kn_tw/bible/kt/goodnews.md

44 lines
7.1 KiB
Markdown

# ಶುಭವಾರ್ತೆ, ಸುವಾರ್ತೆ
## ಪದದ ಅರ್ಥವಿವರಣೆ:
“ಸುವಾರ್ತೆ” ಎನ್ನುವ ಪದಕ್ಕೆ ಅಕ್ಷರಾರ್ಥವು “ಶುಭವಾರ್ತೆ” ಎಂದರ್ಥ, ಇದು ಜನರನ್ನು ಸಂತೋಷಪಡಿಸುವ ಮತ್ತು ಅವರಿಗೆ ಪ್ರಯೋಜನಕರವಾಗಿರುವ ಯಾವುದಾದರೊಂದನ್ನು ಜನರಿಗೆ ಹೇಳುವ ಪ್ರಕಟನೆಗಳನ್ನು ಅಥವಾ ಸಂದೇಶವನ್ನು ಸೂಚಿಸುತ್ತದೆ.
* ಸತ್ಯವೇದದಲ್ಲಿ ಈ ಪದವು ಶಿಲುಬೆಯಲ್ಲಿ ಮಾಡಿದ ಯೇಸುವಿನ ಬಲಿಯಾಗದ ಮೂಲಕ ಜನರಿಗೆ ಉಂಟಾಗುವ ದೇವರ ರಕ್ಷಣೆಯ ಕುರಿತಾದ ಸಂದೇಶವನ್ನು ಸಹಜವಾಗಿ ಸೂಚಿಸುತ್ತದೆ.
* ಅನೇಕ ಆಂಗ್ಲ ಸತ್ಯವೇದಗಳಲ್ಲಿ “ಶುಭವಾರ್ತೆ” ಎನ್ನುವ ಪದವು ಸಹಜವಾಗಿ “ಸುವಾರ್ತೆ” ಎಂದು ಅನುವಾದ ಮಾಡಿದ್ದಾರೆ, ಮತ್ತು “ಯೇಸು ಕ್ರಿಸ್ತನ ಸುವಾರ್ತೆ” “ದೇವರ ಸುವಾರ್ತೆ” ಅಥವಾ “ರಾಜ್ಯ ಸುವಾರ್ತೆ” ಎಂದೆನ್ನುವ ಮಾತುಗಳನ್ನು ಉಪಯೋಗಿಸಿದ್ದಾರೆ.
## ಅನುವಾದ ಸಲಹೆಗಳು:
ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ಶುಭ ಸಂದೇಶ” ಅಥವಾ “ಶುಭ ಪ್ರಕಟನೆ” ಅಥವಾ “ದೇವರ ರಕ್ಷಣೆಯ ಸಂದೇಶ” ಅಥವಾ “ಯೇಸುವಿನ ಕುರಿತಾಗಿ ದೇವರ ಬೋಧನೆಗಳು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* ಸಂದರ್ಭಾನುಸಾರವಾಗಿ “ಶುಭವಾರ್ತೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ, “ಇನ್ನೊಂದರ ಕುರಿತಾಗಿ ಶುಭವಾರ್ತೆ/ಸಂದೇಶ” ಅಥವಾ “ಇನ್ನೊಬ್ಬರಿಂದ ಶುಭ ಸಂದೇಶ” ಅಥವಾ “ಇನ್ನೊಂದರ ಕುರಿತಾಗಿ ದೇವರು ಹೇಳುವ ಒಳ್ಳೇಯ ವಿಷಯಗಳು” ಅಥವಾ “ದೇವರು ತನ್ನ ಜನರನ್ನು ಹೇಗೆ ರಕ್ಷಿಸುತ್ತಾರೆಂಬುದನ್ನು ದೇವರು ಹೇಳುವುದು” ಎನ್ನುವ ಮಾತುಗಳು ಸೇರಿಸಿ ಉಪಯೋಗಿಸಬಹುದು.
(ಈ ಪದಗಳನ್ನು ಸಹ ನೋಡಿರಿ : [ರಾಜ್ಯ](../other/kingdom.md), [ಬಲಿ](../other/sacrifice.md), [ರಕ್ಷಿಸು](../kt/save.md) )
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಥೆಸ್ಸ.01:05](rc://*/tn/help/1th/01/05)
* [ಅಪೊ.ಕೃತ್ಯ.08:25](rc://*/tn/help/act/08/25)
* [ಕೊಲೊಸ್ಸೆ.01:23](rc://*/tn/help/col/01/23)
* [ಗಲಾತ್ಯ.01:06](rc://*/tn/help/gal/01/06)
* [ಲೂಕ.08:1-3](rc://*/tn/help/luk/08/01)
* [ಮಾರ್ಕ.01:14](rc://*/tn/help/mrk/01/14)
* [ಫಿಲಿಪ್ಪ.02:22](rc://*/tn/help/php/02/22)
* [ರೋಮಾ.01:03](rc://*/tn/help/rom/01/03)
## ಸತ್ಯವೇದದಿಂದ ಉದಾಹರಣೆಗಳು:
* __[23:06](rc://*/tn/help/obs/23/06)__ “ಹೆದರಬೇಡಿರಿ, ಯಾಕಂದರೆ ನಾನು ನಿಮಗೆ ಹೇಳುವುದಕ್ಕೆ __ ಶುಭವಾರ್ತೆ__ ನನ್ನ ಬಳಿ ಇದೆ. ಬೋಧಕನಾಗಿರುವ ಮೆಸ್ಸೀಯ ಬೆತ್ಲೆಹೇಮಿನಲ್ಲಿ ಹುಟ್ಟಿದ್ದಾನೆ” ಎಂದು ದೂತ ಹೇಳಿತು.
