kn_tw/bible/kt/heaven.md

45 lines
5.6 KiB
Markdown

# ಪರಲೋಕ, ಆಕಾಶ, ಪರಲೋಕಗಳು, ಪರಲೋಕದ
## ಪದದ ಅರ್ಥವಿವರಣೆ:
“ಪರಲೋಕ” ಎನ್ನುವ ಪದವು ಸಹಜವಾಗಿ ದೇವರು ನಿವಾಸ ಸ್ಥಳವನ್ನು ಸೂಚಿಸುತ್ತದೆ. ಅದೇ ಪದವು ಸಂದರ್ಭಾನುಗುಣವಾಗಿ “ಆಕಾಶ” ಎಂದೂ ಅರ್ಥ ಕೊಡುತ್ತದೆ.
* “ಪರಲೋಕಗಳು” ಎಂಬ ಪದವು ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಸೇರಿದಂತೆ ಭೂಮಿಯ ಮೇಲೆ ನಾವು ನೋಡುವ ಎಲ್ಲವನ್ನೂ ಸೂಚಿಸುತ್ತದೆ. ಇದು ಭೂಮಿಯಿಂದ ನಾವು ನೇರವಾಗಿ ನೋಡಲಾಗದ ದೂರದ ಗ್ರಹಗಳಂತಹ ಪರಲೋಕದ ದೇಹಗಳನ್ನು ಸಹ ಒಳಗೊಂಡಿದೆ.
* “ಆಕಾಶ” ಎಂಬ ಪದವು ಭೂಮಿಯ ಮೇಲಿರುವ ನೀಲಿ ವಿಸ್ತಾರವನ್ನು ಮೋಡಗಳು ಮತ್ತು ನಾವು ಉಸಿರಾಡುವ ಗಾಳಿಯನ್ನು ಸೂಚಿಸುತ್ತದೆ. ಆಗಾಗ್ಗೆ ಸೂರ್ಯ ಮತ್ತು ಚಂದ್ರರನ್ನು "ಆಕಾಶದಲ್ಲಿ" ಎಂದು ಹೇಳಲಾಗುತ್ತದೆ.
* ಸತ್ಯವೇದದಲ್ಲಿನ ಕೆಲವು ಸಂದರ್ಭಗಳಲ್ಲಿ, “ಪರಲೋಕ” ಎಂಬ ಪದವು ಆಕಾಶ ಅಥವಾ ದೇವರು ವಾಸಿಸುವ ಸ್ಥಳವನ್ನು ಸೂಚಿಸುತ್ತದೆ.
## ಅನುವಾದ ಸಲಹೆಗಳು:
* ಮತ್ತಾಯನ ಪುಸ್ತಕದಲ್ಲಿನ “ಪರಲೋಕದ ರಾಜ್ಯ” ಕ್ಕೆ, “ಪರಲೋಕ” ಎಂಬ ಪದವನ್ನು ಇಟ್ಟುಕೊಳ್ಳುವುದು ಉತ್ತಮ, ಏಕೆಂದರೆ ಇದು ಮತ್ತಾಯನ ಸುವಾರ್ತೆಗೆ ವಿಶಿಷ್ಟವಾಗಿದೆ.
* “ಪರಲೋಕಗಳು” ಅಥವಾ “ಪರಲೋಕದ ದೇಹಗಳು” ಎಂಬ ಪದಗಳನ್ನು “ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು” ಅಥವಾ “ವಿಶ್ವದಲ್ಲಿನ ಎಲ್ಲಾ ನಕ್ಷತ್ರಗಳು” ಎಂದೂ ಅನುವಾದಿಸಬಹುದು.
* “ಪರಲೋಕದ ನಕ್ಷತ್ರಗಳು” ಎಂಬ ಮಾತನ್ನು “ಆಕಾಶದಲ್ಲಿನ ನಕ್ಷತ್ರಗಳು” ಅಥವಾ “ತಾರಾಂಗಣದ ನಕ್ಷತ್ರಗಳು” ಅಥವಾ “ವಿಶ್ವದಲ್ಲಿನ ನಕ್ಷತ್ರಗಳು” ಎಂದು ಅನುವಾದಿಸಬಹುದು.
