32 lines
4.7 KiB
Markdown
32 lines
4.7 KiB
Markdown
# ತಿರಸ್ಕರಿಸು, ತಿರಸ್ಕರಿಸುವುದು, ತಿರಸ್ಕರಿಸಲಾಗಿದೆ,
|
||
|
||
## ಪದದ ಅರ್ಥವಿವರಣೆ:
|
||
|
||
ಯಾರಾದರೊಬ್ಬರನ್ನು ಅಥವಾ ಯಾವುದಾದರೊಂದನ್ನು “ತಿರಸ್ಕರಿಸುವುದು” ಎಂದರೆ ಆ ವಸ್ತುವನ್ನು ಅಥವಾ ಆ ವ್ಯಕ್ತಿಯನ್ನು ಅಂಗೀಕರಿಸದೇ ನಿರಾಕರಿಸು ಎಂದರ್ಥವಾಗಿರುತ್ತದೆ.
|
||
|
||
* “ತಿರಸ್ಕರಿಸು” ಎನ್ನುವ ಪದಕ್ಕೆ ಯಾವುದಾದರೊಂದನ್ನು “ನಂಬಲು ನಿರಾಕರಿಸು” ಎಂದು ಅರ್ಥೈಸುತ್ತದೆ..
|
||
* ದೇವರನ್ನು ತಿರಸ್ಕರಿಸು ಎನ್ನುವುದಕ್ಕೂ ಆತನಿಗೆ ವಿಧೇಯತೆ ತೋರಿಸಲು ನಿರಾಕರಿಸು ಎಂದು ಅರ್ಥೈಸುತ್ತದೆ..
|
||
* ಇಸ್ರಾಯೇಲ್ಯರು ಮೋಶೆಯ ನಾಯಕತ್ವವನ್ನು ತಿರಸ್ಕರಿಸಿದಾಗ, ಇದಕ್ಕೆ ಆತನ ಅಧಿಕಾರಕ್ಕೆ ವಿರುದ್ಧವಾಗಿ ಅವರೆಲ್ಲರು ತಿರುಗಿಬಿದ್ದರು ಎಂದರ್ಥ. ಅವರು ಆತನಿಗೆ ವಿಧೇಯತೆ ತೋರಿಸುವುದಕ್ಕೆ ಇಷ್ಟವಾಗುವುದಿಲ್ಲ.
|
||
* ಇಸ್ರಾಯೇಲ್ಯರು ಸುಳ್ಳು ದೇವರುಗಳನ್ನು ಆರಾಧನೆ ಮಾಡುವಾಗ ಅವರು ದೇವರನ್ನು ತಿರಸ್ಕರಿಸಿದ್ದರೆಂದು ಅವರು ಚೆನ್ನಾಗಿ ತೋರಿಸಿದ್ದಾರೆ.
|
||
* ಈ ಪದಕ್ಕೆ “ಪಕ್ಕಕ್ಕೆ ನೂಕು” ಎನ್ನುವ ಅಕ್ಷರಾರ್ಥವಾಗಿರುತ್ತದೆ. ಇತರ ಭಾಷೆಗಳಲ್ಲಿ ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು ನಂಬುವುದಕ್ಕೆ ತಿರಸ್ಕರಿಸುವುದು ಅಥವಾ ನಿರಾಕರಿಸುವುದು ಎನ್ನುವ ಅರ್ಥಗಳನ್ನು ಒಂದೇ ಮಾತಿನಲ್ಲಿ ಹೇಳುತ್ತಿರುತ್ತಾರೆ.
|
||
|
||
## ಅನುವಾದ ಸಲಹೆಗಳು:
|
||
|
||
* ಸಂದರ್ಭಾನುಗುಣವಾಗಿ, “ತಿರಸ್ಕರಿಸು” ಎನ್ನುವ ಪದವನ್ನು “ಅಂಗೀಕರಿಸಬೇಡ” ಅಥವಾ “ಸಹಾಯ ಮಾಡುವುದನ್ನು ನಿಲ್ಲಿಸು” ಅಥವಾ “ವಿಧೇಯತೆ ತೋರಿಸಲು ನಿರಾಕರಿಸು” ಅಥವಾ “ವಿಧೇಯತೆ ತೋರಿಸುವುದನ್ನು ನಿಲ್ಲಿಸು” ಎಂದೂ ಅನುವಾದ ಮಾಡಬಹುದು.
|
||
* “ಕಟ್ಟುವವರು ನಿರಾಕರಿಸಿದ ಕಲ್ಲು” ಎನ್ನುವ ಮಾತಿನಲ್ಲಿರುವಂತೆ, “ನಿರಾಕರಿಸಿದ” ಎನ್ನುವ ಮಾತನ್ನು “ಉಪಯೋಗಿಸುವುದಕ್ಕೆ ನಿರಾಕರಿಸಲ್ಪಟ್ಟಿದೆ” ಅಥವಾ “ಅಂಗೀಕರಿಸಿರುವುದಿಲ್ಲ” ಅಥವಾ “ಹೊರಕ್ಕೆ ಬಿಸಾಡು” ಅಥವಾ “ಬೆಲೆರಹಿತವೆಂದು ಪಕ್ಕಕ್ಕೆ ಹಾಕು” ಎಂದೂ ಅನುವಾದ ಮಾಡಬಹುದು.
|
||
* ದೇವರ ಆಜ್ಞೆಗಳನ್ನು ತಿರಸ್ಕಾರ ಮಾಡಿದ ಜನರ ಸಂದರ್ಭದಲ್ಲಿ, ತಿರಸ್ಕರಿಸಲ್ಪಟ್ಟಿರುವ ಎನ್ನುವ ಮಾತನ್ನು ಆತನ ಆಜ್ಞೆಗಳಿಗೆ “ವಿಧೇಯತೆ ತೋರಿಸುವುದಕ್ಕೆ ನಿರಾಕರಿಸುವುದು” ಅಥವಾ ದೇವರ ಆಜ್ಞೆಗಳನ್ನು “ಹಠವಾಗಿ ಅಂಗೀಕಾರ ಮಾಡದಿರುವುದು” ಎಂದೂ ಅನುವಾದ ಮಾಡಬಹುದು.
|
||
|
||
(ಈ ಪದಗಳನ್ನು ಸಹ ನೋಡಿರಿ : [ಆಜ್ಞೆ](../kt/command.md), [ಅವಿಧೇಯತೆ](../other/disobey.md), [ವಿಧೇಯತೆ](../other/obey.md), [ಹಠಮಾರಿ](../other/stiffnecked.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [ಗಲಾತ್ಯ.04:12-14](rc://*/tn/help/gal/04/12)
|
||
* [ಹೋಶೆಯ.04:6-7](rc://*/tn/help/hos/04/06)
|
||
* [ಯೆಶಯಾ.41:೦9](rc://*/tn/help/isa/41/09)
|
||
* [ಯೋಹಾನ.12:48-50](rc://*/tn/help/jhn/12/48)
|
||
* [ಮಾರ್ಕ.07:09](rc://*/tn/help/mrk/07/09)
|
||
|
||
## ಪದ ಡೇಟಾ:
|
||
|
||
* Strong's: H947, H959, H2186, H2310, H3988, H5006, H5034, H5186, H5203, H5307, H5541, H5800, G114, G483, G550, G579, G580, G593, G683, G720, G1609, G3868
|