kn_tw/bible/other/preach.md

8.7 KiB
Raw Permalink Blame History

ಉಪದೇಶ ಉಪದೇಶಿಸುವುದು, ಉಪದೇಶಕ, ಸಾರು, ಸಾರುವುದು, ಸಾರಲ್ಪಡು,

ಪದದ ಅರ್ಥವಿವರಣೆ:

“ಉಪದೇಶಿಸು” ಎನ್ನುವ ಪದಕ್ಕೆ ಜನರ ಗುಂಪಿನೊಂದಿಗೆ ಮಾತನಾಡು, ದೇವರ ಕುರಿತಾಗಿ ಅವರಿಗೆ ಬೋಧನೆ ಮಾಡು ಮತ್ತು ದೇವರಿಗೆ ವಿಧೇಯತೆ ತೋರಿಸಬೇಕೆಂದು ಅವರನ್ನು ಬೇಡಿಕೊಳ್ಳು ಎಂದರ್ಥ. “ಸಾರಲ್ಪದಡು” ಎನ್ನುವ ಪದಕ್ಕೆ ಧೈರ್ಯವಾಗಿ ಬಹಿರಂಗವಾಗಿ ಯಾವುದಾದರೊಂದನ್ನು ಘೋಷಿಸುವುದು ಅಥವಾ ಸಾರುವುದು ಎಂದರ್ಥ.

  • ಸಾಮಾನ್ಯವಾಗಿ ಉಪದೇಶವನ್ನು ಒಬ್ಬ ವ್ಯಕ್ತಿಯಿಂದ ದೊಡ್ಡ ಗುಂಪಿನ ಜನರಿಗೆ ಮಾಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಮಾತನಾಡಲಾಗುತ್ತದೆ, ಬರೆಯಲಾಗುವುದಿಲ್ಲ.
  • “ಉಪದೇಶ” ಮತ್ತು “ಬೋಧನೆ” ಹೋಲುತ್ತದೆ, ಆದರೆ ನಿಖರವಾಗಿ ಒಂದೇ ಆಗಿರುವುದಿಲ್ಲ.
  • “ಉಪದೇಶಿಸುವುದು” ಮುಖ್ಯವಾಗಿ ಆಧ್ಯಾತ್ಮಿಕ ಅಥವಾ ನೈತಿಕ ಸತ್ಯವನ್ನು ಸಾರ್ವಜನಿಕವಾಗಿ ಘೋಷಿಸುವುದನ್ನು ಸೂಚಿಸುತ್ತದೆ ಮತ್ತು ಪ್ರತಿಕ್ರಿಯಿಸಲು ಪ್ರೇಕ್ಷಕರನ್ನು ಒತ್ತಾಯಿಸುತ್ತದೆ. “ಬೋಧನೆ” ಎನ್ನುವುದು ಸೂಚನೆಗೆ ಒತ್ತು ನೀಡುವ ಪದವಾಗಿದೆ, ಅಂದರೆ ಜನರಿಗೆ ಮಾಹಿತಿ ನೀಡುವುದು ಅಥವಾ ಏನನ್ನಾದರೂ ಹೇಗೆ ಮಾಡಬೇಕೆಂದು ಅವರಿಗೆ ಕಲಿಸುವುದು.
  • “ಉಪದೇಶ” ಎಂಬ ಪದವನ್ನು ಸಾಮಾನ್ಯವಾಗಿ “ಸುವಾರ್ತೆ” ಎಂಬ ಪದದೊಂದಿಗೆ ಬಳಸಲಾಗುತ್ತದೆ.
  • ಒಬ್ಬ ವ್ಯಕ್ತಿಯು ಇತರರಿಗೆ ಬೋಧಿಸಿದ್ದನ್ನು ಸಾಮಾನ್ಯವಾಗಿ ಅವನ “ಬೋಧನೆಗಳು” ಎಂದೂ ಕರೆಯಬಹುದು.
  • ಸಾಮಾನ್ಯವಾಗಿ ಸತ್ಯವೇದದಲ್ಲಿ, “ಸಾರು” ಎಂದರೆ ದೇವರು ಆಜ್ಞಾಪಿಸಿದ ಯಾವುದನ್ನಾದರೂ ಸಾರ್ವಜನಿಕವಾಗಿ ಘೋಷಿಸುವುದು, ಅಥವಾ ದೇವರ ಬಗ್ಗೆ ಇತರರಿಗೆ ಹೇಳುವುದು ಮತ್ತು ಅವನು ಎಷ್ಟು ಶ್ರೇಷ್ಠನೆಂದು.
  • ಹೊಸ ಒಡಂಬಡಿಕೆಯಲ್ಲಿ, ಅಪೊಸ್ತಲರು ಯೇಸುವಿನ ಬಗ್ಗೆ ಸುವಾರ್ತೆಯನ್ನು ವಿವಿಧ ನಗರಗಳು ಮತ್ತು ಪ್ರದೇಶಗಳಲ್ಲಿ ಅನೇಕ ಜನರಿಗೆ ಸಾರಿದರು.
  • "ಸಾರು” ಎಂಬ ಪದವನ್ನು ರಾಜರು ಮಾಡಿದ ತೀರ್ಪುಗಳಿಗೆ ಅಥವಾ ಸಾರ್ವಜನಿಕ ರೀತಿಯಲ್ಲಿ ಕೆಟ್ಟದ್ದನ್ನು ಖಂಡಿಸಲು ಸಹ ಬಳಸಬಹುದು.
  • “ಸಾರು” ಅನ್ನು ಭಾಷಾಂತರಿಸುವ ಇತರ ಮಾರ್ಗಗಳಲ್ಲಿ “ಸಾರುವದು” ಅಥವಾ “ಬಹಿರಂಗವಾಗಿ ಬೋಧಿಸು” ಅಥವಾ “ಸಾರ್ವಜನಿಕವಾಗಿ ಘೋಷಿಸು” ಒಳಗೊಂಡಿರಬಹುದು.
  • “ಸಾರು” ಎಂಬ ಪದವನ್ನು “ಪ್ರಕಟಣೆ” ಅಥವಾ “ಸಾರ್ವಜನಿಕ ಉಪದೇಶ” ಎಂದೂ ಅನುವಾದಿಸಬಹುದು.

