kn_tw/bible/kt/kingdomofgod.md

9.3 KiB

ದೇವರ ರಾಜ್ಯ, ಪರಲೋಕ ರಾಜ್ಯ

ಪದದ ಅರ್ಥವಿವರಣೆ:

“ದೇವರ ರಾಜ್ಯ” ಮತ್ತು “ಪರಲೋಕ ರಾಜ್ಯ” ಎನ್ನುವ ಪದಗಳು ದೇವರು ತನ್ನ ಜನರ ಮೇಲೆ ಮತ್ತು ಎಲ್ಲಾ ಸೃಷ್ಟಿಯ ಮೇಲೆ ತನ್ನ ಅಧಿಕಾರವನ್ನು ಮತ್ತು ಪಾಲನೆಯನ್ನು ಸೂಚಿಸುತ್ತದೆ.

  • ಯೆಹೂದ್ಯರು ದೇವರ ಹೆಸರನ್ನು ನೇರವಾಗಿ ಹೇಳುವುದನ್ನು ತಪ್ಪಿಸಲು “ಪರಲೋಕ” ಎನ್ನುವ ಪದವನ್ನು ಅನೇಕಸಲ ದೇವರನ್ನು ಸೂಚಿಸುವುದಕ್ಕೆ ಉಪಯೋಗಿಸಿದ್ದಾರೆ, (ನೋಡಿರಿ: ಲಾಕ್ಷಣಿಕ ಪ್ರಯೋಗ)
  • ಹೊಸ ಒಡಂಬಡಿಕೆಯ ಮತ್ತಾಯನು ಬರೆದ ಪುಸ್ತಕದಲ್ಲಿ ದೇವರ ರಾಜ್ಯವನ್ನು “ಪರಲೋಕ ರಾಜ್ಯವನ್ನಾಗಿ” ಸೂಚಿಸಿದ್ದಾನೆ, ಬಹುಶಃ ಯಾಕಂದರೆ ಪ್ರಾಥಮಿಕವಾಗಿ ಆತನು ಈ ಪುಸ್ತಕವನ್ನು ಯೆಹೂದ್ಯ ಪ್ರೇಕ್ಷಕರಿಗೆ ಬರೆಯುತ್ತಿದ್ದಾನೆ.
  • ದೇವರ ರಾಜ್ಯ ಎನ್ನುವುದು ದೇವರು ಎಲ್ಲಾ ಜನರನ್ನು ಆತ್ಮೀಯಕವಾಗಿ ಪಾಲಿಸುತ್ತಿದ್ದಾನೆನ್ನುವುದನ್ನು ಮತ್ತು ಭೌತಿಕ ಪ್ರಪಂಚವನ್ನು ಪಾಲಿಸುತ್ತಿದ್ದಾನೆನ್ನುವುದನ್ನು ಸೂಚಿಸುತ್ತದೆ.
  • ನೀತಿಯಿಂದ ಆಳಲು ದೇವರು ಮೆಸ್ಸೀಯನನ್ನು ಕಳುಹಿಸುವನೆಂದು ಹಳೇ ಒಡಂಬಡಿಕೆ ಪ್ರವಾದಿಗಳು ಹೇಳಿದ್ದಾರೆ. ದೇವರ ಮಗನಾದ ಯೇಸು ಮೆಸ್ಸೀಯನಾಗಿದ್ದಾನೆ, ಈತನು ದೇವರ ರಾಜ್ಯವನ್ನು ಎಂದೆಂದಿಗೂ ಆಳುತ್ತಿರುವನು.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ದೇವರ ರಾಜ್ಯ” ಎನ್ನುವ ಮಾತನ್ನು “ದೇವರ ಆಳ್ವಿಕೆ (ಅರಸನಾಗಿ)” ಅಥವಾ “ಅರಸನಾಗಿ ದೇವರು ಪಾಲನೆ ಮಾಡುವಾಗ” ಅಥವಾ “ಎಲ್ಲಾವುದರ ಮೇಲೆ ದೇವರ ಆಳ್ವಿಕೆ” ಎಂದೂ ಅನುವಾದ ಮಾಡಬಹುದು.
  • “ಪರಲೋಕ ರಾಜ್ಯ” ಎನ್ನುವ ಮಾತನ್ನು “ಅರಸನಾಗಿ ಪರಲೋಕದಿಂದ ದೇವರ ಆಳ್ವಿಕೆ” ಅಥವಾ “ಪರಲೋಕದಲ್ಲಿರುವ ದೇವರ ಆಳ್ವಿಕೆ” ಅಥವಾ “ಪರಲೋಕದ ರಾಜ್ಯಭಾರ” ಅಥವಾ “ಎಲ್ಲಾವುದರ ಮೇಲೆ ಪರಲೋಕದ ಆಳ್ವಿಕೆ” ಎಂದೂ ಅನುವಾದ ಮಾಡಬಹುದು. ಒಂದು ವೇಳೆ ಈ ಮಾತನ್ನು ಅತೀ ಸಾಧಾರಣವಾಗಿ ಮತ್ತು ಸ್ಪಷ್ಟವಾಗಿ ಅನುವಾದ ಮಾಡುವುದಾದರೆ, “ದೇವರ ರಾಜ್ಯ” ಎನ್ನುವ ಪದವನ್ನು ಅನುವಾದ ಮಾಡಬಹುದು.
  • ಕೆಲವೊಂದು ಅನುವಾದಕರು “ಪರಲೋಕ” ಎನ್ನುವ ಪದವನ್ನು ದೇವರಿಗೆ ಸೂಚಿಸುವಂತೆ ಉಪಯೋಗಿಸಿದ್ದಾರೆ. ಕೆಲವೊಬ್ಬರು ವಾಕ್ಯದಲ್ಲಿ ಸೂಚನೆಯನ್ನು ಕೊಟ್ಟಿರಬಹುದು, “ಪರಲೋಕ ರಾಜ್ಯ” ಎನ್ನುವದನ್ನು “ದೇವರ ರಾಜ್ಯ” ಎಂಬುದಾಗಿ ಬರೆದಿರಬಹುದು.
  • ಸತ್ಯವೇದದಲ್ಲಿ ಪುಟದ ಕೆಳ ಭಾಗದಲ್ಲಿ ಈ ಮಾತಿನಲ್ಲಿರುವ “ಪರಲೋಕ” ಎನ್ನುವ ಪದಕ್ಕೆ ವಿವರಣೆಯನ್ನು ಕೊಟ್ಟಿರಬಹುದು.