(ಈ ಪದಗಳನ್ನು ಸಹ ನೋಡಿರಿ : [ದೇವರ ರಾಜ್ಯ](../kt/kingdomofgod.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಅರಸ.08:22-24](rc://*/tn/help/1ki/08/22)
* [1 ಥೆಸ್ಸ.01:8-10](rc://*/tn/help/1th/01/08)
* [1 ಥೆಸ್ಸ.04:17](rc://*/tn/help/1th/04/17)
* [ಧರ್ಮೋ.09:01](rc://*/tn/help/deu/09/01)
* [ಎಫೆಸ.06:9](rc://*/tn/help/eph/06/09)
* [ಆದಿ.01:01](rc://*/tn/help/gen/01/01)
* [ಆದಿ.07:12](rc://*/tn/help/gen/07/12)
* [ಯೋಹಾನ.03:13](rc://*/tn/help/jhn/03/12)
* [ಯೋಹಾನ.03:27](rc://*/tn/help/jhn/03/27)
* [ಮತ್ತಾಯ.05:18](rc://*/tn/help/mat/05/18)
* [ಮತ್ತಾಯ.05:46-48](rc://*/tn/help/mat/05/46)
## ಸತ್ಯವೇದ ಕತೆಗಳಿಂದ ಉದಾಹರಣೆಗಳು:
* __[04:02](rc://*/tn/help/obs/04/02)__ ಅವರು __ ಆಕಾಶವನ್ನು __ ತಲುಪುವುದಕ್ಕೆ ದೊಡ್ಡ ಗೋಪುರವನ್ನು ನಿರ್ಮಿಸುವುದಕ್ಕೆ ಆರಂಭಿಸಿದರು.
* __[14:11](rc://*/tn/help/obs/14/11)__ ಆತನು (ದೇವರು)__ ಪರಲೋಕದಿಂದ __ ಆಹಾರವನ್ನು ಕೊಟ್ಟನು, ಇದನ್ನು “ಮನ್ನ” ಎಂದು ಕರೆಯುತ್ತಾರೆ.
* __[23:07](rc://*/tn/help/obs/23/07)__ ಆಕಸ್ಮಿಕವಾಗಿ, ದೇವರನ್ನು ಸ್ತುತಿಸುವ ದೂತರಗಳೊಂದಿಗೆ ಆಕಾಶಗಳು ತುಂಬಿಸಲ್ಪಟ್ಟವು, ಅವೆಲ್ಲವೂ “__ ಪರಲೋಕದಲ್ಲಿರುವ __ ದೇವರಿಗೆ ಮಹಿಮೆ ಉಂಟಾಗಲಿ ಮತ್ತು ಭೂಮಿಯ ತನಗೆ ಇಷ್ಟವಾದ ಜನರಿಗೆ ಸಮಾಧಾನ ಉಂಟಾಗಲಿ” ಎಂದು ಹೇಳುತ್ತಿದ್ದವು.
* __[29:09](rc://*/tn/help/obs/29/09)__ “ನಿಮ್ಮ ಹೃದಯದಿಂದ ನಿಮ್ಮ ಸಹೋದರನನ್ನು ಕ್ಷಮಿಸದಿದ್ದರೆ ನಿಮ್ಮಲ್ಲಿರುವ ಪ್ರತಿಯೊಬ್ಬರಿಗೆ ನನ್ನ __ ಪರಲೋಕದ __ ತಂದೆ ಇದನ್ನೇ ಮಾಡುತ್ತಾನೆ” ಎಂದು ಯೇಸು ಹೇಳಿದರು.
* __[37:09](rc://*/tn/help/obs/37/09)__ ಆದನಂತರ ಯೇಸು __ ಪರಲೋಕದ __ ಕಡೆಗೆ ನೋಡಿ, “ತಂದೆಯೇ, ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕಾಗಿ ನಿಮಗೆ ವಂದನೆಗಳು” ಎಂದು ಹೇಳಿದನು.
* __[42:11](rc://*/tn/help/obs/42/11)__ ಆದನಂತರ ಯೇಸು __ ಪರಲೋಕಕ್ಕೆ __ ಹೋದನು, ಮತ್ತು ಅವರು ನೋಡುತ್ತಿರುವಾಗಲೇ ಮೇಘವು ಆತನನ್ನು ಆವರಿಸಿತು.
## ಪದ ಡೇಟಾ:
* Strong's: H1534, H6160, H6183, H7834, H8064, H8065, G932, G2032, G3321, G3770, G3771, G3772