5.6 KiB
5.6 KiB
ಪರಲೋಕ, ಆಕಾಶ, ಪರಲೋಕಗಳು, ಪರಲೋಕದ
ಪದದ ಅರ್ಥವಿವರಣೆ:
“ಪರಲೋಕ” ಎನ್ನುವ ಪದವು ಸಹಜವಾಗಿ ದೇವರು ನಿವಾಸ ಸ್ಥಳವನ್ನು ಸೂಚಿಸುತ್ತದೆ. ಅದೇ ಪದವು ಸಂದರ್ಭಾನುಗುಣವಾಗಿ “ಆಕಾಶ” ಎಂದೂ ಅರ್ಥ ಕೊಡುತ್ತದೆ.
- “ಪರಲೋಕಗಳು” ಎಂಬ ಪದವು ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಸೇರಿದಂತೆ ಭೂಮಿಯ ಮೇಲೆ ನಾವು ನೋಡುವ ಎಲ್ಲವನ್ನೂ ಸೂಚಿಸುತ್ತದೆ. ಇದು ಭೂಮಿಯಿಂದ ನಾವು ನೇರವಾಗಿ ನೋಡಲಾಗದ ದೂರದ ಗ್ರಹಗಳಂತಹ ಪರಲೋಕದ ದೇಹಗಳನ್ನು ಸಹ ಒಳಗೊಂಡಿದೆ.
- “ಆಕಾಶ” ಎಂಬ ಪದವು ಭೂಮಿಯ ಮೇಲಿರುವ ನೀಲಿ ವಿಸ್ತಾರವನ್ನು ಮೋಡಗಳು ಮತ್ತು ನಾವು ಉಸಿರಾಡುವ ಗಾಳಿಯನ್ನು ಸೂಚಿಸುತ್ತದೆ. ಆಗಾಗ್ಗೆ ಸೂರ್ಯ ಮತ್ತು ಚಂದ್ರರನ್ನು "ಆಕಾಶದಲ್ಲಿ" ಎಂದು ಹೇಳಲಾಗುತ್ತದೆ.
- ಸತ್ಯವೇದದಲ್ಲಿನ ಕೆಲವು ಸಂದರ್ಭಗಳಲ್ಲಿ, “ಪರಲೋಕ” ಎಂಬ ಪದವು ಆಕಾಶ ಅಥವಾ ದೇವರು ವಾಸಿಸುವ ಸ್ಥಳವನ್ನು ಸೂಚಿಸುತ್ತದೆ.
ಅನುವಾದ ಸಲಹೆಗಳು:
- ಮತ್ತಾಯನ ಪುಸ್ತಕದಲ್ಲಿನ “ಪರಲೋಕದ ರಾಜ್ಯ” ಕ್ಕೆ, “ಪರಲೋಕ” ಎಂಬ ಪದವನ್ನು ಇಟ್ಟುಕೊಳ್ಳುವುದು ಉತ್ತಮ, ಏಕೆಂದರೆ ಇದು ಮತ್ತಾಯನ ಸುವಾರ್ತೆಗೆ ವಿಶಿಷ್ಟವಾಗಿದೆ.
- “ಪರಲೋಕಗಳು” ಅಥವಾ “ಪರಲೋಕದ ದೇಹಗಳು” ಎಂಬ ಪದಗಳನ್ನು “ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು” ಅಥವಾ “ವಿಶ್ವದಲ್ಲಿನ ಎಲ್ಲಾ ನಕ್ಷತ್ರಗಳು” ಎಂದೂ ಅನುವಾದಿಸಬಹುದು.
- “ಪರಲೋಕದ ನಕ್ಷತ್ರಗಳು” ಎಂಬ ಮಾತನ್ನು “ಆಕಾಶದಲ್ಲಿನ ನಕ್ಷತ್ರಗಳು” ಅಥವಾ “ತಾರಾಂಗಣದ ನಕ್ಷತ್ರಗಳು” ಅಥವಾ “ವಿಶ್ವದಲ್ಲಿನ ನಕ್ಷತ್ರಗಳು” ಎಂದು ಅನುವಾದಿಸಬಹುದು.