(ಈ ಪದಗಳನ್ನು ಸಹ ನೋಡಿರಿ : ದೇವರು, ಪರಲೋಕ, ಅರಸ, ರಾಜ್ಯ, ಯೆಹೂದ್ಯರ ಅರಸ, ಆಳ್ವಿಕೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕತೆಗಳಿಂದ ಉದಾಹರಣೆಗಳು:

  • 24:02 “ಮಾನಸಾಂತರ ಹೊಂದಿರಿ, ದೇವರ __ ರಾಜ್ಯ __ ಸಮೀಪವಾಗಿದೆ” ಎಂದು ಹೇಳುತ್ತಾ ಅವನು (ಯೋಹಾನ) ಅವರಿಗೆ ಸಂದೇಶವನ್ನು ಹೇಳಿದನು.
  • 28:06 “ಐಶ್ವರ್ಯವಂತನು ಪರಲೋಕ __ ರಾಜ್ಯದಲ್ಲಿ __ ಸೇರುವುದು ಕಷ್ಟ, ಹೌದು, ಐಶ್ವರ್ಯವಂತನು ದೇವರ __ ರಾಜ್ಯದಲ್ಲಿ __ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು.
  • 29:02 ದೇವರ ರಾಜ್ಯ ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ” ಎಂದು ಯೇಸು ಹೇಳಿದನು.
  • 34:01 ದೇವರ ರಾಜ್ಯದ __ ಕುರಿತಾಗಿ ಅನೇಕವಾದ ಸಾಮ್ಯಗಳನ್ನು ಯೇಸು ಹೇಳಿದರು. ಉದಾಹರಣೆಗೆ, “__ ದೇವರ ರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ, ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು” ಎಂದು ಆತನು ಹೇಳಿದನು.
  • 34:03 ದೇವರ ರಾಜ್ಯವು ಹುಳಿ ಹಿಟ್ಟಿಗೆ ಹೋಲಿಕೆಯಾಗಿರುತ್ತದೆ. ಅದನ್ನು ಒಬ್ಬ ಸ್ತ್ರೀ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಿಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು” ಎಂದು ಯೇಸು ಮತ್ತೊಂದು ಸಾಮ್ಯವನ್ನು ಹೇಳಿದನು.
  • 34:04 ದೇವರ ರಾಜ್ಯವು ಹೊಲದಲ್ಲಿ ಮುಚ್ಚಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಅದನ್ನು ಮೊತ್ತೊಂದುಬಾರಿ ಮುಚ್ಚಿಟ್ಟನು.
  • 34:05 ದೇವರ ರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ”.
  • 42:09 ಆತನು ಜೀವಂತವಾಗಿದ್ದಾನೆಂದು ಅನೇಕ ವಿಧಗಳಲ್ಲಿ ಆತನು ತನ್ನ ಶಿಷ್ಯರಿಗೆ ತೋರಿಸಿಕೊಂಡಿದ್ದಾರೆ ಮತ್ತು ಆತನು ಅವರಿಗೆ __ ದೇವರ ರಾಜ್ಯದ __ ಕುರಿತಾಗಿ ಹೇಳಿದನು.
  • 49:05 ದೇವರ ರಾಜ್ಯವು ಈ ಲೋಕದಲ್ಲಿರುವವುಗಳಿಗಿಂತ ತುಂಬಾ ಬೆಲೆಯುಳ್ಳದ್ದೆಂದು ಯೇಸು ಹೇಳಿದ್ದಾರೆ.
  • 50:02 “ಈ ಲೋಕದಲ್ಲಿರುವ ಪ್ರತಿಯೊಬ್ಬರಿಗೆ ಮತ್ತು ಭೂಮಿಯ ಕಟ್ಟ ಕಡೆಯ ಭಾಗಗಳಲ್ಲಿರುವ ಜನರಿಗೆ __ ದೇವರ ರಾಜ್ಯದ __ ಕುರಿತಾದ ಶುಭವಾರ್ತೆಯನ್ನು ನನ್ನ ಶಿಷ್ಯರು ಹೇಳುವರು” ಎಂದು ಯೇಸು ಈ ಭೂಮಿ ಮೇಲೆ ಸಂಚಾರ ಮಾಡಿದ ದಿನಗಳಲ್ಲಿ ಹೇಳಿದರು.

ಪದ ಡೇಟಾ:

  • Strong's: G932, G2316, G3772