7.1 KiB
7.1 KiB
ಶುಭವಾರ್ತೆ, ಸುವಾರ್ತೆ
ಪದದ ಅರ್ಥವಿವರಣೆ:
“ಸುವಾರ್ತೆ” ಎನ್ನುವ ಪದಕ್ಕೆ ಅಕ್ಷರಾರ್ಥವು “ಶುಭವಾರ್ತೆ” ಎಂದರ್ಥ, ಇದು ಜನರನ್ನು ಸಂತೋಷಪಡಿಸುವ ಮತ್ತು ಅವರಿಗೆ ಪ್ರಯೋಜನಕರವಾಗಿರುವ ಯಾವುದಾದರೊಂದನ್ನು ಜನರಿಗೆ ಹೇಳುವ ಪ್ರಕಟನೆಗಳನ್ನು ಅಥವಾ ಸಂದೇಶವನ್ನು ಸೂಚಿಸುತ್ತದೆ.
- ಸತ್ಯವೇದದಲ್ಲಿ ಈ ಪದವು ಶಿಲುಬೆಯಲ್ಲಿ ಮಾಡಿದ ಯೇಸುವಿನ ಬಲಿಯಾಗದ ಮೂಲಕ ಜನರಿಗೆ ಉಂಟಾಗುವ ದೇವರ ರಕ್ಷಣೆಯ ಕುರಿತಾದ ಸಂದೇಶವನ್ನು ಸಹಜವಾಗಿ ಸೂಚಿಸುತ್ತದೆ.
- ಅನೇಕ ಆಂಗ್ಲ ಸತ್ಯವೇದಗಳಲ್ಲಿ “ಶುಭವಾರ್ತೆ” ಎನ್ನುವ ಪದವು ಸಹಜವಾಗಿ “ಸುವಾರ್ತೆ” ಎಂದು ಅನುವಾದ ಮಾಡಿದ್ದಾರೆ, ಮತ್ತು “ಯೇಸು ಕ್ರಿಸ್ತನ ಸುವಾರ್ತೆ” “ದೇವರ ಸುವಾರ್ತೆ” ಅಥವಾ “ರಾಜ್ಯ ಸುವಾರ್ತೆ” ಎಂದೆನ್ನುವ ಮಾತುಗಳನ್ನು ಉಪಯೋಗಿಸಿದ್ದಾರೆ.
ಅನುವಾದ ಸಲಹೆಗಳು:
ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ಶುಭ ಸಂದೇಶ” ಅಥವಾ “ಶುಭ ಪ್ರಕಟನೆ” ಅಥವಾ “ದೇವರ ರಕ್ಷಣೆಯ ಸಂದೇಶ” ಅಥವಾ “ಯೇಸುವಿನ ಕುರಿತಾಗಿ ದೇವರ ಬೋಧನೆಗಳು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
- ಸಂದರ್ಭಾನುಸಾರವಾಗಿ “ಶುಭವಾರ್ತೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ, “ಇನ್ನೊಂದರ ಕುರಿತಾಗಿ ಶುಭವಾರ್ತೆ/ಸಂದೇಶ” ಅಥವಾ “ಇನ್ನೊಬ್ಬರಿಂದ ಶುಭ ಸಂದೇಶ” ಅಥವಾ “ಇನ್ನೊಂದರ ಕುರಿತಾಗಿ ದೇವರು ಹೇಳುವ ಒಳ್ಳೇಯ ವಿಷಯಗಳು” ಅಥವಾ “ದೇವರು ತನ್ನ ಜನರನ್ನು ಹೇಗೆ ರಕ್ಷಿಸುತ್ತಾರೆಂಬುದನ್ನು ದೇವರು ಹೇಳುವುದು” ಎನ್ನುವ ಮಾತುಗಳು ಸೇರಿಸಿ ಉಪಯೋಗಿಸಬಹುದು.
(ಈ ಪದಗಳನ್ನು ಸಹ ನೋಡಿರಿ : ರಾಜ್ಯ, ಬಲಿ, ರಕ್ಷಿಸು )
ಸತ್ಯವೇದದ ಅನುಬಂಧ ವಾಕ್ಯಗಳು:
- 1 ಥೆಸ್ಸ.01:05
- ಅಪೊ.ಕೃತ್ಯ.08:25
- ಕೊಲೊಸ್ಸೆ.01:23
- ಗಲಾತ್ಯ.01:06
- ಲೂಕ.08:1-3
- ಮಾರ್ಕ.01:14
- ಫಿಲಿಪ್ಪ.02:22
- ರೋಮಾ.01:03
ಸತ್ಯವೇದದಿಂದ ಉದಾಹರಣೆಗಳು:
- 23:06 “ಹೆದರಬೇಡಿರಿ, ಯಾಕಂದರೆ ನಾನು ನಿಮಗೆ ಹೇಳುವುದಕ್ಕೆ __ ಶುಭವಾರ್ತೆ__ ನನ್ನ ಬಳಿ ಇದೆ. ಬೋಧಕನಾಗಿರುವ ಮೆಸ್ಸೀಯ ಬೆತ್ಲೆಹೇಮಿನಲ್ಲಿ ಹುಟ್ಟಿದ್ದಾನೆ” ಎಂದು ದೂತ ಹೇಳಿತು.
