗೆ ಈ ರೀತಿ ಬರೆದಿರುತ್ತಾರೆ. ಈ ಮಾತುಗಳಿಗೆ ಅರ್ಥವೇನಂದರೆ ಆ ಸ್ಥಳಗಳಲ್ಲಿ ನಿವಾಸವಾಗುತ್ತಿರುವ ಜನರು ತುಂಬಾ ಆನಂದಭರಿತರಾಗಿದ್ದಾರೆಂದು ಅದರ ಅರ್ಥ.

ಆನಂದದಾಯಕ

“ಆನಂದದಾಯಕ” ಎನ್ನುವ ಪದಕ್ಕೆ ಸಂತೋಷ ಮತ್ತು ಆನಂದಗಳಿಂದ ತುಂಬಿರುವುದು ಎಂದರ್ಥ.

  • ಈ ಮಾತು ಅನೇಕಬಾರಿ ದೇವರು ಮಾಡಿದ ಒಳ್ಳೇಯ ಕಾರ್ಯಗಳ ಕುರಿತಾಗಿ ಅತೀ ಹೆಚ್ಚಾಗಿ ಸಂತೋಷಪಡುವದನ್ನು ಸೂಚಿಸುತ್ತದೆ.
  • ಇದನ್ನು “ತುಂಬಾ ಹೆಚ್ಚಿನ ಸಂತೋಷದಿಂದಿರು” ಅಥವಾ “ತುಂಬಾ ಹೆಚ್ಚಿನ ಹರ್ಷದಾಯಕನಾಗಿರು” ಅಥವಾ “ತುಂಬಾ ಹೆಚ್ಚಿನ ಆನಂದ ಹೊಂದು” ಎಂದೂ ಅನುವಾದ ಮಾಡಬಹುದು.
  • “ನನ್ನ ಪ್ರಾಣವು ನನ್ನ ರಕ್ಷಕನಾದ ದೇವರಲ್ಲಿ ಆನಂದ ಹೊಂದುತ್ತಿದೆ” ಎಂದು ಮರಿಯಳು ಹೇಳಿದಾಗ, ಅದಕೆಕ್ “ರಕ್ಷಕನಾಗಿರುವ ನನ್ನ ದೇವರು ನನ್ನ ಅತೀ ಹೆಚ್ಚಾದ ಸಂತೋಷದಿಂದ ತುಂಬಿಸಿದರು” ಅಥವಾ “ರಕ್ಷಕನಾದ ದೇವರು ನನಗೆ ಮಾಡಿದ ಕಾರ್ಯಗಳಿಂದ ನಾನು ತುಂಬಾ ಆನಂದವಾಗಿದ್ದೇನೆ” ಎಂದು ಆಕೆ ಹೇಳುತ್ತಿದ್ದಾಳೆ.

ಅನುವಾದ ಸಲಹೆಗಳು:

