kn_tw/bible/other/prince.md

5.0 KiB

ರಾಜಕುಮಾರ, ರಾಜಕುಮಾರರು, ರಾಜಕುಮಾರಿ, ರಾಜಕುಮಾರಿಗಳು

ಪದದ ಅರ್ಥವಿವರಣೆ:

“ರಾಜಕುಮಾರ” ಎಂದರೆ ಅರಸನ ಮಗನಾಗಿರುತ್ತಾನೆ. “ರಾಜಕುಮಾರಿ” ಎಂದರೆ ಅರಸನ ಮಗಳಾಗಿರುತ್ತಾಳೆ.

  • “ರಾಜಕುಮಾರ” ಎನ್ನುವ ಪದವು ಅನೇಕಬಾರಿ ನಾಯಕ, ಪಾಲಕ ಅಥವಾ ಇತರ ಶಕ್ತಿಯುತವಾದ ವ್ಯಕ್ತಿಯನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
  • ಅಬ್ರಹಾಮನ ಸಂಪತ್ತು ಮತ್ತು ಪ್ರಸಿದ್ಧಿಯ ಕಾರಣದಿಂದ ಆತನು ಹಿತ್ತಿಯರ ಮಧ್ಯದಲ್ಲಿ ನಿವಾಸವಾಗಿದ್ದಾಗ “ರಾಜಕುಮಾರ” ಎಂಬುದಾಗಿ ಕರೆಯಲ್ಪಡುತ್ತಿದ್ದನು.
  • ದಾನಿಯೇಲ ಗ್ರಂಥದಲ್ಲಿ “ರಾಜಕುಮಾರ” ಎನ್ನುವ ಪದವು “ಪಾರಸಿಯ ರಾಜಕುಮಾರ” ಮತ್ತು “ಗ್ರೀಸ್ ರಾಜಕುಮಾರ” ಎನ್ನುವ ಮಾತುಗಳಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ, ಆ ಸಂದರ್ಭಗಳಲ್ಲಿ ಬಹುಶಃ ಆ ಪ್ರಾಂತ್ಯಗಳ ಮೇಲೆ ಅಧಿಕಾರವನ್ನು ಹೊಂದಿದ ಶಕ್ತಿಯುತವಾದ ದುಷ್ಟ ಆತ್ಮಗಳನ್ನು ಸೂಚಿಸುತ್ತದೆ.
  • ಪ್ರಧಾನ ದೂತನಾಗಿರುವ ಮಿಕಾಯೇಲನನ್ನು ಕೂಡ ದಾನಿಯೇಲ ಗ್ರಂಥದಲ್ಲಿ “ರಾಜಕುಮಾರ” ಎಂಬುದಾಗಿ ಸೂಚಿಸಲ್ಪಟ್ಟಿದೆ.
  • ಸತ್ಯವೇದದಲ್ಲಿ ಕೆಲವೊಂದುಸಲ ಸೈತಾನನನ್ನು “ಈ ಲೋಕದ ರಾಜಕುಮಾರ” ಎಂಬುದಾಗಿ ಸೂಚಿಸಲ್ಪಟ್ಟಿದೆ.
  • ಯೇಸುವನ್ನು “ಸಮಾಧಾನ ಪ್ರಭು” ಮತ್ತು “ಜೀವಾಧಿಪತಿ” ಎಂದು ಕರೆಯಲಾಗಿದೆ.
  • ಅಪೊ.ಕೃತ್ಯ.2:36 ವಾಕ್ಯದಲ್ಲಿ ಯೇಸುವನ್ನು “ಒಡೆಯ ಮತ್ತು ಕ್ರಿಸ್ತ” ಎಂಬುದಾಗಿ ಕರೆಯಲ್ಪಟ್ಟಿದ್ದಾನೆ, ಮತ್ತು ಅಪೊ.ಕೃತ್ಯ.5:31 ವಾಕ್ಯದಲ್ಲಿ ಈತನನ್ನು “ರಾಜಕುಮಾರ ಮತ್ತು ರಕ್ಷಕ” ಎಂಬುದಾಗಿ ಕರೆಯಲ್ಪಟ್ಟಿದ್ದನು, ಈ ಪದವು “ಒಡೆಯ” ಮತ್ತು “ರಾಜಕುಮಾರ” ಎನ್ನುವ ಪದಗಳ ಅರ್ಥಕ್ಕೆ ಸಮಾನವಾಗಿ ತೋರಿಸಲ್ಪಟ್ಟಿರುತ್ತದೆ.

ಅನುವಾದ ಸಲಹೆಗಳು:

  • “ರಾಜಕುಮಾರ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಅರಸನ ಮಗ” ಅಥವಾ “ಪಾಲಕ” ಅಥವಾ “ನಾಯಕ” ಅಥವಾ “ಮುಖ್ಯಸ್ಥ” ಅಥವಾ “ಕ್ಯಾಪ್ಟನ್ (ನಾಯಕ)” ಎನ್ನುವ ಪದಗಳು ಒಳಗೊಂಡಿರುತ್ತವೆ.
  • ದೂತರನ್ನು ಸೂಚಿಸಿದಾಗ, ಈ ಪದಕ್ಕೆ “ಆತ್ಮ ನಾಯಕ” ಅಥವಾ “ನಡೆಸುವ ದೂತ” ಎಂದೂ ಅನುವಾದ ಮಾಡಬಹುದು.
  • ಸೈತಾನನನ್ನು ಅಥವಾ ಇತರ ದುಷ್ಟ ಆತ್ಮಗಳನ್ನು ಸೂಚಿಸಿದಾಗ, ಈ ಪದವನ್ನು “ದುಷ್ಟ ಆತ್ಮ ಪಾಲಕ” ಅಥವಾ “ಶಕ್ತಿಯುತವಾದ ಆತ್ಮ ನಾಯಕ” ಅಥವಾ “ಪಾಲಿಸುವ ಆತ್ಮ” ಎಂದು ಸಂದರ್ಭಾನುಗುಣವಾಗಿ ಸಂದರ್ಭದಲ್ಲಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದೂತ, ಅಧಿಕಾರ, ಕ್ರಿಸ್ತ, ದೆವ್ವ, ಒಡೆಯ, ಶಕ್ತಿ, ಪಾಲಕ, ಸೈತಾನ್, ರಕ್ಷಕ, ಆತ್ಮ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1, H117, H324, H2831, H3548, H4502, H5057, H5081, H5139, H5257, H5387, H5633, H5993, H6579, H7101, H7261, H7333, H7336, H7786, H7991, H8269, H8282, H8323, G747, G758, G1413, G2232, G3175