- 26:03 “ದೇವರು ತನ್ನ ಆತ್ಮವನ್ನು ನನಗೆ ಕೊಟ್ಟಿದ್ದಾನೆ, ಆದ್ದರಿಂದ ನಾನು ಬಡವರಿಗೆ __ ಶುಭವಾರ್ತೆಯನ್ನು __ ಸಾರುವುದಕ್ಕೆ, ಸೆರೆಯಲ್ಲಿರುವವರನ್ನು ಬಿಡುಗಡೆ ಮಾಡುವುದಕ್ಕೆ, ಕುರುಡರಿಗೆ ಕಣ್ಣು ಕೊಡುವುದಕ್ಕೆ, ಹಿಂಸಿಸಲ್ಪಟ್ಟವರನ್ನು ಬಿಡಿಸುವುದಕ್ಕೆ ಆತನು ನನ್ನನ್ನು ಕಳುಹಿಸಿದನು. ಇದು ಕರ್ತನು ನೇಮಿಸಿರುವ ಶುಭ ವರ್ಷ”
- 45:10 ಯೇಸುವಿನ __ ಸುವಾರ್ತೆಯನ್ನು __ ಅವನಿಗೆ ಹೇಳಲು ಫಿಲಿಪ್ಪನು ಕೂಡ ಇತರ ವಾಕ್ಯಭಾಗವನ್ನು ಉಪಯೋಗಿಸಿಕೊಂಡನು.
- 46:10 ಅನೇಕ ಸ್ಥಳಗಳಲ್ಲಿ __ ಯೇಸುವಿನ ಕುರಿತಾದ ಸುವಾರ್ತೆಯನ್ನು ಪ್ರಕಟಿಸುವುದಕ್ಕೆ __ ಅವರು ಅವರನ್ನು ಕಳುಹಿಸಿದರು.
- 47:01 ಒಂದು ದಿನ ಪೌಲನು ಮತ್ತು ತನ್ನ ಸ್ನೇಹಿತನಾದ ಸೀಲನು __ ಯೇಸುವಿನ ಕುರಿತಾದ ಸುವಾರ್ತೆಯನ್ನು __ ಸಾರಲು ಫಿಲಿಪ್ಪಿ ಪಟ್ಟಣಕ್ಕೆ ಹೋದರು.
- 47:13 ಯೇಸುವಿನ ಕುರಿತಾದ ಸುವಾರ್ತೆಯು ವಿಸ್ತರಣೆಯಾಗುತ್ತಾ ಇತ್ತು, ಮತ್ತು ಸಭೆಯು ಬೆಳೆಯುತ್ತಾ ಇತ್ತು.
- 50:01 ಸುಮಾರು 2,000 ವರ್ಷಗಳಿಂದ, ಪ್ರಪಂಚದಾದ್ಯಂತ ಇರುವ ಅನೇಕ ಕೋಟ್ಯಾಂತ ಜನರು ಮೆಸ್ಸೀಯನಾದ __ ಯೇಸುವಿನ ಕುರಿತಾದ ಸುವಾರ್ತೆಯನ್ನು __ ಕೇಳುತ್ತಾ ಇದ್ದಾರೆ.
- 50:02 ಯೇಸು ಈ ಭೂಮಿಯ ಮೇಲೆ ಜೀವಿಸುತ್ತಿರುವಾಗ, “ಪ್ರಪಂಚದಲ್ಲಿರುವ ಪ್ರತಿಯೊಂದು ಸ್ಥಳಗಳಲ್ಲಿರುವ ಜನರಿಗೆ ದೇವರ ರಾಜ್ಯದ ಕುರಿತಾದ __ ಸುವಾರ್ತೆಯನ್ನು __ ನನ್ನ ಶಿಷ್ಯರು ಪ್ರಕಟಿಸುವರು, ಇದಾದನಂತರ ಅಂತ್ಯ ಬರುತ್ತದೆ” ಎಂದು ಹೇಳಿದನು.
- 50:03 ಆತನು ಪರಲೋಕಕ್ಕೆ ಹೋಗುವುದಕ್ಕೆ ಮುಂಚಿತವಾಗಿ, ಸುವಾರ್ತೆಯನ್ನು ಕೇಳದ ಜನರಿಗೆಲ್ಲರಿಗೆ __ ಸುವಾರ್ತೆಯನ್ನು __ ಸಾರಲು ಯೇಸು ಕ್ರೈಸ್ತರಿಗೆ ಹೇಳಿದನು.
ಪದ ಡೇಟಾ:
- Strong's: G2097, G2098, G4283