(ಈ ಪದಗಳನ್ನು ಸಹ ನೋಡಿರಿ : ದೇವರ ರಾಜ್ಯ)
ಸತ್ಯವೇದದ ಅನುಬಂಧ ವಾಕ್ಯಗಳು:
- 1 ಅರಸ.08:22-24
- 1 ಥೆಸ್ಸ.01:8-10
- 1 ಥೆಸ್ಸ.04:17
- ಧರ್ಮೋ.09:01
- ಎಫೆಸ.06:9
- ಆದಿ.01:01
- ಆದಿ.07:12
- ಯೋಹಾನ.03:13
- ಯೋಹಾನ.03:27
- ಮತ್ತಾಯ.05:18
- ಮತ್ತಾಯ.05:46-48
ಸತ್ಯವೇದ ಕತೆಗಳಿಂದ ಉದಾಹರಣೆಗಳು:
- 04:02 ಅವರು __ ಆಕಾಶವನ್ನು __ ತಲುಪುವುದಕ್ಕೆ ದೊಡ್ಡ ಗೋಪುರವನ್ನು ನಿರ್ಮಿಸುವುದಕ್ಕೆ ಆರಂಭಿಸಿದರು.
- 14:11 ಆತನು (ದೇವರು)__ ಪರಲೋಕದಿಂದ __ ಆಹಾರವನ್ನು ಕೊಟ್ಟನು, ಇದನ್ನು “ಮನ್ನ” ಎಂದು ಕರೆಯುತ್ತಾರೆ.
- 23:07 ಆಕಸ್ಮಿಕವಾಗಿ, ದೇವರನ್ನು ಸ್ತುತಿಸುವ ದೂತರಗಳೊಂದಿಗೆ ಆಕಾಶಗಳು ತುಂಬಿಸಲ್ಪಟ್ಟವು, ಅವೆಲ್ಲವೂ “__ ಪರಲೋಕದಲ್ಲಿರುವ __ ದೇವರಿಗೆ ಮಹಿಮೆ ಉಂಟಾಗಲಿ ಮತ್ತು ಭೂಮಿಯ ತನಗೆ ಇಷ್ಟವಾದ ಜನರಿಗೆ ಸಮಾಧಾನ ಉಂಟಾಗಲಿ” ಎಂದು ಹೇಳುತ್ತಿದ್ದವು.
- 29:09 “ನಿಮ್ಮ ಹೃದಯದಿಂದ ನಿಮ್ಮ ಸಹೋದರನನ್ನು ಕ್ಷಮಿಸದಿದ್ದರೆ ನಿಮ್ಮಲ್ಲಿರುವ ಪ್ರತಿಯೊಬ್ಬರಿಗೆ ನನ್ನ __ ಪರಲೋಕದ __ ತಂದೆ ಇದನ್ನೇ ಮಾಡುತ್ತಾನೆ” ಎಂದು ಯೇಸು ಹೇಳಿದರು.
- 37:09 ಆದನಂತರ ಯೇಸು __ ಪರಲೋಕದ __ ಕಡೆಗೆ ನೋಡಿ, “ತಂದೆಯೇ, ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕಾಗಿ ನಿಮಗೆ ವಂದನೆಗಳು” ಎಂದು ಹೇಳಿದನು.
- 42:11 ಆದನಂತರ ಯೇಸು __ ಪರಲೋಕಕ್ಕೆ __ ಹೋದನು, ಮತ್ತು ಅವರು ನೋಡುತ್ತಿರುವಾಗಲೇ ಮೇಘವು ಆತನನ್ನು ಆವರಿಸಿತು.
ಪದ ಡೇಟಾ:
- Strong's: H1534, H6160, H6183, H7834, H8064, H8065, G932, G2032, G3321, G3770, G3771, G3772