* __[26:03](rc://*/tn/help/obs/26/03)__ “ದೇವರು ತನ್ನ ಆತ್ಮವನ್ನು ನನಗೆ ಕೊಟ್ಟಿದ್ದಾನೆ, ಆದ್ದರಿಂದ ನಾನು ಬಡವರಿಗೆ __ ಶುಭವಾರ್ತೆಯನ್ನು __ ಸಾರುವುದಕ್ಕೆ, ಸೆರೆಯಲ್ಲಿರುವವರನ್ನು ಬಿಡುಗಡೆ ಮಾಡುವುದಕ್ಕೆ, ಕುರುಡರಿಗೆ ಕಣ್ಣು ಕೊಡುವುದಕ್ಕೆ, ಹಿಂಸಿಸಲ್ಪಟ್ಟವರನ್ನು ಬಿಡಿಸುವುದಕ್ಕೆ ಆತನು ನನ್ನನ್ನು ಕಳುಹಿಸಿದನು. ಇದು ಕರ್ತನು ನೇಮಿಸಿರುವ ಶುಭ ವರ್ಷ”
* __[45:10](rc://*/tn/help/obs/45/10)__ ಯೇಸುವಿನ __ ಸುವಾರ್ತೆಯನ್ನು __ ಅವನಿಗೆ ಹೇಳಲು ಫಿಲಿಪ್ಪನು ಕೂಡ ಇತರ ವಾಕ್ಯಭಾಗವನ್ನು ಉಪಯೋಗಿಸಿಕೊಂಡನು.
* __[46:10](rc://*/tn/help/obs/46/10)__ ಅನೇಕ ಸ್ಥಳಗಳಲ್ಲಿ __ ಯೇಸುವಿನ ಕುರಿತಾದ ಸುವಾರ್ತೆಯನ್ನು ಪ್ರಕಟಿಸುವುದಕ್ಕೆ __ ಅವರು ಅವರನ್ನು ಕಳುಹಿಸಿದರು.
* __[47:01](rc://*/tn/help/obs/47/01)__ ಒಂದು ದಿನ ಪೌಲನು ಮತ್ತು ತನ್ನ ಸ್ನೇಹಿತನಾದ ಸೀಲನು __ ಯೇಸುವಿನ ಕುರಿತಾದ ಸುವಾರ್ತೆಯನ್ನು __ ಸಾರಲು ಫಿಲಿಪ್ಪಿ ಪಟ್ಟಣಕ್ಕೆ ಹೋದರು.
* __[47:13](rc://*/tn/help/obs/47/13)__ ಯೇಸುವಿನ ಕುರಿತಾದ ಸುವಾರ್ತೆಯು ವಿಸ್ತರಣೆಯಾಗುತ್ತಾ ಇತ್ತು, ಮತ್ತು ಸಭೆಯು ಬೆಳೆಯುತ್ತಾ ಇತ್ತು.
* __[50:01](rc://*/tn/help/obs/50/01)__ ಸುಮಾರು 2,000 ವರ್ಷಗಳಿಂದ, ಪ್ರಪಂಚದಾದ್ಯಂತ ಇರುವ ಅನೇಕ ಕೋಟ್ಯಾಂತ ಜನರು ಮೆಸ್ಸೀಯನಾದ __ ಯೇಸುವಿನ ಕುರಿತಾದ ಸುವಾರ್ತೆಯನ್ನು __ ಕೇಳುತ್ತಾ ಇದ್ದಾರೆ.
* __[50:02](rc://*/tn/help/obs/50/02)__ ಯೇಸು ಈ ಭೂಮಿಯ ಮೇಲೆ ಜೀವಿಸುತ್ತಿರುವಾಗ, “ಪ್ರಪಂಚದಲ್ಲಿರುವ ಪ್ರತಿಯೊಂದು ಸ್ಥಳಗಳಲ್ಲಿರುವ ಜನರಿಗೆ ದೇವರ ರಾಜ್ಯದ ಕುರಿತಾದ __ ಸುವಾರ್ತೆಯನ್ನು __ ನನ್ನ ಶಿಷ್ಯರು ಪ್ರಕಟಿಸುವರು, ಇದಾದನಂತರ ಅಂತ್ಯ ಬರುತ್ತದೆ” ಎಂದು ಹೇಳಿದನು.
* __[50:03](rc://*/tn/help/obs/50/03)__ ಆತನು ಪರಲೋಕಕ್ಕೆ ಹೋಗುವುದಕ್ಕೆ ಮುಂಚಿತವಾಗಿ, ಸುವಾರ್ತೆಯನ್ನು ಕೇಳದ ಜನರಿಗೆಲ್ಲರಿಗೆ __ ಸುವಾರ್ತೆಯನ್ನು __ ಸಾರಲು ಯೇಸು ಕ್ರೈಸ್ತರಿಗೆ ಹೇಳಿದನು.
## ಪದ ಡೇಟಾ:
* Strong's: G2097, G2098, G4283