(ಈ ಪದಗಳನ್ನು ಸಹ ನೋಡಿರಿ : ಶುಭವಾರ್ತೆ, ಯೇಸು, ದೇವರ ರಾಜ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 24:02 “ಮಾನಸಾಂತರ ಹೊಂದಿರಿ, ದೇವರ ರಾಜ್ಯವು ಸಮೀಪವಾಗಿದೆ” ಎಂದು ಅವನು (ಯೋಹಾನು) ಅವರಿಗೆ __ ಪ್ರಸಂಗ ಮಾಡಿದನು __ .
  • 30:01 ಅನೇಕ ಗ್ರಾಮಗಳಲ್ಲಿ ಬೋಧನೆ ಮಾಡುವುದಕ್ಕೆ ಮತ್ತು __ ಉಪದೇಶಿಸಲು __ ಯೇಸು ತನ್ನ ಶಿಷ್ಯರನ್ನು ಕಳುಹಿಸಿದನು.
  • 38:01 ಮೂವತ್ತು ಮೂರು ವರ್ಷಗಳಾದ ಮೇಲೆ ಯೇಸು ಬಹಿರಂಗವಾಗಿ ಬೋಧಿಸುವುದಕ್ಕೆ ಮತ್ತು __ ಉಪದೇಶ ಮಾಡುವುದಕ್ಕೂ __ ಆರಂಭಿಸಿದನು, ಯೆರೂಸಲೇಮಿನಲ್ಲಿ ಶಿಷ್ಯರೊಂದಿಗೆ ಪಸ್ಕವನ್ನು ಆಚರಿಸುವುದಕ್ಕೆ ತಾನು ಬಯಸುತಿದ್ದೇನೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು, ಮತ್ತು ಅಲ್ಲಿ ಆತನನ್ನು ಮರಣಕ್ಕೆ ಗುರಿ ಮಾಡಲಾಗುತ್ತದೆ.
  • 45:06 ಈ ಎಲ್ಲಾ ಸಂದರ್ಭಗಳಲ್ಲಿ ಇದ್ದಾಗಲೂ ಅವರು ಹೋದ ಪ್ರತಿಯೊಂದು ಸ್ಥಳದಲ್ಲೂ ಯೇಸುವಿನ ಕುರಿತಾಗಿ ಅವರು__ ಭೋದಿಸಿದರು __.
  • 45:07 ಅವನು (ಫಿಲಿಪ್ಪನ) ಸಮಾರ್ಯಕ್ಕೆ ಹೋಗಿ, ಯೇಸುವಿನ ಕುರಿತಾಗಿ ಆತನು ಬೋಧಿಸಲು, ಆ ಊರಿನಲ್ಲಿ ಅನೇಕಮಂದಿ ರಕ್ಷಣೆ ಹೊಂದಿದರು.
  • 46:06 ಆ ಕ್ಷಣದಲ್ಲಿಯೇ, ಸೌಲನು ದಮಸ್ಕದಲ್ಲಿರುವ ಯೆಹೂದ್ಯರಿಗೆ __ ಉಪದೇಶ ಮಾಡುವುದಕ್ಕೆ __ ಆರಂಭಿಸಿದನು.
  • 46:10 ಅನೇಕ ಸ್ಥಳಗಳಲ್ಲಿ ಯೇಸುವಿನ ಶುಭವಾರ್ತೆಯನ್ನು __ ಬೋದಿಸಲು __ ಅವರು ಅವರನ್ನು ಕಳುಹಿಸಿದರು.
  • 47:14 ಪೌಲನು ಮತ್ತು ಇತರ ಕ್ರೈಸ್ತ ನಾಯಕರು ಅನೇಕ ಪಟ್ಟಣಗಳಿಗೆ ಪ್ರಯಾಣ ಮಾಡಿ, ಯೇಸುವಿನ ಕುರಿತಾಗಿ ಶುಭವಾರ್ತೆಯನ್ನು ಜನರಿಗೆ ಬೋಧಿಸಿದರು ಮತ್ತು __ ಉಪದೇಶಿಸಿದರು __.
  • 50:02 “ಸರ್ವಲೋಕದಲ್ಲಿರುವ ಜನರಿಗೆ ಮತ್ತು ಭೂಮಿಯ ಕಟ್ಟಕಡೆಯವರೆಗೂ ದೇವರ ರಾಜ್ಯದ ಕುರಿತಾಗಿ ಶುಭವಾರ್ತೆಯನ್ನು ನನ್ನ ಶಿಷ್ಯರು ಪ್ರಕಟಿಸುವರು” ಎಂದು ಈ ಭೂಮಿಯ ಮೇಲೆ ಯೇಸು ಜೀವಿಸಿದಾಗ ಹೇಳಿದರು.

ಪದ ಡೇಟಾ:

  • Strongs:
    • preach: H1319, H7121, H7150, G1229, G2097, G2605, G2782, G2783, G2784, G2980, G4283
    • (for proclaim): H1319, H1696, H1697, H2199, H3045, H3745, H4161, H5046, H5608, H6963, H7121, H7440, H8085, G518, G591, G1229, G1861, G2097, G2605, G2782, G2784, G2980, G3142, G4135