  • “ಆನಂದ” ಎನ್ನುವ ಪದವನ್ನು “ಆನಂದಿಸುವುದು” ಅಥವಾ “ಸಂತೋಷ” ಅಥವಾ “ಮಹಾ ಸಂತೋಷಕರ” ಎಂದೂ ಅನುವಾದ ಮಾಡಬಹುದು.
  • “ಆನಂದಭರಿತವಾಗಿರು” ಎನ್ನುವ ಮಾತನ್ನು “ಆನಂದಗೊಳಿಸು” ಅಥವಾ “ಅತೀ ಹೆಚ್ಚಾಗಿ ಸಂತೋಷಪಡು” ಎಂದೂ ಅನುವಾದ ಮಾಡಬಹುದು, ಅಥವಾ ಇದನ್ನು “ದೇವರ ಒಳ್ಳೇಯತನದಲ್ಲಿ ತುಂಬಾ ಸಂತೋಷವಾಗಿರು” ಎಂದೂ ಅನುವಾದ ಮಾಡಬಹುದು.
  • ಆನಂದಭರಿತನಾಗಿರುವ ಒಬ್ಬ ವ್ಯಕ್ತಿಯನ್ನು “ಹೆಚ್ಚಿನ ಸಂತೋಷ” ಅಥವಾ “ಹೆಚ್ಚಿನ ಸಂತೋಷದಿಂದ ಇರುವುದು” ಅಥವಾ “ಆಳವಾದ ಸಂತೋಷ” ಎಂದೂ ವಿವರಿಸಬಹುದು.
  • “ಆನಂದಭರಿತವಾದ ಕೂಗನ್ನು ಕೇಳಿಸು” ಎನ್ನುವ ಮಾತನ್ನು “ನೀನು ಅತೀ ಹೆಚ್ಚಾದ ಆನಂದದಿಂದ ಇದ್ದೀಯೆನ್ನುವ ವಿಧಾನದಲ್ಲಿ ಜೋರಾಗಿ ಕೂಗು” ಎಂದೂ ಅನುವಾದ ಮಾಡಬಹುದು.
  • “ಆನಂದಭರಿತವಾದ ಪಟ್ಟಣ” ಅಥವಾ “ಆನಂದಭರಿತವಾದ ಮನೆ” ಎನ್ನುವ ಪದವನ್ನು “ಆನಂದಭರಿತರಾದ ಜನರು ನಿವಾಸ ಮಾಡುವ ಪಟ್ಟಣ” ಅಥವಾ “ಆನಂದಭರಿತರಾದ ಜನರೆಲ್ಲರು ಇರುವ ಮನೆ” ಅಥವಾ “ಜನರು

(See: metonymy)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದ ಕಥೆಗಳಿಂದ ಉದಾಹರಣೆಗಳು:

  • 33:07 “ಕಲ್ಲಿನ ನೆಲವು ದೇವರ ಮಾತನ್ನು ಕೇಳುವ ಮತ್ತು ಅದನ್ನು ಸಂತೋಷದಿಂದ ಸ್ವೀಕರಿಸುವ ವ್ಯಕ್ತಿ.”
  • __34:04 __ “ದೇವರ ರಾಜ್ಯವು ಯಾರೋ ಒಬ್ಬರು ಹೊಲದಲ್ಲಿ ಅಡಗಿಸಿಟ್ಟಿರುವ ಗುಪ್ತ ನಿಧಿಯಂತಿದೆ .. ಇನ್ನೊಬ್ಬ ವ್ಯಕ್ತಿ ನಿಧಿಯನ್ನು ಕಂಡುಕೊಂಡನು ಅದನ್ನು ಮತ್ತೆ ಸಮಾಧಿ ಮಾಡಲಾಯಿತು. ಅವನು ಸಂತೋಷದಿಂದ ತುಂಬಿದ್ದನು, ಅವನು ಹೋಗಿ ತನ್ನಲ್ಲಿದ್ದ ಎಲ್ಲವನ್ನೂ ಮಾರಿ ಆ ಹಣವನ್ನು ಆ ಜಾಗವನ್ನು ಖರೀದಿಸಲು ಬಳಸಿದನು. ”
  • 41:07 ಮಹಿಳೆಯರು ಭಯದಿಂದ ತುಂಬಿದ್ದರು ಮತ್ತು ದೊಡ್ಡ __ ಸತೋಷ__. ಅವರು ಶಿಷ್ಯರಿಗೆ ಸುವಾರ್ತೆ ಹೇಳಲು ಓಡಿಹೋದರು.

ಪದ ಡೇಟಾ:

  • Strongs: H1523, H1524, H1525, H2302, H2304, H2305, H2654, H2898, H4885, H5937, H5947, H5965, H5970, H6342, H6670, H7440, H7442, H7444, H7445, H7797, H7832, H8055, H8056, H8057, H8342, H8643, G20, G21, G2165, G2167, G2744, G4640, G4796, G4913, G5463, G5479